PLEASE LOGIN TO KANNADANET.COM FOR REGULAR NEWS-UPDATES

ಮಕ್ಕಳು ರಜೆಯ ಮಜಾದಲ್ಲಿ  ತಲ್ಲಿನರಾಗಿ ಪುನ ಹಾಜರಾಗುವ ಸಂದರ್ಭದಲ್ಲಿ  ಭಾಗ್ಯನಗರದ ಜ್ಞಾನ ಬಂಧು  ಪ್ರಾಥಮಿಕ ಶಾಲಾ ಪ್ರಾರಂಭೋತ್ಸವನ್ನು ಮಾಡಲಾಯಿತು.ಗ್ರಾಮ ಪಂಚಾಯಿತ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀಬಾಯಿ ಬಾಲುಸಾ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಪಾಟೀಲ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿ  ಶಿಕ್ಷಕರು ಕಲಿಸಬೇಕಾದರೆ ಮೋದಲು  ಶಿಕ್ಷಕರು ವಿದ್ಯಾರ್ಥಿಯಾಗಿ  ಕಲಿತು ನಂತರ ವಿದ್ಯಾರ್ಥಿಗಳಿಗೆ  ಕಲಿಸಬೇಕು. ಶಿಕ್ಷಣ ನಿರಂತವಾಗಿರಬೇಕು.  ಶಿಕ್ಷಕರು ಯಾವತ್ತು ತಾಳ್ಮೆ ಕಳದುಕೋಳ್ಳಬಾರದೆಂದು ಶಿಕ್ಷಕರಿಗೆ  ಕಿವಿ ಮಾತು ಹೇಳಿದರು.
ಶಾಲೆಯ ಮಾರ್ಗದರ್ಶಕರಾದ ಡಿ.ಎಮ್. ಬಡಿಗೇರ  ಮಾತನಾಡಿ, ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು.  ಶಿಕ್ಷಕರ ಶ್ರಮವೇ ಶಾಲೆಯ ಏಳಿಗೆಗೆ ಕಾರಣ ಎಂದರು. ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ.ಕವಲೂರು ಮಾತನಾಡಿ, ನಮ್ಮ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಕಲಿಸುವಲ್ಲಿ ವಿನೂತನ  ವಿಶೇಷತೆಯನ್ನು  ಒಳಗೊಂಡಿರಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನಸ್ಸನ್ನು ಪರಿವರ್ತಿಸಿ ಕಲಿಸುವಲ್ಲಿ ಶಿಕ್ಷಕರು ಯಶ್ವಸಿಯಾದಾಗ  ಸಂಸ್ಥೆಯು ಸಾರ್ಥಕತೆಯನ್ನು ಹೊಂದುತ್ತದೆ ಎಂದು ಹೇಳಿದರು.
ತಾಲೂಕ ಪಂಚಾಯತ ಸದಸ್ಯರಾದ ಶ್ರೀನಿವಾಸ ಹ್ಯಾಟಿ, ಬಾಲುಸಾ ಭಾವಿಕಟ್ಟಿ ಹಾಗೂ ಗ್ರಾಂ.ಪಂ.ಉಪಧ್ಯಕ್ಷರಾದ ಶ್ರೀಧರ ಹುರಕಡ್ಲಿ ಇತರರು ಉಪಸ್ಥಿತರಿದ್ದರು.ಶಿಕ್ಷಕಿ ಕು. ಚಾಮುಂಡಿ ಮೇಟಿ ನಿರೂಪಿಸಿ ರು. ಮುಖ್ಯೋಪಾದ್ಯಾಯಿನಿ ಜ್ಯೋತಿ ಎಸ್.ಎಸ್. ಸ್ವಾಗತಿಸಿದರು. ಶಿಕ್ಷಕಿ ಕು. ರಾಧಾ ವಂದಿಸಿದರು.

30 May 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top