ಕೊಪ್ಪಳ. ಈ ನೆಲದ ಪಾವನ ಪುರುಷರಾದ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದ್ದೂ ಭಕ್ತರ ಮನಸ್ಸೂ ಉಲ್ಲಾಸಭರಿತವಾಗುತ್ತಿದೆ. ಮಹಾರಥೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಚುರುಕಿನಿಂದ ಸಕಲ ಸಿದ್ದತೆಗಳು ನಡೆಯುತ್ತಿವೆ. ಬ್ರಹತ್ ದಾಸೋಹ ಮಂಟಪ, ವಿಶಾಲವಾದ ಮೈದಾನದಲ್ಲಿ ಚೊಕ್ಕವಾದ ಅಂಗಡಿ ಮುಂಗಟ್ಟುಗಳು, ಹಾಗೂ ಧಾರ್ಮಿಕ ಚಿಂತನ ಮಂತನಗಳು ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುವ ಕೈಲಾಸ ಮಂಟಪ ಹೀಗೆ ಏನೆಲ್ಲ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಸ್ವತಃ ಶ್ರೀಗಳೇ ಪುರದ ಪ್ರಮುಖರೊಂದಿಗೆ ಉತ್ಸುಕತೆಯಿಂದ ಪಾದರಸದಂತೆ ಸುತ್ತಾಡಿ ಮೇಲುಸ್ತುವಾರಿ ವಹಿಸಿರುವದು ಭಕ್ತರಿಗೆ ಆನಂದ ತರುತ್ತಿದೆ.
ಧವಸ ಧಾನ್ಯ ಅರ್ಪಣೆ:
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಶ್ರೀಮಠಕ್ಕೆ ಜಿಲ್ಲೆಯಾಧ್ಯಾಂತ ಧವಸ-ಧಾನ್ಯಗಳು ಅರ್ಪಿತವಾಗಿತ್ತವೆ. ಇತ್ತೀಚಿಗೆ ಹನುಮನಟ್ಟಿ ಗ್ರಾಮದಿಂದ ೪೫ ಪಾಕೇಟ್ ಮೆಕ್ಕೆಜೋಳ, ೫೦ ಕೆ.ಜಿ ಜೋಳ, ೧ ಚೀಲ ಖಾರದ ಪುಡಿ, ವಗರನಾಳಗ್ರಾಮದಿಂದ ೨೨ ಚೀಲ ನೆಲ್ಲು, ೮ ಪಾಕೆಟ್ ಸಜ್ಜಿ, ಬೋಚನಹಳ್ಳಿಗ್ರಾಮದಿಂದ ೪೫ ಪಾಕೇಟ ಮೆಕ್ಕೆಜೋಳ, ೧ ಪಾಕೆಟ್ ಸಜಿ, ೧ಪಾಕೆಟ್ ಜೋಳ, ಕೆಂಚನಗೌಡ ಮನ್ನಾಪುರ ದದೇಗಲ್ ಗ್ರಾಮದ ಭಕ್ತರಿಂದ ೧೫ ಪಾಕೇಟ್ ಉಳ್ಳಾಗಡ್ಡಿ, ಅಲ್ಲದೇ ಮುರಡಿ,ಭಾನಾಪುರ,ವಗರನಾಳ ಗ್ರಾಮದ ಭಕ್ತರಿಂದ ಟ್ರ್ಯಾಕ್ಟರ್ ಕಟ್ಟಿಗಗಳು,ಇವುಗಳಲ್ಲದೇ ಸ್ಥಳೀಯ ಹಾಗೂ ಹೊರಗಿನ ಭಕ್ತರಿಂದ ಚಿಕ್ಕ ಪುಟ್ಟ ರೀತಿಯ ಧವಸ ಧಾನ್ಯಗಳು ಶ್ರೀಮಠಕ್ಕೆ ಅರ್ಪಿತವಾಗಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಶಿರ್ವದಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.