ಮುಂಬೈ, ಡಿ.28: ಜನರ ನೀರಸ ಪ್ರತಿಕ್ರಿಯೆ ಹಾಗೂ ತೀವ್ರ ಅನಾರೋಗ್ಯದ ಕಾರಣ ಅಣ್ಣಾ ಹಝಾರೆ ತನ್ನ ತ್ರಿದಿನ ಉಪವಾಸ ಮುಷ್ಕರವನ್ನು ನಿಗದಿಗಿಂತ ಒಂದು ದಿನ ಮೊದಲೇ ಕೊನೆಗೊಳಿಸಿದ್ದಾರೆ. ನಿರೀಕ್ಷಿತ ಜನ ಬೆಂಬಲ ವ್ಯಕ್ತವಾಗದೆ ಇರುವುದೇ ಉಪವಾಸ ಕೊನೆಗೊಳಿಸಲು ಕಾರಣ ಎಂದು ಆಪ್ತ ಮೂಲಗಳು ತಿಳಿಸಿವೆ. ಆದಾಗ್ಯೂ, ‘ಪ್ರಬಲ ಲೋಕಪಾಲ ತರಲು ವಿಫಲವಾಗಿರುವ’ ಕಾಂಗ್ರೆಸ್‌ನ ವಿರುದ್ಧ ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿ ಅಭಿಯಾನ ನಡೆಸುವ ತನ್ನ ಬೆದರಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.
ದಿಲ್ಲಿಯಲ್ಲಿ ನಡೆಸಿದ್ದ ಮೂರು ಉಪವಾಸ ಮುಷ್ಕರಗಳ ವೇಳೆ ಸಾವಿರಾರು ಮಂದಿಯನ್ನು ಆಕರ್ಷಿಸಿದ್ದ ಅಣ್ಣಾ, ಮುಂಬೈಯ ಎಂಎಂಆರ್‌ಡಿಎ ಮೈದಾನದಲ್ಲಿ ಈ ಬಾರಿ ನಡೆಸಿದ ಉಪವಾಸದ ಎರಡನೆ ದಿನವೂ ಜನರನ್ನು ಆಕರ್ಷಿಸಲು ವಿಫಲರಾದರು. ಈ ಹಿನ್ನೆಲೆಯಲ್ಲಿ 74ರ ಹರೆಯದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ತನ್ನ ಉಪವಾಸವನ್ನು ಅರ್ಧದಲ್ಲೇ ಕೊನೆಗೊಳಿಸುವ ಘೋಷಣೆ ಮಾಡಿ ಆಶ್ಚರ್ಯ ಮೂಡಿಸಿದರು. ಆದರೆ, ಈ ವೇಳೆ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿಯವರ ನಿವಾಸಗಳೆದುರು ಧರಣಿ ನಡೆಸಲು ದಿಲ್ಲಿಗೆ ಆಗಮಿಸುವ ಮತ್ತು ಬಳಿಕ ಜೈಲ್ ಭರೋ ಚಳವಳಿ ನಡೆಸುವ ತನ್ನ ಈ ಹಿಂದಿನ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ.

100 ಡಿಗ್ರಿ ಫ್ಯಾರನ್‌ಹೀಟ್ ಜ್ವರದಿಂದ ಬಳಲುತ್ತಿರುವ ಹಝಾರೆ ಉಪವಾಸ ಮುಂದುವರಿಸಿದರೆ ಮೂತ್ರಪಿಂಡ ವೈಫಲ್ಯ ಉಂಟಾಗಬಹುದೆಂದು ವೈದ್ಯರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಅವರು ತನ್ನ ಉಪವಾಸ ಅರ್ಧಾಂತಗೊಳಿಸಿದರು. ತಾನು ನಿನ್ನೆ ಇಲ್ಲಿ ಉಪವಾಸ ಆರಂಭಿಸುವ ನಾಲ್ಕು ದಿನ ಮೊದಲಿನಿಂದಲೇ ಉಪವಾಸ ನಡೆಸುತ್ತಿದ್ದೆನೆಂದು ಹಝಾರೆ ತಿಳಿಸಿದರು.
