PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ ನಗರದಲ್ಲಿರುವ ಅರ್ಹ ನಿವೇಶನ ರಹಿತರಿಗೆ ಜನಪ್ರತಿನಿಧಿಗಳು ಮತ್ತು ಪ್ರತಿ ವಾರ್ಡ್‌ನಲ್ಲಿರುವ ಹಿರಿಯ ಸಮ್ಮುಖದಲ್ಲಿಯೇ ಫಲಾನುಭವಿಗಳನ್ನು ಆಯ್ಕೆ ಮಾಡಿ, ಶೀಘ್ರದಲ್ಲಿಯೇ ನಾಲ್ಕು ಸಾವಿರ ನಿವೇಶನಗಳನ್ನು ವಿತರಿಸಲಾಗುವುದು ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.
  ಕೊಪ್ಪಳ ಕೃಷಿ ಮಾರುಕಟ್ಟೆ ಸಮಿತಿಯ ಹಮಾಲರ ಕಾಲೋನಿ ನಿವೇಶನ ನಿರ್ಮಾಣದ ಕಾಮಗಾರಿಗೆ ಹೂವಿನಾಳ ಗ್ರಾಮದ ಬಳಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
  ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಸತಿ ಸಚಿವ ಸೋಮಣ್ಣ ಅವರಿಗೆ ಸಲ್ಲಿಸಿದ್ದ ಮನವಿಗೆ ವಸತಿ ಸಚಿವರು ಸ್ಪಂದಿಸಿದ್ದು, ಹಮಾಲರ ನಿವೇಶನ ಒಳಗೊಂಡು, ನಗರದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಒಟ್ಟು ೧೦೨ ಎಕರೆ ಜಮೀನು ಖರೀದಿಗೆ ಮಂಜೂರಾತಿ ನೀಡಿದ್ದಾರೆ, ಅವುಗಳಲ್ಲಿ ಪಾರದರ್ಶಕವಾಗಿ ಸೂರು ರಹಿತರಿಗೆ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಲಾಗುವುದು, ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಮನೆ ನಿರ್ಮಾಣದ ವೆಚ್ಚವನ್ನು ೭೫ ಸಾವಿರಕ್ಕೆ ಹೆಚ್ಚಿಸಿರುವ ಕ್ರಮ ಶ್ಲಾಘನೀಯವಾಗಿದ್ದು, ಇದರಿಂದ ಉತ್ತಮ ಗುಣಮಟ್ಟದ ಮನೆ ನಿರ್ಮಿಸಲು ಸಹಕಾರಿಯಾಗಲಿದೆ.  ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜು ಕಾರ್ಯದ ಕಾಮಗಾರಿ ಪ್ರಾರಂಭವಾಗಲಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು.  ಹಮಾಲರು ಅತ್ಯಂತ ಶ್ರಮಜೀವಿಗಳಾಗಿದ್ದು, ಸುತ್ತಲಿನ ಹಳ್ಳಿಗಳಿಂದ ದುಡಿಮೆಗಾಗಿ ನಗರಕ್ಕೆ ಆಗಮಿಸುವವರಿಗೆ ಸೂರು ದೊರೆತಲ್ಲಿ, ಅವರ ಜೀವನ ಹಸನಾಗಲಿದೆ ಎಂದು ಶಾಸಕ ಸಂಗಣ್ಣ ಕರಡಿ ಹೇಳಿದರು.
  ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಶರಣಪ್ಪ ಸಜ್ಜನ, ಭೂನ್ಯಾಯ ಮಂಡಳಿ ಸದಸ್ಯ ಹಾಲೇಶ್ ಕಂದಾರಿ, ಹಮಾಲರ ಸಂಘದ ಅಧ್ಯಕ್ಷ ರಾಜಾ ಸಾಬ್, ಕಾರ್ಯದರ್ಶಿ ರಾಮಣ್ಣ ಕಲ್ಲನವರ್, ಮುಖಂಡರುಗಳಾದ ಆನಂದ ಆಡೂರ, ನಿಂಗಪ್ಪ ಬಡಿಗೇರಿ, ಹನುಮಂತಪ್ಪ ನಾಯಕ್, ರತ್ನಮ್ಮ, ಬಸವರಾಜ ಮಿಠಾಯಿ, ಈರಣ್ಣ ದೊಡ್ಡಬಸಪ್ಪ, ಮರೇಗೌಡ, ಸಿದ್ದಪ್ಪ ಕಂದಾರಿ, ಮರಿಯಪ್ಪ ಬೆಲ್ಲದ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಪರಮೇಶಪ್ಪ ಗಾಳಿ ಮೊದಲಾದವರು ಉಪಸ್ಥಿತರಿದ್ದರು

25 Mar 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top