ಕೊಪ್ಪಳ : ತಿರುಳ್ಗನ್ನಡ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನವು ಆಗಷ್ಟ ೨೬ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಜಯಸುತೆ ಕಾವ್ಯನಾಮದಿಂದ ಬರೆಯುತ್ತಿರುವ ಕೊಪ್ಪಳದ ಸ್ನೇಹಲತಾ ಜೋಶಿ ಆಯ್ಕೆಮಾಡಲಾಗಿದೆ ಎಂದು ತಿರುಳ್ಗನ್ನಡ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೆ ಹಾಗೂ ತಿರುಳ್ಗನ್ನಡ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
೧೯೭೩ ರಿಂದಲೇ ಪ್ರಜಾಮತ ಕರ್ಮವೀರ, ತರಂಗ, ಕಸ್ತೂರಿ, ವನಿತಾ, ರಾಗಸಂಗಮ, ವಿಕ್ರಮ, ಸುಧಾ, ಮಯೂರ ಪತ್ರಿಕೆಗಳಲ್ಲಿ ಸ್ನೇಹಲತಾ ಜೋಶಿಯವರ ಕಥೆ, ಕವಿತೆಗಳು ಪ್ರಕಟವಾಗಿವೆ. ಮುಂಬೈನಿಂದ ಪ್ರಕಟವಾಗುವ ಮೊಗವೀರ, ಅಕ್ಷಯ ಪತ್ರಿಕೆಗಳಲ್ಲಿಯೂ ಇವರ ಕಥೆಗಳು ಪ್ರಕಟವಾಗಿವೆ. ಧಾರವಾಡ, ಗುಲಬುರ್ಗಾ ಆಕಾಶವಾಣಿ ಕೇಂದ್ರಗಳಿಂದ ಹಲವಾರು ಕಿರು ನಾಟಕಗಳು ಪ್ರಸಾರಗೊಂಡಿವೆ. ರಾಗಸಂಗಮ ಪತ್ರಿಕೆಯು ಇವರ ಸರಿತಾ ಕಾದಂಬರಿಯನ್ನು ಸಂಪೂರ್ಣವಾಗಿ ಧಾರವಾಹಿ ರೂಪದಲ್ಲಿ ಪ್ರಕಟಿಸಿದೆ.
ವನಿತಾ ದೀಪಾವಳಿ ವಿಶೇಷಾಂಕದಲ್ಲಿ ಮಲ್ಲಿಗೆ ಮುಡಿಯೋ ಸೊಸೆ ಬರಲಿ ಕಥೆ ಬಹುಮಾನ ಪಡದಿದೆ. ವಿಕ್ರಮ ದಸರಾ ವಿಶೇಷಾಂಕದಲ್ಲಿ ನಿಗೂಡ ಕಥೆ ದ್ವೀತಿಯ ಬಹುಮಾನ ಪಡೆದಿದೆ.
೨೦೦೯ ರಲ್ಲಿ ಧೃವ ಮಿಲನ ಮತ್ತು ಸರಿತಾ ಎಂಬ ಕಿರು ಕಾದಂಬರಿಗಳು ಪುಸ್ತಕ ರೂಪದಲ್ಲಿ ಹೊರಬಂದಿವೆ. ೨೦೦೯ ರಲ್ಲಿ ಸುಳಿಮಿಂಚು ಕಥಾ ಸಂಕಲನ ಪ್ರಕಟಗೊಂಡಿದೆ.
೨೦೧೨ ರ ಮಾರ್ಚಿನಲ್ಲಿ ಬೆಂಗಳೂರಿನ ಸೃಷ್ಟಿ ವೆಂಚರ್ಸ ಸಂಸ್ಥೆ ಡಿ.ವಿ.ಜಿಯವರ ಸ್ಮರಣಾರ್ಥವಾಗಿ ಏರ್ಪಡಿಸಿದ ಕಥಾ ಸ್ಪರ್ಥೆ, ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗದ ಪದ್ಯಗಳನ್ನು ಆದರಿಸಿ ಬರೆದ ಕಥೆಗಳ ಸ್ಪರ್ಧೆಯಲ್ಲಿ ಕಿಟ್ಟಕ್ಕ ಕಥೆಗೆ ಬಹುಮಾನಗಳು ಪಡೆದಿದ್ದಾರೆ.
ಒಟ್ಟಾರೆಯಾಗಿ ಇವರ ಸಮಗ್ರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮಹೇಶಬಾಬು ಸುರ್ವೆ, ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.