PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿ. ಬೇವಿನಹಳ್ಳಿಯ ಕಾರ್ಖಾನೆಯ ಆಡಳಿತ ಮಂಡಳಿಯು ದಿನಾಂಕ : ೦೧-೦೨-೨೦೧೨ ರಿಂದ ಹೊಸ ಬೇಡಿಕೆ ಪಟ್ಟಿಯ ಒಪ್ಪಂದವನ್ನು ಜಾರಿಗೆ ತರಬೇಕಾತ್ತು. ಈ ವಿಷಯವಾಗಿ ಹಿಂದಿನ ಒಪ್ಪಂದದ ಮುಕ್ತಾಯದ ಅವಧಿಗೆ ೬ ತಿಂಗಳ ಮುಂಚೆ ವ್ಯವಸ್ಥಾಪಕ ನಿರ್ದೇಶಕರನ್ನೊಳಗೊಂಡಂತೆ ಆಡಳಿತ ಮಂಡಳಿಯವರನ್ನು ಭೇಟಿಯಾಗಿ ಮಾರುಕಟ್ಟೆಯ ಬೆಲೆಗಳು ಗಗನಕ್ಕೆ ಏರಿ ಕುಟುಂಬದ ಜೀವನ ನಿರ್ವಹಣೆ ಮಾಡುವುದು ಕಷ್ಟವಾದ ಕಾರಣ ಮಧ್ಯಂತರ ಪರಿಹಾರ ರೂಪದಲ್ಲಿ ಸಹಾಯ ಮಾಡಬೇಕೆಂದು ಕೋರಿಕೊಂಡಾಗ ವ್ಯವಸ್ಥಾಪಕ ನಿರ್ದೇಶಕರು ಹಿಂದಿನ ಬೇಡಿಕೆ ಪಟ್ಟಿಯ ಅವಧಿಯು ಇನ್ನೂ ಮುಗಿಯದೇ ಇರುವುದರಿಂದ ಈ ವಿಷಯವಾಗಿ ನಮ್ಮ ಕಂಪನಿಯ ಆಡಳಿತ ಮಂಡಳಿಗೆ ಮನವಿ ಸಲ್ಲಿಸುವುದು ಕಷ್ಟವಾಗಿರುವುದರಿಂದ ಇದು ಸಾಧ್ಯವಿಲ್ಲ ಎಂದರು. ಆದರೆ ಸಂಘದ ಪದಾಧಿಕಾರಿಗಳು ಬೆಲೆಯೇರಿಕೆಯ ಪರಿಸ್ಥಿತಿಯನ್ನು ಅರಿತುಕೊಂಡು ಹಲವಾರು ಕಂಪನಿಗಳ ಕಾರ್ಮಿಕರಿಗೆ ವೇತನದ ಹೆಚ್ಚಳವನ್ನು ನೀಡಿರುವ ಬಗ್ಗೆ ಗಮನಕ್ಕೆ ತಂದಾಗ ವ್ಯವಸ್ಥಾಪಕ ನಿರ್ದೇಶಕರು ಸಂಘವು ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದಲ್ಲಿ ಶೀಘ್ರದಲ್ಲಿ ಮತ್ತು ಅವಧಿ ಮುಗಿಯುವ ಮೊದಲೇ ಚರ್ಚೆ ನಡೆಸಿ ಇತ್ಯರ್ಥಪಡಿಸಲಾಗುವುದು ಎಂಬ ಭರವಸೆಯನ್ನು ನೀಡಿದರು. ಆದರೆ ಹಿಂದಿನ ವೇತನ ಒಪ್ಪಂದದ ಅವಧಿ ಮುಗಿದು ೧೬ ತಿಂಗಳುಗಳು ಕಳೆಯುತ್ತಲಿದ್ದರೂ ಸಹ ವೇತನ ಒಪ್ಪಂದವನ್ನು ಸೂಕ್ತ ರೀತಿಯಲ್ಲಿ ಇತ್ಯರ್ಥಗೊಳಿಸದೇ ಇರುವುದರಿಂದ ಅನಿವಾರ್ಯವಾಗಿ ಸಂಘವು ಹೋರಾಟದ ಹಾದಿ ಹಿಡಿಯಬೇಕಾಗಿದೆ. ಪರಿಶೀಲಿಸುವುದಾಗಿ ತಿಳಿಸಿದ್ದರೂ ಸಹ ಕಾರ್ಮಿಕರ ಕುಟುಂಬಗಳನ್ನು ಕಷ್ಟಕ್ಕೆ ಗುರಿಮಾಡಿ ಆಡಳಿತವರ್ಗ ತಿಳಿಸುವ ಮೊತ್ತಕ್ಕೆ ಒಪ್ಪಂದವನ್ನು ಉದ್ದೇಶದಿಂದ ಮಧ್ಯಂತರ ಪರಿಹಾರವನ್ನು ನಿರಾಕರಿಸುತ್ತಾ ಬಂದಿದ್ದಾರೆ.