PLEASE LOGIN TO KANNADANET.COM FOR REGULAR NEWS-UPDATES


 ನವದೆಹಲಿ,ಏ.20:ಕಾಂಗ್ರೆಸ್ ವಕ್ತಾರ,ಸಂಸದ ಮತ್ತು ಖ್ಯಾತ ವಕೀಲ 59ವರ್ಷದ ಅಭಿಷೇಕ್ ಮನು ಸಿಂಘ್ವಿ ಅವರು 45ವರ್ಷದ ಸುಂದರ,ಶ್ರೀಮಂತ ಮಹಿಳೆಯೊಂದಿಗೆ ತಮ್ಮ ಚೇಂಬರಿನಲ್ಲಿ ನಡೆಸಿದ್ದಾರೆನ್ನಲಾದ ಕಾಮಕೇಳಿಯ ವಿಡಿಯೋ ಸಾಮಾಜಿಕ ತಾಣಗಳಲ್ಲೆಲ್ಲ ಹರಿದಾಡುತ್ತಿದ್ದು, ಈ ಹಗರಣ ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ.

ಈ ವಿಡಿಯೋ ಗುರುವಾರ ಯುಟ್ಯೂಬ್‌ನಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ಭಾರೀ ಸಂಚಲನವುಂಟು ಮಾಡಿತ್ತು.ಆ ವಿಡಿಯೋವನ್ನು ಯಾವುದೇ ಮಾಧ್ಯಮದಲ್ಲಿ ಪ್ರಕಟಿಸಬಾರದು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದ ಮೇಲೆ ಯುಟ್ಯೂಬ್‌ನಿಂದ ಕಿತ್ತುಹಾಕಲಾಗಿತ್ತು.ಆದರೆ,12ನಿಮಿಷ 40ಸೆಕೆಂಡುಗಳ ಕಾಲ ಇರುವ ಆ ವಿಡಿಯೋವನ್ನು, ಸಿಂಘ್ವಿಯನ್ನು ಬ್ಲಾಕ್‌ಮೇಲ್ ಮಾಡುತ್ತಿರುವವ ಫೇಸ್ ಬುಕ್‌ನಲ್ಲಿ ಮತ್ತೆ ಪ್ರಕಟಿಸಿದ್ದಾನೆ.

"ಈ ಎಂಎಂಎಸ್ ಕಿತ್ತುಹಾಕಿದರೆ ಸಿಂಘ್ವಿ ಭಾಗಿಯಾಗಿರುವ ಇನ್ನಷ್ಟು ಅಶ್ಲೀಲವಾಗಿರುವ ವಿಡಿಯೋವನ್ನು ಪ್ರಕಟಿಸುವುದಾಗಿ"ಅದನ್ನು ಚಿತ್ರಿಸಿರುವ ಸಿಂಘ್ವಿ ಅವರ ಮಾಜಿ ವಾಹನ ಚಾಲಕ ಮುಕೇಶ್ ಲಾಲ್ ಬೆದರಿಕೆ ಹಾಕಿದ್ದಾನೆ.ಆ ವಿಡಿಯೋದಲ್ಲಿ ಅಭಿಷೇಕ್ ಮನು ಸಿಂಘ್ವಿ ಸುಂದರ ಮಹಿಳೆಯೊಂದಿಗೆ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆ ನಡೆಸಿರುವುದು ಅತ್ಯಂತ ಸ್ಪಷ್ಟವಾಗಿದೆ. ಸಿಂಘ್ವಿ ಮತ್ತು ಚಾಲಕನ ನಡುವೆ ರಾಜಿಯಾಗಿರುವ ಸಾಧ್ಯತೆಯೂ ಇದೆ.

ಈ ಘಟನೆಯ ಬಗ್ಗೆ ಟ್ವಿಟ್ಟರ್‌ನಲ್ಲಿ ಕೂಡ ಸಾಕಷ್ಟು ಚರ್ಚೆ ನಡೆದಿದೆ.ಕಾಂಗ್ರೆಸ್ ವಕ್ತಾರರಾಗಿ ಪ್ರತಿದಿನ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಿಂಘ್ವಿ ಇನ್ನೆಂದೂ ದೂರದರ್ಶನದಲ್ಲಿ ಮುಖ ತೋರಿಸಲಾರರು ಎಂಬ ಸಂದೇಶಗಳು ಪ್ರಕಟವಾಗಿದ್ದವು.ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿದ್ದರೇನು,ಪರಸ್ಪರ ಒಪ್ಪಿಗೆಯಿಂದ ನಡೆಸಿದ್ದರೇನು,ಸಿಂಘ್ವಿ ಅವರು ಕಾಂಗ್ರೆಸ್ ಘನತೆಗೆ ಮಸಿ ಬಳಿದಿದ್ದಾರೆ ಎಂಬ ಸಂದೇಶಗಳನ್ನು ಕೂಡ ಕೆಲವರು ಬರೆದಿದ್ದರು.

45ರಿಂದ 50 ಹರೆಯದ ಆ ಮಹಿಳೆಯನ್ನು ನಾನು ಬಲ್ಲೆ. ಹಣಕ್ಕಾಗಿ ಸಿಂಘ್ವಿಯನ್ನು ಆಕೆ ಬಳಸಿಕೊಳ್ಳಲು ಸಾಧ್ಯವಿಲ್ಲ.ಯಾಕೆಂದರೆ,ಆಕೆ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಮಹಿಳೆ ಎಂದು ದೆಹಲಿಯ ವಕೀಲೆ ಸ್ವಾತಿ ಸಿಂಗ್ ಮಲಿಕ್ ಟ್ವೀಟ್ ಮಾಡಿದ್ದರು.ಆದರೆ, ಸಿಂಘ್ವಿಯವರು, ಆ ಅಶ್ಲೀಲ ವಿಡಿಯೋದಲ್ಲಿರುವವರು ತಾವಲ್ಲ,ತಮಗೆ ಮಸಿ ಬಳಿಯಲೆಂದು ಅದನ್ನು ಯಾರೋ ಬೇಕೆಂತಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಆ ವಿಡಿಯೋವನ್ನು ವೀಕ್ಷಿಸಿದರೆ,ಅದು ಸೃಷ್ಟಿಸಿದ್ದಲ್ಲ ಎಂದು ಮೇಲು ನೋಟಕ್ಕೆ ಕಂಡುಬರುತ್ತದೆ.

ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದಕ್ಕಾಗಿ ಸಚಿವರ ಮೇಲೆ ಆರೋಪ ಬಂದಾಗ,ಬಿಜೆಪಿ ಮೇಲೆ ಮುಗಿಬಿದ್ದಿದ್ದ ಕಾಂಗ್ರೆಸ್,ಅಶ್ಲೀಲ ಎಂಎಂಎಸ್ ತುಣುಕಿನಲ್ಲಿ ಕಾಣಿಸಿಕೊಂಡಿರುವ ಅರವತ್ತರ ಅರುಳುಮರುಳಿಗೆ ಒಂದೇ ವರ್ಷ ಕಡಿಮೆಯಿರುವ ಅಭಿಷೇಕ್ ಮನು ಸಿಂಘ್ವಿ ವಿರುದ್ಧ ಕ್ರಮ ತೆಗೆದುಕೊಳ್ಳುವುದೆ ಎಂದು ಬಿಜೆಪಿ ನಾಯಕರು ಪ್ರಶ್ನಿಸುತ್ತಿದ್ದಾರೆ
20 Apr 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top