PLEASE LOGIN TO KANNADANET.COM FOR REGULAR NEWS-UPDATES


ತನ್ನ ರಾಜಕೀಯ ಕ್ಷೇತ್ರದಲ್ಲಿ ಏಗಲಿಕ್ಕಾಗದ ಶೇಖರಗೌಡ ಮಾಲೀಪಾಟೀಲ್ ಸಾಹಿತ್ಯ ಕ್ಷೇತ್ರಕ್ಕೆ ಬಂದು ರಾಜಕೀಯ ಮಾಡುತ್ತಾ ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಜಿಲ್ಲಾ, ತಾಲುಕು ಸಮ್ಮೇಳನಗಳನ್ನು ಮಾಡುವುದನ್ನೇ ದಂಧೆಯನ್ನಾಗಿ ಮಾಡಿಕೊಂಡು ಸ್ಮರಣ ಸಂಚಿಕೆಗಳಿಗೆ ಜಾಹೀರಾತುಗಳನ್ನು ಪಡೆದು ಸ್ಮರಣ ಸಂಚಿಕೆಗಳನ್ನೇ ತರದ ಇವರು ಎಂಥ ನೈತಕತೆಯುಳ್ಳವರು? ಅಖಿಲ ಭಾರತ ಮಟ್ಟದ ಗಂಗಾವತಿ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆಯ ರಕ್ಷಾಪುಟಗಳನ್ನು ಮಾತ್ರ ಬಿಡುಗಡೆ ಮಾಡಿಸಿದವರಿಗೆ ಎಂಥ ನೈತಿಕತೆ ಇದೆ?
ಸಮ್ಮೇಳನ ಮುಗಿದ ಮೇಲೆ ಸ್ಮರಣ ಸಂಚಿಕೆ ಡಿಟಿಪಿ ಮಾಡಿಸಿ ತರಿಸಲು ಒತ್ತಾಯಿಸಿದ್ದೇವೆ. ಡಿಟಿಪಿ ಪ್ರತಿ ತರಿಸಿಕೊಟ್ಟರೆ ಫ್ರೂಫ್ ರೀಡಿಂಗ್ ಮಾಡಲು ಸಾಧ್ಯ. ಸ್ಮರಣ ಸಂಚಿಕೆ ಮುದ್ರಿಸುವವರಿಗೆ ಹಣ ಸಂದಾಯವಾಗದೆ ಅದ್ಹೇಗೆ ಲೆಕ್ಕಪತ್ರ ಮುಗಿಯುತ್ತದೆ?
ಸಮ್ಮೇಳನದಲ್ಲಿ ಸಂವಿಧಾನದ ೩೭೧ನೇ ಕಲಂನ ಬಗ್ಗೆ ಚರ್ಚೆ ಮಾಡಲು ಒತ್ತಾಯಿಸಿದವರಲ್ಲ ರಾಘವೇಂದ್ರ ಕುಷ್ಟಗಿ, ರಜಾಕ ಉಸ್ತಾದ, ಸರಕಾರಿ ವಕೀಲರಾದ ಬಿ.ಎಸ್.ಪಾಟೀಲ್ ಮುಖ್ಯರು. ಇವರೆಲ್ಲಾ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯವರೇ. ನಮ್ಮವರು ಆ ಕೆಲಸ ಮಾಡುವಾಗ ಅದೇ ಕೆಲಸವನ್ನು ನಾವು ಮಾಡುವುದರಲ್ಲಿ ಅರ್ಥವಿಲ್ಲ. ಕಳೆದ ೧೫ ವರ್ಷಗಳಿಂದ ನಾವು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯಿಂದ ಸಂವಿಧಾನದ ೩೭೧ನೇ ಕಲಂ  ಜಾರಿಗೊಳಿಸಲು ಒತ್ತಾಯಿಸಿ ಹೋರಾಡುವಾಗ ಶೇಖರಗೌಡ ಮಾಲೀಪಾಟೀಲ್ ಒಮ್ಮೆಯೂ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಚಂಪಾ ಅವರು ೩೭೧ನೇ ಕಲಂ ಜಾರಿಗೆ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದ ಮೇಲೂ ಹೈದ್ರಾಬಾದ್ ಕರ್ನಾಟಕ ವಿರೋಧಿ ಹೇಗೆ?
ಕನ್ನಡ ಸಾಹಿತ್ಯ ಪರಿಷತ್ತಿಗೆ ೧೦೦ ವರ್ಷಗಳು  ತುಂಬುತ್ತಿರುವಾಗ ಚಂಪಾರಂತಹ ಹಿರಿಯ ಸಾಹಿತಿ, ಹೋರಾಟಗಾರರು ಪ್ರಸ್ತುತರಾಗುತ್ತಾರೆಯೇ ಹೊರತು ಶೇಖರಗೌಡರಂತಹ ರಾಜಕಾರಣಿಯಲ್ಲ. ರಾಜಕಾರಣಿ ನೈತಿಕತೆಯ ಬಗ್ಗೆ ಮಾತನಾಡಿದರೆ ಜನ ನಗುತ್ತಾರೆ ಅಷ್ಟೇ.
ಅಲ್ಲಮಪ್ರಭು ಬೆಟ್ಟದೂರು

26 Apr 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top