ಎಸ್.ಎಫ್.ಐ ನ ರಾಜ್ಯ ಮಟ್ಟದ ಪತ್ರಿಕೆಯಾದ ವಿದ್ಯಾರ್ಥಿ ಧ್ವನಿ ಯನ್ನು ಕೊಪ್ಪಳ ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಅಧ್ಯಯನ ಶಿಬಿರದ ಮೂರನೆ ದಿನವಾದ ಇಂದು ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಬಿಡುಗಡೆ ಮಾಡಲಾಯಿತು. ಪತ್ರಿಕೆಯ ಬಿಡುಗಡೆಯನ್ನು ಶಿಬಿರದಲ್ಲಿ ಪಾಲ್ಘೋಂಡಿರುವ ಎಸ್.ಎಫ್.ಐ ನ ಅತ್ಯಂತ ಕಿರಿಯ ಸದಸ್ಯರಾದ ಕೊಪ್ಪಳದ ಮಂಜುನಾಥ್, ಗದಗ್ ನ ಸಂಗಮ್ಮ ಹಿರೇಮಠ. ಮಂಡ್ಯದ ನಟರಾಜ್. ಬಿಡುಗಡೆ ಗೊಳಿಸಿದ್ದು ವಿಶೇಷವಾಗಿತ್ತು.

ಕೇಂದ್ರ ಸಮಿತಿ ಸದಸ್ಯರಾದ ನವೀನ ಕುಮಾರ್ ಮಾತನಾಡಿ ಪತ್ರಿಕೆಯನ್ನು ನಡೆಸಲು ಬೇಕಾದ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಪಾದಕರಾದ ಅನಂತ್ ನಾಯ್ಕ್ ವಹಿಸಿದ್ದದರು. ಪ್ರಾಸ್ಥಾವಿಕವಾಗಿ ಪತ್ರಕೆಯ ಪ್ರಕಾಶಕರಾದ ಹುಳ್ಳಿ ಉಮೇಶ್ ಮಾಡಿದರು. ಉಪ ಸಂಪಾದಕ ಗುರುರಾಜ್ ದೇಸಾಯಿ, ವ್ಯವಸ್ಥಾಪಕರಾದ ನಾರಾಯಣ ಕಾಳೆ. ಸಿ.ಐ.ಟಿ.ಯು ನ ಎಸ್.ಎಸ್. ಹುಲಗಪ್ಪ. ಸಂಪಾದಕ ಮಂಡಳಿಯ ಜಗದೀಶ್ ಸೂರ್ಯ, ಯುವರಾಜ್. ಮುನಿರಾಜ್, ಚಿಕ್ಕರಾಜು. ವೇದಿಕೆಯ ಮೇಲೆ ಉಪಸ್ಥಿತರಿದ್ದರು. ನಿರೂಪಣೆಯನ್ನು ಕೋಲಾರದ ಅಂಬರೀಶ್ ಮಾಡಿದರೆ. ಹಾಸನದ ಪೃತ್ವಿ ಸ್ವಾಗತಿಸಿದರು. ಬಳ್ಳಾರಿಯ ಸೌಮ್ಯ ಕೊನೆಗೆ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.