PLEASE LOGIN TO KANNADANET.COM FOR REGULAR NEWS-UPDATES


ಶಿವಮೊಗ್ಗ, ಮಾ.30: ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಮಾ. 31ರಂದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿಮಾನಿಗಳ ಬಳಗ ಆಯೋಜಿಸಿ ರುವ ಸನ್ಮಾನ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಪ್ರಮುಖ ಸಚಿವರು ಗೈರು ಹಾಜರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಮೂಲಗಳ ಪ್ರಕಾರ, ಕಾರ್ಯಕರ್ತರಿಗೆ ಈ ಸಮಾವೇಶಕ್ಕೆ ತೆರಳದಂತೆ ಬಿಜೆಪಿಯ ಕೆಲವು ಮುಖಂಡರು ಹಾಗೂ ಸಂಘಪರಿವಾರ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಕೆಲವು ಸಚಿವ ಸಂಪುಟ ಸದಸ್ಯರು ಸಮಾರಂಭಕ್ಕೆ ಭಾಗವಹಿಸುತ್ತಿಲ್ಲ. ಈ ಸಮಾರಂಭಕ್ಕೆ ಸರಿಸುಮಾರು 2 ಲಕ್ಷ ಜನರನ್ನು ಸೇರಿಸುವ, ಇರಾದೆ ಯನ್ನು ಬಿಎಸ್‌ವೈ ಅಭಿಮಾನಿಗಳ ಬಳಗ ಹೊಂದಿದೆ. ಜಿಲ್ಲೆಯ ಇತಿ ಹಾಸದಲ್ಲಿಯೇ, ಇದೊಂದು ದಾಖ ಲೆಯ ಸಮಾವೇಶವನ್ನಾಗಿಸಲು ಯತ್ನಿಸುತ್ತಿದ್ದಾರೆ.
30 Mar 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top