ಕೊಪ್ಪಳ : ನಾನೊಬ್ಬ ಸಾಹಿತ್ಯದ ಪರಿಚಾರಕ . ಸಾಮಾನ್ಯ ಓದುಗನಾಗಿ,ಕಾರ್‍ಯಕರ್ತನಾಗಿ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅಲ್ಲಮಪ್ರಭು ಬೆಟ್ಟದೂರು, ವಿಠ್ಠಪ್ಪ ಗೋರಂಟ್ಲಿಯವರು ಮೊದಲಿನಿಂದಲೂ ನನಗೆ ಮಾರ್ಗದರ್ಶಕರು. ಈಗ ಹಿರಿಯರ ಒತ್ತಾಸೆಯ ಮೇರೆಗೆ ಈ ಸಲದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ತಮ್ಮೆಲ್ಲರ ಮಾರ್ಗದರ್ಶನ,ಸಹಕಾರ ಅಗತ್ಯವಿದೆ. ನನ್ನನ್ನು ಆಯ್ಕೆ ಮಾಡಿದರೆ ಗ್ರಾಮೀಣ ಮಟ್ಟದಲ್ಲಿಯೂ ಸಾಹಿತ್ಯ ಮತ್ತು ಸಾಹಿತ್ಯ ಪರಿಷತ್ ನ ಕೆಲಸಗಳನ್ನು ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಕಸಾಪದ ಗೌರವ ಕೋಶಾಧ್ಯಕ್ಷ ರಾಜಶೇಖರ ಅಂಗಡಿ ಹೇಳಿದರು.
ಇದಕ್ಕೂ ಮೊದಲು ಕವಿಸಮಯದಲ್ಲಿ ಅಶುಕವಿತೆ - ಸ್ಥಳದಲ್ಲಿಯೇ ಕವನ ಬರೆಯುವ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸದನದಲ್ಲಿ ನಡೆದ ಆಶ್ಲೀಲ ಚಿತ್ರ ವೀಕ್ಷಣೆ ಕುರಿತು ಕವನ ರಚಿಸಲಾಯಿತು. ಡಾ.ಎಸ್.ಸಿ.ದಾನರಡ್ಡಿ- ಜೀವನ ಪಾಠ, ಮಂಜುನಾಥ ಡೊಳ್ಳಿನ- ಹಳದಿ ಮನಸ್ಸುಗಳು, ನೀಲಿ ಚಿತ್ರಗಳು, ವಿಠ್ಠಪ್ಪ ಗೋರಂಟ್ಲಿ- ನೀಲಿ ಚಿತ್ರ, ಶ್ರೀನಿವಾಸ ಚಿತ್ರಗಾರ - ನೀಲಿ, ಎನ್.ಜಡೆಯಪ್ಪ- ಬಣ್ಣ ಬದಲಿಸುವ ತಾವರೆ, ರಾಜೇಶ ಮುತ್ತಾಳ- ನೀಲಿ ಚಿತ್ರಗಳು, ಪುಷ್ಪಾವತಿ ಎಂ.- ನಾಯಕರ ನಾಟಕ, ಬಸವರಾಜ ಚೌಡಕಿ- ನೀಲಿ ಚಿತ್ರ, ಬಸವರಾಜ ಸಂಕನಗೌಡರ- ಕನ್ನಡಮ್ಮನ ಪುಣ್ಯ, ಡಾ.ಬಸವರಾಜ- ಚಿತ್ರಗಳು. ಡಾ.ವಿ.ಬಿ.ರಡ್ಡೇರ್- ನೀಲಿ ಚಿತ್ರಗಳು, ಗೋಪಾಲ ಮಾನ್ವಿ- ನೀಲಿ ಮರಿಚಿಕೆ, ಸಿರಾಜ್ ಬಿಸರಳ್ಳಿ- ನೀಲಿ ಲೆನ್ಸ್, ಪುಷ್ಪಲತಾ ಏಳುಬಾವಿ- ಇವರು ನಮ್ಮವರು, ಶಾಂತು ಬಡಿಗೇರ- ನೀಲಿ ಜಾಲ, ಲಲಿತಾ ಭಾವಿಕಟ್ಟಿ- ಕ್ಷಮಿಸು ಸೌಧ, ಅಲ್ಲಮಪ್ರಭು ಬೆಟ್ಟದೂರು- ಕೆಂಬಣ್ಣದ ಚಿತ್ರ, ಶಿವಪ್ರಸಾದ ಹಾದಿಮನಿ- ನೀಲಿ ಚಿತ್ರದಲ್ಲಿ ಲೀನವಾದವರು ಕವನಗಳನ್ನು ವಾಚನ ಮಾಡಿದರು. ಸಾಹಿತಿಗಳಾದ ಸಿದ್ದಪ್ಪ ಬಿದರಿ ಹಾಗೂ ರಾಮಣ್ಣ ಬ್ಯಾಟಿಯವರ ಕುರಿತು ಚರ್ಚೆ ನಡೆಯಿತು.
ಕಾರ್‍ಯಕ್ರಮದಲ್ಲಿ ಎ.ಪಿ.ಅಂಗಡಿ, ಶಿವಾನಂದ ಹೊದ್ಲೂರ. ಜಿ.ಎಸ್.ಗೋನಾಳ, ಮಂಜುನಾಥ ಉಮಚಗಿ, ಅನಸೂಯಾ ಜಾಗೀರದಾರ, ಡಾ.ಮಹಾಂತೇಶ ಮಲ್ಲನಗೌಡರ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸ್ವಾಗತವನ್ನು ಎನ್.ಜಡೆಯಪ್ಪ, ವಂದನಾರ್ಪಣೆಯನ್ನು ಬಸವರಾಜ ಚೌಡಕಿ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
0 comments:
Post a Comment
Click to see the code!
To insert emoticon you must added at least one space before the code.