ಕೊಪ್ಪಳ :- ಶನಿವಾರದಂದು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ನಡೆದ ಈಶಾನ್ಯ ಪಧವೀದರ ಕ್ಷೇತ್ರದ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಭ್ಯರ್ಥಿಯಾದ ಶಿವಾನಂದ.ಎಸ್.ಭೀಮಳ್ಳಿ ಮಾತನಾಡಿ ರಾಜ್ಯದಲ್ಲಿ ಅಧಿಕಾರ ನೆಡೆಸುತ್ತಿರುವ ಬ್ರಷ್ಟ ಬಿ.ಜೆ.ಪಿ ಸರಕಾರವು ನಿಷ್ಟ್ರೀಯಗೊಂಡಿದೆ ಆಂತರಿಕ ಕಚ್ಚಾಟದಿಂದ ಅಧಿಕಾರದ ವ್ಯಾಮೋಹದಿಂದ ಮಾಜಿ ಮುಖ್ಯ ಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಸಂದಾನದಗೌಡರ ಮಧ್ಯ ದಿನವು ಹೊಸ ತಿಕ್ಕಾಟ್ ಪ್ರಾರಂಭಗೊಂಡಿದೆ. ಸರಕಾರದ ಸಾಧನೆ ಶೂನ್ಯವಾಗಿದ್ದು ಅಭಿವೃದ್ಧಿಯ ಹೆಸರಿನಲ್ಲಿ ಬ್ರಷ್ಟ ಸಚಿವರು ಮತ್ತು ಶಾಸಕರು ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಸಿ.ಬಿ.ಐ ತನಿಖೆಯಿಂದ ಬಂಧನದ ಬೀತಿಯಿದ್ದರು ಮತ್ತೆ ಮುಖ್ಯ ಮಂತ್ರಿಪಟ್ಟಕ್ಕೆ ಆಸೆ ಪಡುತ್ತಿರುವುದು ಮುರ್ಖತನದ ಪರಮಾವಾದಿಯಾಗಿದೆ. ಸಚಿವರು ರಾಜಿನಾಮೆ ಕೊಟ್ಟರು ಸಹ ಅಧಿಕಾರದ ದರಬಾರ ನಡೆಸುತ್ತಿದ್ದಾರೆ. ೨೫ ವರ್ಷಗಳ ನಂತರ ಈಶಾನ್ಯ ಪಧವೀದರ ಪ್ರಬುದ್ದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಾರಿ ಅಂತರದಿಂದ ಈ ಬಾರಿ ನನ್ನನ್ನು ಗೆಲ್ಲಿಸಲ್ಲಿದ್ದಾರೆ. ವೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಬಸವರಾಜ ಹಿಟ್ನಾಳ ಮಾತನಾಡಿ ಪಕ್ಷದ ಅಭ್ಯರ್ಥೀಯನ್ನು ಗೆಲ್ಲಿಸಲು ಪ್ರತಿಯೊಬ್ಬ ಕಾರ್ಯಕರ್ತನು ಮತದಾರನನ್ನು ವಲಿಸಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಎಸ್.ಬಿ.ನಾಗರಳ್ಳಿ, ಜುಲ್ಲುಖಾದರ ಖಾದ್ರಿ, ಮರ್ದಾನ ಅಲ್ಲಿ ಅಡ್ಡೆವಾಲೆ, ಶಾಂತಣ್ಣ ಮುದಗಲ್, ಹೆಚ್.ಎಲ್.ಹಿರೇಗೌಡ್ರ, ಎಸ್.ಬಿ.ರಡ್ಡಿ, ಇಂದಿರಾ ಭಾವಿಕಟ್ಟಿ, ಯಮನೂರಪ್ಪ.ಬಿ.ಸಿಂಗನಾಳ, ಜಾಕೀರ ಹುಸೇನ ಖಿಲ್ಲೇದಾರ ಈಶಪ್ಪ ಮಾದಿನೂರ, ನಾಗರಾಜ ಚಳ್ಳೊಳ್ಳಿ, ಅಂಬರೇಶ ಉಪಾಲಪೂರ, ಕಾಟನಪಾಷಾ, ಮಾನ್ವಿಪಾಷಾ ಅಜ್ಜಪ್ಪ, ಗವಿಸಿದ್ದಪ್ಪ ಕಂದಾರಿ, ಅಪ್ಸರ್‌ಸಾಬ, ಶಂಕುತಲಾ ಹುಡೆದಜಾಲಿ, ಗವಿಸಿದ್ದಪ್ಪ ಮುದಗಲ್, ನಾಗರಾಜ ಬಳ್ಳಾರಿ, ವೈಜನಾಥ ದಿವಟೂರು, ಬಸವರಡ್ಡಿ ಹಳ್ಳಿಕೇರಿ, ಯಂಕನಗೌಡರ, ಸುರೇಶ ದಾಸರಡ್ಡಿ, ವಿರುಪಾಕ್ಷಪ್ಪ ಕಟ್ಟಿಮನಿ, ಮುನಿರಸಿದ್ದಕಿ, ಶಿವಾನಂದ ಹೊದ್ಲುರ, ಗೋಲಿ ಮಹಮ್ಮದ್ದ, ಧಾರವಾಡ ರಫಿ, ಮಹಿಬುಬ ಅರಗಂಜಿ, ಜುಬೇರ್ ಹುಸೆನಿ, ಸಾವಿತ್ರಿ ಮುಜಂದಾರ ಸ್ವಾಗತಿಸಿ ಕೃಷ್ಣಾ ಇಟ್ಟಂಗಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.