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿಯ (ಎ.ಐ.ಸಿ.ಸಿ.ಟಿ.ಯು) ರಾಜ್ಯಾಧ್ಯಕ್ಷರಾದ ಜಿ.ಭಾರಧ್ವಾಜ್ ಅವರು ಮಾತನಾಡಿ ೧೬ ತಿಂಗಳಿನಿಂದ ವೇತನ ಪರಿಷ್ಕರಣೆ ಮಾಡದಿರುವ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು. ಕಾರ್ಮಿಕ ಸಂಘವು ಶಾಂತಿಯುತವಾಗಿ ನಡೆಸುತ್ತಿರುವ ಧರಣಿಯನ್ನು ಬೆಂಬಲಿಸುತ್ತಾ, ಎ.ಐ.ಸಿ.ಸಿ.ಟಿ.ಯು. ಸಂಘಟನೆಯು ಸಂಪೂರ್ಣ ಬೆಂಬಲ ನೀಡುತ್ತದೆ. ಕೊಪ್ಪಳ ಭಾಗದಲ್ಲಿ ಎಲ್ಲಾ ಕಾರ್ಖಾನೆಗಳಿಂದ ಕಾರ್ಮಿಕರಿಗೆ ಹಾಗೂ ರೈತರಿಗೆ ಅನ್ಯಾವಾಗುತ್ತಿದೆ ಆದ್ದರಿಂದ ರೈತ ಕಾರ್ಮಿಕರ ಐಕ್ಯ ಹೋರಾಟದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಅವರ ಜೊತೆಗೆ ಧರಣಿ ಸ್ಥಳದಲ್ಲಿ ಹಾಜರಿದ್ದ ಗಂಗಾವತಿ ತಾಲೂಕ ಗುಮಾಸ್ತ ಸಂಘದ ಅಧ್ಯಕ್ಷರಾದ ಶಿವಯೋಗಿ ಅಂಗಡಿ, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ತಾಲೂಕಾಧ್ಯಕ್ಷರಾದ ಯೇಸು ಹೊಸಗೇರಿ, ಇಟ್ಟಂಗಿ ಭಟ್ಟಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಮಾಬುಸಾಬ, ಗುಮಾಸ್ತರ ಸಂಘದ ಸಂಚಾಲಕರಾದ ಎಂ. ರೇವಣಸಿದ್ದಪ್ಪನವರು ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
೧೩ನೇ ದಿನದ ಧರಣಿಯಲ್ಲಿ ಕಾರ್ಮಿಕರಾದ : ೧ ) ಮಂಜುನಾಥ ೨) ರಾಮಕೃಷ್ಣ ೩) ಬಸಣ್ಣ ಎಸ್.      ೪) ಅನಿಲ್‌ಕುಮಾರ್ ೫) ಗುರುರಾಜ ಎಸ್.ಎನ್. ೬) ಸೌದಾಗರ್ ೭) ಶಿವಾನಂದ ಮತ್ತಿಕಲ್ಲ ೮) ಯಮನಪ್ಪ ಮಡ್ಡಿ ೯) ರಹೀಮ್ ೧೦) ಭೋಗೇಶರಾವ್ ೧೧) ಆರ್.ಟಿ. ಜೋಶಿ ಮತ್ತಿನ್ನಿತರರು ಭಾಗವಹಿಸಿದ್ದರು. 
20 May 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top