PLEASE LOGIN TO KANNADANET.COM FOR REGULAR NEWS-UPDATES


ಸುಬ್ರಹ್ಮಣ್ಯ : ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರಾ ಸಮಯದಲ್ಲಿ ಭಕ್ತರು ಸ್ವಇಚ್ಛೆಯಿಂದ ನಡೆಸುವ `ಮಡೆಸ್ನಾನ` (ಬ್ರಾಹ್ಮಣರು ಉಂಡ ಎಲೆಯ ಮೇಲೆ ಉರುಳು ಸೇವೆ) ನಿಷೇಧಿಸಲಾಗಿದೆ ಎಂದು ದೇವಳದ ಆಡಳಿತ ಸಮಿತಿ ತಿಳಿಸಿದೆ.

`ಮಡೆ-ಮಡೆಸ್ನಾನ` ವಿರುದ್ಧ ಸಾರ್ವಜನಿಕ ವಲಯದಿಂದ ದೂರು, ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಮತ್ತು ದೇವಸ್ಥಾನದ ಸೇವಾ ಪಟ್ಟಿಯಲ್ಲಿ ಈ ಸೇವೆ ಸೇರದೇ ಇರುವುದರಿಂದ ಇನ್ನು ಮುಂದಕ್ಕೆ ಭಕ್ತರು ಶ್ರೀ ಕ್ಷೇತ್ರದಲ್ಲಿ ಈ ಪದ್ಧತಿ ಮುಂದುವರಿಸದಂತೆ  ಕೋರಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

27 Nov 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top