ವಿನೂತನವಾಗಿ ಸಸಿ ಕೊಡುವುದರ ಮುಖಾಂತರ ಉದ್ಘಾಟಿಸಲಾಯಿತು.
ಕೊಪ್ಪಳ : ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ದಿನಾಂಕ ೨೭/೦೫/೨೦೧೨ ರಂದು ಸಂಜೆ ೦೬ ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು.
ಇದರ ದಿವ್ಯ ಸಾನಿಧ್ಯವನ್ನು ಶ್ರೀ ಜಗದ್ಗುರು ವಿಜಯಮಹಾಂತ ಸ್ವಾಮಿಗಳು ಕುದರಿಮೊತಿ ಇವರು ವಹಿಸಿಕೊಂಡಿದ್ದರು. ಉದ್ಘಾಟನೆಯನ್ನು ನವೀನ ಕುಮರ ಈಶಣ್ಣ ಗುಳಗಣ್ಣವರ, ಜ್ಯೋತಿ ಬೆಳಗಿಸಿದರವರು ಶಿವಪುತ್ರಪ್ಪ ಬೆಲ್ಲದ್ ಅಧ್ಯಕ್ಷತೆಯನ್ನು ಬಸವನಗೌಡ ಪಾಟೀಲ ಕರವೇ ಜಿಲ್ಲಾ ಅಧ್ಯಕ್ಷರು, ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಬಿ.ಎಸ್.ಪಾಟೀಲ, ಮಹಾಂತೇಶ ಮಲ್ಲನಗೌಡ್ರ, ಸನ್ಮಾನಿತರಾದ ಶ್ರೀ ವಿರಣ್ಣ ನಿಂಗೋಜಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಕೊಪ್ಪಳ, ಹನಮಂತ ಕುಮಾರ ಮೂಧೋಳ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕುದರಿಮೋತಿ, ಹಾಗೂ ಜೀವನಸಾಬ ಬಿನ್ನಾಳ ಜಾನಪದ ಕಲಾವಿದರು, ಶರಣಯ್ಯ ಬಂಡಿ, ಗ್ರಾ.ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಇನ್ನೂ ಅನೇಕ ಮುಂತಾದವರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಸಭೆಯನ್ನು ಉದೇಶಿಸಿ ಮಾತನಾಡಿದ ಬಿ.ಎಸ್.ಪಾಟೀಲ, ಸರಕಾರಿ ಅಭಿಯೋಜಕರು ಇವರು ಮುಂದುವರೆದು ಮಾತನಾಡಿ ೩೭೧ ನೇ ಅನುಚ್ಛೆದ ಜಾಗೃತಿ ಮೂಡಿಸಿದರು.
ಮಹಾಂತೇಶ ಮಲ್ಲನಗೌಡ್ರ, ಇವರು ಕನ್ನಡ ನಾಡು -ನುಡಿಯ ಪರಂಪರೆಯ ಬಗ್ಗೆ ಮಾತನಾಡಿದರು.
ಜೀವನಸಾಬ ರವರ ಕನ್ನಡ ನಾಡಿನ ಬಗ್ಗೆ ಜಾನಪದ ಗೀತೆಗಳನ್ನು ಹಾಡಿ ಮನ ರಂಜಿಸಿದರು.
0 comments:
Post a Comment
Click to see the code!
To insert emoticon you must added at least one space before the code.