ಜನರನ್ನು ಆಕರ್ಷಿಸಲು ವಿಫಲ : ಅಣ್ಣಾ ತಂಡಕ್ಕೆ ಭಾರೀ ನಿರಾಸೆ!
ಹೊಸದಿಲ್ಲಿ, ಡಿ.28: ‘ದುರ್ಬಲ’ ಲೋಕಪಾಲ ಮಸೂದೆಯ ವಿರುದ್ಧ ಅಣ್ಣಾ ಬಳಗದ ಪ್ರತಿಭಟನೆಯು ಎರಡನೆಯ ದಿನವಾದ ಇಂದು ಕೂಡ ರಾಮ್‌ಲೀಲಾ ಮೈದಾನಕ್ಕೆ ಬೆಂಬಲಿಗರನ್ನು ಆಕರ್ಷಿಸಲು ವಿಫಲವಾಯಿತು. ಸ್ವತಃ ಅಣ್ಣಾ ಹಝಾರೆ ಉಪವಾಸ ನಡೆಸಿದ್ದ ಮುಂಬೈಯಲ್ಲೂ ಜನರ ಪ್ರತಿಕ್ರಿಯೆ ನಿರಾಶಾದಾಯಕವಾಗಿತ್ತು. 30 ಸಾವಿರ ಜನ ಸಾಮರ್ಥ್ಯದ ರಾಮ್‌ಲೀಲಾ ಮೈದಾನದಲ್ಲಿ ಇಂದು ಮುಂಜಾನೆ ಕೇವಲ 200ರಷ್ಟು ಮಂದಿ ಕಾಣಿಸಿಕೊಂಡಿದ್ದು, ಮೈದಾನದ ಬಳಿ ಪೊಲೀಸರ ತಲೆಗಳೇ ಕಾಣಿಸುತ್ತಿದ್ದವು. ಅಣ್ಣಾ ತಂಡದ ಪ್ರಮುಖ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಕಳೆದ ಆಗಸ್ಟ್‌ನಲ್ಲಿ ಅಣ್ಣಾ ಇಲ್ಲಿ 12 ದಿನಗಳ ಉಪವಾಸ ಮುಷ್ಕರ ನಡೆಸಿದ್ದ ವೇಳೆ 30ರಿಂದ 40 ಸಾವಿರ ಜನರು ಆಗಮಿಸಿದ್ದರು. ಜಂತರ್‌ಮಂತರ್ ನಲ್ಲಿ ನಡೆದ ಅವರ ಇನ್ನೆರಡು ಉಪವಾಸಗಳೂ ಅಪಾರ ಸಂಖ್ಯೆಯ ಜನರನ್ನು ಸೆಳೆದಿದ್ದವು. ತೀವ್ರ ಚಳಿ ಹಾಗೂ ಅಣ್ಣಾ ಮುಂಬೈಯಲ್ಲಿ ಉಪವಾಸ ನಿರತರಾಗಿರುವುದು ರಾಮ್‌ಲೀಲಾ ಮೈದಾನಕ್ಕೆ ಜನರು ನಿರೀಕ್ಷಿತ ಸಂಖ್ಯೆಯಲ್ಲಿ ಬಾರದಿರಲು ಕಾರಣವೆಂದು ಟೀಂ ಅಣ್ಣಾ ಸದಸ್ಯ ಪ್ರಶಾಂತ್ ಭೂಷಣ್ ನಿನ್ನೆ ಪ್ರತಿಪಾದಿಸಿದ್ದರು. ಪ್ರತಿಭಟನೆಯ ಆರಂಭ ಪೂರ್ವಾಹ್ಣ 10ಕ್ಕೆ ನಿಗದಿಯಾಗಿದ್ದರೂ 11 ಗಂಟೆ ಕಳೆದರೂ ಬೆರಳೆ ಣಿಕೆಯ ಜನರಿಂದ ಮೈದಾನ ಮರುಭೂಮಿಯಂತೆ ಕಾಣಿಸುತ್ತಿತ್ತು. ಧ್ವನಿ ಮುದ್ರಿತ ಸಂಗೀತದ ಜೊತೆಗೆ ಬೆಂಬಲಿಗರು ತ್ರಿವರ್ಣ ಧ್ವಜ ಬೀಸುತ್ತ ಸರಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು.
