ಹೊಸದಿಲ್ಲಿ, ಮೇ ಪೆಟ್ರೋಲ್‌ನ ಬೆಲೆಯು ಇಂದು ಮಧ್ಯ ರಾತ್ರಿಯಿಂದ ಲೀಟರ್‌ಗೆ ರೂ. 7.50ರಷ್ಟು ತೀವ್ರ ಹೆಚ್ಚಳವಾಗಲಿದೆ.ರೂಪಾಯಿಯ ಬೆಲೆ ಡಾಲರ್‌ನೆದುರು ಭಾರೀ ಕುಸಿತ ಕಂಡಿರುವುದರಿಂದ ಈ ಹೆಚ್ಚಳ ವನ್ನು ನಿರೀಕ್ಷಿಸಲಾಗಿತ್ತು. ಬುಧವಾರ ರೂಪಾಯಿ ಯ ಬೆಲೆ ಡಾಲರ್‌ಗೆ 56ರಕ್ಕೆ ಕುಸಿದಿದೆ.ಸ್ಥಳೀಯ ತೆರಿಗೆ ಅಥವಾ ವ್ಯಾಟನ್ನು ಹೊರತುಪಡಿಸಿ ಪೆಟ್ರೋಲ್‌ನ ಬೆಲೆಯನ್ನು ಲೀ.ಗೆ ರೂ. 6.26ರಷ್ಟು ಏರಿಸಲು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ನಿರ್ಧರಿಸಿವೆ. ಇದರಿಂದಾಗಿ ದಿಲ್ಲಿಯಲ್ಲಿ ಪೆಟ್ರೋಲ್‌ನ ಬೆಲೆ ರೂ. 7.50ರಷ್ಟು ಹೆಚ್ಚಾಗಲಿದ್ದು, ಇದು ಭಾರೀ ಪ್ರಮಾಣದ ಬೆಲೆಯೇರಿಕೆಯಾಗಿದೆ.ದಿಲ್ಲಿಯಲ್ಲಿ ಪೆಟ್ರೋಲ್‌ನ ಬೆಲೆ ಪ್ರಕೃತ ಲೀ.ಗೆ ರೂ. 65.64 ಇದ್ದು, ಬೆಲೆ ಹೆಚ್ಚಳದಿಂದಾಗಿ ಅದು ರೂ. 73.14ಕ್ಕೆ ತಲುಪಲಿದೆ. ಪೆಟ್ರೋಲ್‌ನ ಬೆಲೆಯನ್ನು ಕನಿಷ್ಠ ರೂ. 4ರಷ್ಟು ಏರಿಸುವಂತೆ ತೈಲ ಸಂಸ್ಥೆಗಳು ಸರಕಾರ ವನ್ನು ಕೋರಿದ್ದವು.ತಕ್ಷಣವೇ ತೈಲ ಬೆಲೆ ಏರಿಸುವ ಅಗತ್ಯವಿದೆ ಯೆಂದು ಪೆಟ್ರೋಲಿಯಂ ಸಚಿವ ಎಸ್.ಜೈಪಾಲ ರೆಡ್ಡಿ ಮಂಗಳವಾರ ಹೇಳಿದ್ದರಾದರೂ ಯಾವಾಗಿನಿಂದ ಎಂಬುದನ್ನು ತಿಳಿಸಿರಲಿಲ್ಲ.
2010ರ ಜೂನ್‌ನಲ್ಲಿ ಸರಕಾರವು ಪೆಟ್ರೋಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿತ್ತು. ಕಳೆದ ನ.4ರಂದು ಪೆಟ್ರೋಲ್ ಬೆಲೆಯನ್ನು ಕೊನೆಯ ಬಾರಿ ಹೆಚ್ಚಿಸಲಾಗಿತ್ತು.ಡೀಸೆಲ್, ಸೀಮೆಣ್ಣೆ ಹಾಗೂ ಅಡುಗೆ ಅನಿಲದ ಬೆಲೆಯನ್ನು 2011ರ ಜೂನ್‌ನಲ್ಲಿ ಕೊನೆಯ ಬಾರಿ ಏರಿಸಲಾಗಿದೆ. 2012ರ ಮಾರ್ಚ್‌ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ತೈಲ ಸಂಸ್ಥೆಗಳು ಪೆಟ್ರೋಲ್ ಮಾರಾಟದಲ್ಲಿ ರೂ. 4,860 ಕೋಟಿ ನಷ್ಟ ಅನುಭವಿಸಿತು. ಈಗಲೂ ಲೀಟರ್ ಪೆಟ್ರೋಲಿನ ಮೇಲೆ ರೂ. 6.28 ನಷ್ಟವಾಗುತ್ತಿದೆ.
0 comments:
Post a Comment
Click to see the code!
To insert emoticon you must added at least one space before the code.