.jpg)
ನಗರದ ಸಾಹಿತ್ಯ ಭವನದಿಂದ ಕಾಲ್ನಡಿಗೆಯ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿದ ನೂರಾರು ಕ.ಸಾ.ಪ.ಆಜೀವ ಸದಸ್ಯರು ಹಾಗೂ ಸಾಹಿತ್ಯಾಸಕ್ತರು ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ ಬಿ.ಎಲ್.ಗೋಟೆ ಅವರಿಗೆ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ತಹಸೀಲ್ದಾರ ಕಚೇರಿ ಆವರಣದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಸಾಹಿತಿ,ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ, ಕೊಪ್ಪಳ ಜಿಲ್ಲೆಯಾಗಿ ರೂಪುಗೊಂಡ ಬಳಿಕ ಕ.ಸಾ.ಪ.ಕ್ಕೆ ನಡೆಯುತ್ತಿರುವ ಐದನೇ ಚುನಾವಣೆ ಇದಾಗಿದೆ.ಮೊದಲ ಎರಡು ಅವಧಿಗಳಿಗೆ ಯಲಬುರ್ಗಾ ತಾಲ್ಲೂಕಿನವರು,ನಂತರದ ಎರಡು ಅವಧಿಗಳಿಗೆ ಕುಷ್ಟಗಿ ತಾಲ್ಲೂಕಿನ ಶೇಖರಗೌಡ ಮಾಲಿಪಾಟೀಲರು ಅಧ್ಯಕ್ಷರಾಗಿ ಆಯ್ಕೆಯಾಗಿ ಕನ್ನಡದ ಕೆಲಸ ಮಾಡಿದ್ದಾರೆ.ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದವರಿಗೆ ಇದೇ ಮೊದಲ ಬಾರಿಗೆ ಸ್ಪರ್ಧಿಸುವ ಅವಕಾಶ ದೊರೆತಿದೆ.ಇದಕ್ಕೆ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳ ಸದಸ್ಯರು ಸಹಮತ ವ್ಯಕ್ತಪಡಿಸಿ ರಾಜಶೇಖರ ಆಂಗಡಿಯವರನ್ನು ಕಣಕ್ಕಿಳಿಸಿದ್ದಾರೆ.ರಾಜಶೇಖರ ಉತ್ತಮ ಸಂಘಟನಾಕಾರ,ಸ್ನೇಹಜೀವಿಯಾಗಿರುವದು ಅವರ ಗೆಲುವಿಗೆ ಸಹಕಾರಿಯಾಗಲಿದೆ.ಜಿಲ್ಲೆಯಲ್ಲಿ ಸುಮಾರು ಮೂರು ಸಾವಿರದಷ್ಟು ಕ.ಸಾ.ಪ.ಆಜೀವ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.ಎಲ್ಲರೂ ರಾಜಶೇಖರ ಅಂಗಡಿಯವರನ್ನು ಬೆಂಬಲಿಸಿ ಗೆಲ್ಲಿಸಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಕ.ಸಾ.ಪ.ಕ್ಕೆ ೨೬ ರಂದು ಶೇಖರಗೌಡ ನಾಮಪತ್ರ
ಇದೇ ಮೊದಲ ಬಾರಿಗೆ ಕ.ಸಾ.ಪ. ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕೊಪ್ಪಳ ಜಿಲ್ಲಾ ಕ.ಸಾ.ಪ.ನಿಕಟಪೂರ್ವ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಸೋಮವಾರ ದಿ.೨೬ ರಂದು ಬೆಂಗಳೂರಿನ ಕ.ಸಾ.ಪ.ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ವಿವಿಧ ಜಿಲ್ಲೆಗಳ ಕ.ಸಾ.ಪ.ಆಜೀವ ಸದಸ್ಯರು ,ಸಾಹಿತಿಗಳು ತಮ್ಮನ್ನು ಬೆಂಬಲಿಸಿ ಉತ್ತರ ಕರ್ನಾಟಕದ ಅಭ್ಯರ್ಥಿಯ ಗೆಲುವಿಗೆ ಸಹಕರಿಸಬೇಕೆಂದು ಶೇಖರಗೌಡ ಮಾಲಿಪಾಟೀಲ ಮನವಿ ಮಾಡಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.