ಮುಂಬೈಯಲ್ಲಿ ಜನ ಬಾರದಿದ್ದುದು ಅಣ್ಣಾ ಬಳ ಗದ ತೀವ್ರ ನಿರಾಶೆಗೆ ಕಾರಣವಾಯಿತು. ಸಹಸ್ರಾರು ಮಂದಿ ಒಗ್ಗೂಡುವ ನಿರೀಕ್ಷೆಯಿದ್ದ ಎಎಂಆರ್‌ಡಿಎ ಮೈದಾನ ಬಿಕೋ ಎನ್ನುತ್ತಿತ್ತು. ಎರಡನೆಯ ದಿನವಾದ ಇಂದು ಸಹ ಕೆಲವು ನೂರರಷ್ಟು ಮಂದಿ ಮಾತ್ರ ಅತ್ತ ಸುಳಿದಿದ್ದರು. ಡಿ.29ರಂದು ಉಪವಾಸ ಕೊನೆಗೊಳಿಸಿದ ಬಳಿಕ ದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರ ನಿವಾಸಗಳ ಮುಂದೆ ಧರಣಿ ನಡೆಸುವ ಹಾಗೂ ಜೈಲ್ ಭರೋ ಚಳವಳಿ ನಡೆಸುವ ಯೋಜನೆಯನ್ನು ಅಣ್ಣಾ ಬಳಗ ಹಾಕಿಕೊಂಡಿತ್ತು. ಣ್ಣಾ ತಂಡಕ್ಕೆ ಭಾರೀ ನಿರಾಸೆ! ಅಣ್ಣಾರ ಈ ಚಳವಳಿಗೆ ಆನ್‌ಲೈನ್ ಬೆಂಬಲಿಗರ ಸಂಖ್ಯೆ ಲಕ್ಷ ದಾಟಿದ್ದರೂ, ಅವರು ಆನ್‌ಲೈನಲ್ಲೇ ಉಳಿದು ಪ್ರತಿಭಟನಾ ಸ್ಥಳಕ್ಕೆ ಬಂದವರು ಬೆರಳೆಣಿಕೆಯ ಮಂದಿ ಮಾತ್ರ.
ನಿನ್ನೆ 10 ಸಾವಿರ ಬೆಂಬಲಿಗರು ಬಂದಿದ್ದಾರೆಂದು ಟೀಂ ಅಣ್ಣಾ ಹೇಳುತ್ತಿದ್ದರೂ, ಪೊಲೀಸರು ಈ ಸಂಖ್ಯೆ 7 ಸಾವಿರದ ಗಡಿ ದಾಟಿಲ್ಲ ಎಂದಿದ್ದಾರೆ. ಈ ನೀರಸ ಪ್ರತಿಕ್ರಿಯೆಗೆ ಕಾರಣವನ್ನು ಸಂಘಟಕರು ವಿಶ್ಲೇಷಿಸುತ್ತಿದ್ದು, ವಾಣಿಜ್ಯ ನಗರದ ಜನರಿಗೆ ಇದಕ್ಕೆಲ್ಲ ಬಿಡುವಿಲ್ಲದಿರುವುದೂ ಒಂದೆಂದು ಅಂದಾಜಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.