ಕೊಪ್ಪಳದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಕಚೇರಿಯಲ್ಲಿ ಕ್ಷೇತ್ರಾಧಿಕಾರಿ ಕಂ ಎಮ್.ಐ.ಎಸ್. ಅಧಿಕಾರಿ ಮತ್ತು ಅಕೌಂಟೆಂಟ್ ಕಂ ಸ್ಟೆನೋ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕ್ಷೇತ್ರಾಧಿಕಾರಿ ಕಂ ಎಮ್.ಐ.ಎಸ್. ಅಧಿಕಾರಿ ಹುದ್ದೆಗೆ ಸಮಾಜಶಾಸ್ತ್ರ/ ಅಭಿವೃದ್ಧಿ ಅಧ್ಯಯನ/ ಸಮಾಜಕಾರ್ಯ ವಿಷಯಗಳಲ್ಲಿ ಪದವಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು (ಎಂ.ಎಸ್. ಆಫೀಸ್, ಇಂಟರ್‌ನೆಟ್) ಮಾಸಿಕ ಗೌರವಧನ ರೂ.೮೦೦೦. ಅಕೌಂಟೆಂಟ್ ಕಂ ಸ್ಟೆನೋ ಹುದ್ದೆಗೆ ಬಿಕಾಂ ಪದವಿ ಹೊಂದಿರಬೇಕು. ಕಂಪ್ಯೂಟರ್ ಟೈಪಿಂಗ್ ತರಬೇತಿ ಹೊಂದಿರಬೇಕು, ಮಾಸಿಕ ಗೌರವಧನ ರೂ. ೭೦೦೦. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಟ ವಯೋಮಿತಿ ೪೦ ವರ್ಷ. ಸರ್ಕಾರಿ ಕೆಲಸದಿಂದ ವಜಾಗೊಂಡಿರುವ, ನಿವೃತ್ತಿ ಹೊಂದಿರುವ ಮತ್ತು ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಮಾ. ೦೨ ರ ಒಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
0 comments:
Post a Comment
Click to see the code!
To insert emoticon you must added at least one space before the code.