: ಮೃತರ ಕುಟುಂಬಕ್ಕೆ ಸೈಯ್ಯದ್ ಭೇಟಿ, ಸಾಂತ್ವನ
ಕೊಪ್ಪಳ,ಮೇ.೨೩: ಹಂಪಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿಯಿಂದ ಕೊಪ್ಪಳ, ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಈ ರೈಲು ಆಂದ್ರದ ಪೆನಗೊಂಡ ಗ್ರಾಮದಲ್ಲಿ ಸೂಚನೆಗಳು ಸರಿಯಾದ ರೀತಿಯಲ್ಲಿ ತೀಳಿಸದಿರುವ ಪರಿಣಾಮ ಮಂಗಳವಾರ ಬೆಳಗಿನ ಜಾವ ೩:೧೫ ಕ್ಕೆ ರೈಲು ದುರಂತ ನಡೆದಿರುವ ಪ್ರಕರಣದಲ್ಲಿ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಮಕ್ಸುರಾ ಬೇಗಂ (೩೦), ಲಕ್ಷ್ಮಣ (೧೬) ಇವರು ಮೃತಪಟ್ಟಿದ್ದು, ಈ ಸುದ್ದಿ ತಿಳಿದ ಕೂಡಲೇ ಬಿಎಸ್‌ಆರ್ ಪಕ್ಷದ ಮುಖಂಡ ಹಾಗೂ ಸೈಯ್ಯದ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ.ಸೈಯ್ಯದ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ಧನ ವಿತರಿಸಿದರು.
ಮೃತರ ಕುಟುಂಬ ವರ್ಗದವರು ತಮ್ಮ ಭಾಗದ ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿ ಸೂಕ್ತ ಪರಿಹಾರ ದೊರಕಿಸಿಕೊಡಲು ಆಯಾ ಭಾಗದ ಜನಪ್ರತಿನಿಧಿಗಳಲ್ಲಿ ಮನವರಿಕೆ ಮಾಡಿ ಸರ್ಕಾರಕ್ಕೆ ಕೂಡ ಒತ್ತಾಯಿಸಲು ಮೃತರ ಕುಟುಂಬ ವರ್ಗದವರಿಗೆ ಕೆ.ಎಂ.ಸೈಯ್ಯದ್ ಸಲಹೆ ನೀಡಿದರು.
0 comments:
Post a Comment
Click to see the code!
To insert emoticon you must added at least one space before the code.