ಡಾ. ವಿಷ್ಣು ಮಾನವೀಯತೆಯ ಸಾಕಾರಮೂರ್ತಿ ಎಸ್. ವಿ. ಪಾಟೀಲ ಬಣ್ಣನೆ
ಕೊಪ್ಪಳ, ಡಿ.೩೦. ಖ್ಯಾತನಟ ಡಾ. ವಿಷ್ಣುವರ್ಧನ್ ಅವರು ಮಾನವೀಯತೆಯನ್ನು ಸಾಕಾರಮೂರ್ತಿಯಾಗಿ ಎಲ್ಲರಪ್ರೀತಿಗೆ ಪಾತ್ರರಾಗಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ಎಸ್. ವಿ. ಪಾಟೀಲ ಗುಂಡೂರು ಬಣ್ಣಿಸಿದರು.

ಮುಖ್ಯ ಅತಿಥಿಯಾಗಿದ್ದ ಚಲನ ಚಿತ್ರ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ಮಾತನಾಡಿ,ಯುವಕರು ಉತ್ತಮಚಲನಚಿತ್ರಗಳಭಿರುಚಿಯನ್ನು ಬೆಳೆಸಿಕೊಳ್ಳುವ ಮೂಲಕ ಕನ್ನಡ ಪರಂಪರೆ ಹೆಚ್ಚಿಸಲು ಛಲಗಾರರಾಗಬೇಕು,ಕೊಪ್ಪಳ ಜಿಲ್ಲೆಯ ಅನೇಕ ಯುವಕರು ಈರಂಗದಲ್ಲಿ ತಮ್ಮನ್ನು ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆಪ್ರವೇಶಿಸಿದ್ದು ಆರೋಗ್ಯಕರಬೆಳವಣಿಗೆ ಎಂದರು.

ಚಲನಚಿತ್ರನಟಿ ಕು. ನಿಧಿ ಚಕ್ರವರ್ತಿ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಉತ್ತರ ಕರ್ನಾಟಕವೇ ಚಿತ್ರರಂಗವನ್ನು ಬೆಳೆಸಿದ್ದು ನನ್ನ ತವರು ನಾಡುಕೊಪ್ಪಳವನ್ನು ಎಂದಿಗೂ ಮರೆಯಲಾರೆ, ಇಲ್ಲಿಯ ಜನರ ಪ್ರೀತಿ ಎಲ್ಲೂ ಸಿಗಲಾರದ್ದು ಎಂದ ಅವರು, ಉತ್ತಮ ಚಿತ್ರಗಳು ಬಂದಲ್ಲಿ ಪಾತ್ರ ಮಾಡುವುದಾಗಿ ತಿಳಿಸಿದ ಅವರು ಡಾ.ವಿಷ್ಣು ಸರ್ ಅವರೊಂದಿಗೆ ನಟಿಸುವ ಆಸೆ ಈಡೇರಲಿಲ್ಲ ಎಂದು ವಿಷಾದಿಸಿದರಲ್ಲದೇ ಕೆಲ ಸಮಯ ಭಾವುಕರಾದರು. ಕಲಾವಿದರಾದ ಗಣೇಶ ಕಿನ್ನಾಳ, ಶರಣಗೌಡ ಇತರರು ಗಾಯನ ಹಾಗೂ ನಾಟಕದ ಏಕಪಾತ್ರ ಅಭಿನಯ ಪ್ರದರ್ಶಿಸಿದರು. ಪ್ರಾರಂಭದಲ್ಲಿ ದಿ. ವಿಷ್ಣುವರ್ಧನ್ ಹಾಗೂ ದಿ. ರಮೇಶ ಕುಡತಿನಿ ಅವರಿಗೆ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು.ಇದೇ ಸಂದರ್ಭದಲ್ಲಿ ದಿ. ವಿಷ್ಣು ಮತ್ತು ನಟಿ ಸುಹಾಸಿನಿ ಮತ್ತು ಶ್ರೀವಿದ್ಯಾ ನಟಿಸಿರುವ ಪ್ರದರ್ಶನಗೊಂಡ ಸುಪ್ರಭಾತ ಚಲನಚಿತ್ರ ವೀಕ್ಷಿಸಿ ಸಂಭ್ರಮಿಸಿದರು. ಅಕಾಡೆಮಿಯ ಬೆಳ್ಳಿಮಂಡಲದ ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿಠ್ಠಲ ಮಾಲಿಪಾಟೀಲ ರುದ್ರಪ್ಪ ಭಂಡಾರಿ ಸ್ವಾಗತಿಸಿದರು. ದುರುಗಪ್ಪ ಹಿರೇಮನಿ ಪ್ರಾರ್ಥಿಸಿದರು, ಜಿಲ್ಲಾ ಸಹ ಸಂಚಾಲಕ ವಿಠ್ಠಲ ಮಾಲಿಪಾಟೀಲ ನಿರೂಪಿಸಿದರು, ಜೋಡಪ್ಪ ಯತ್ನಟ್ಟಿ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.