ಕೊಪ್ಪಳ ರಾಜ್ಯ ಸರ್ಕಾರದಿಂದ ಜಿಲ್ಲೆಯ ವಕ್ಫ್ ಸಂಸ್ಥೆಗಳಿಗೆ ಬಿಡುಗಡೆಯಾದ ೬. ೭೫ ಲಕ್ಷ ರೂ.ಗಳ ಸಹಾಯಧನದ ಚೆಕ್ ಅನ್ನು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ನೂರ್ ಅಹ್ಮದ್ ಹಣಜಗೇರಿ ಅವರು ಜಿಲ್ಲೆಯ ವಿವಿಧ ವಕ್ಫ್ ಸಮಿತಿಗಳಿಗೆ ಕೊಪ್ಪಳದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯದಲ್ಲಿ ಗುರುವಾರ ವಿತರಿಸಿದರು.
ಸಹಾಯಧನದ ಚೆಕ್ ವಿತರಿಸಿ ಮಾತನಾಡಿದ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ನೂರ್ ಅಹ್ಮದ್ ಹಣಜಗೇರಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಹೆಚ್ಚಿನ ಅನುದಾನ ಪಡೆದ ಎರಡನೆ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಲ್ಲಾ ವಕ್ಫ್ ಮಂಡಳಿ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಮಸ್ತ ನಾಗರಿಕರ ವತಿಯಿಂದ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿರುವ ಸರ್ಕಾರ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದೆ. ಈ ಅನುದಾನದ ಸದ್ಬಳಕೆಯಾಗಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯ ಕೊಪ್ಪಳ ತಾಲೂಕು ಹಳೆ ಶಿವಪುರ ಗ್ರಾಮದ ಜಾಮಿಯಾ ಮಸೀದಿ, ಕೊಪ್ಪಳ ನಗರದ ಹಜರತ್ ಬಾಬಾ ದರ್ಗಾ, ಮಿಟ್ಟಿಕೇರಿಯ ಇಮಾಮ್-ಎ- ಖಾಸಿಂ ಆಶ್ರುಖಾನಾ, ಕವಲೂರು ಗ್ರಾಮದ ಜಾಮಿಯಾ ಮಸೀದಿ, ಹುಲಿಗಿಯ ಮುಸ್ಲಿಂ ಜಾಮಿಯಾ ಮಸೀದಿ ಮತ್ತು ದರ್ಗಾ, ಹೊಸಲಿಂಗಾಪುರ ಗ್ರಾಮದ ಜಾಮಿಯಾ ಮಸೀದಿ, ಹೊಸಗೊಂಡಬಾಳ ಗ್ರಾಮದ ಜಾಮಿಯಾ ಮಸೀದಿಗಳಿಗೆ ತಲಾ ೫೦೦೦೦ ರೂ. ಅನುದಾನ ನೀಡಲಾಗಿದ್ದು, ಹಾಲಹಳ್ಳಿ ಗ್ರಾಮದ ಮುಸ್ಲಿಂ ಜಾಮಿಯಾ ಮಸೀದಿ, ಕೊಪ್ಪಳದ ಅಂಜುಮನ್-ಎ-ಖಿದ್ಮತ್ ಮುಸ್ಲಮೀನ್ ಮತ್ತು ಹೊಸಬಂಡಿಹರ್ಲಾಪುರ ಗ್ರಾಮದ ಮೆಹಬೂಬ್ ಸುಭಾನಿ ದರ್ಗಾಗಳಿಗೆ ತಲಾ ೭೫೦೦೦ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಜಿಲ್ಲಾ ವಕ್ಫ್ ಮಂಡಳಿಯ ಉಪಾಧ್ಯಕ್ಷ ಪೀರಾಹುಸೇನ್ ಹೊಸಳ್ಳಿ, ಸದಸ್ಯರುಗಳಾದ ಎನ್. ಶಾಮೀದ್ ಸಾಬ ತಾವರಗೇರಾ, ಶರೀಫ್ ಸಾಬ ಇಟಗಿ, ಮಹ್ಮದ್ ಗೌಸ್ ಗಂಗಾವತಿ, ಹುಸೇನ್ ಸಾಬ ನಾಗನಕಲ್, ರಷೀಸಾಬ ಮಿಠಾಯಿ, ಚಂದುಸಾಬ ಬಳೂಟಗಿ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಹೈದರ ಅಲಿ, ನಗರಸಭೆ ಸದಸ್ಯ ಮೌಲಾಸಾಬ್ ಗಂಗಾವತಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.