ಇಂದು ಬಿಕನಹಳ್ಳಿ-ಮೈನಳ್ಳಿ ಉಜ್ಜಯನಿ ಮಠದಲ್ಲಿ
ಕೊಪ್ಪಳ ತಾಲೂಕಿನ ಬಿಕನಹಳ್ಳಿ- ಮೈನಹಳ್ಳಿ ಉಜ್ಜಯನಿ ಹಿರೇಮಠದಲ್ಲಿ ನ. ೨೮ರಂದು ೧೫ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಜರುಗಲಿದೆ.
ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವದಲ್ಲಿ ೨೮ ರಂದು ಸೋಮವಾರ ಬೇಳಿಗ್ಗೆ ೬ ಗಂಟೆಗೆ ಲಿಂಗೈಕ್ಯ ಜಗದ್ಗುರು ಶ್ರೀಶ್ರೀಶ್ರೀ ೧೦೦೮ ಜಗದ್ಗುರು ಮರಳಸಿದ್ದರಾಜ ದೇಶಿಕೇಂದ್ರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಮಹಾ ಪೂಜೆ, ೧೧ ಗಂಟೆಗೆ ಶರಣರಿಗೆ ಮರಣವೇ ಮಹಾನವಮಿ ಎಂಬತೆ ಭಾವಪೂರ್ಣ ಸ್ವರ ಶ್ರದ್ದಾಂಜಲಿ ಕ್ರಮ ನಡಡೆಯಲಿದೆ.
ಅರಕೇರಿ ಸಿದ್ದಾರೂಡ ಆಶ್ರಮದ ಶಿವಾನಂದ ಸ್ವಾಮಿಗಳ ನೇತೃತ್ವ ವಹಸಲಿದ್ದಾರೆ. ಬಿಕನಹಳ್ಳಿ-ಮೈನಹಳ್ಳಿಯ ಉಜ್ಜಯನಿ ಹಿರೇಮಠದ ಶ್ರೀಷ.ಬ್ರ. ೧೦೦೮ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿದ್ಯದಲ್ಲಿ ನಡಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಸಿ.ವಿ. ಕಲ್ಮಠ ವಹಿಸುವರು. ವೇ.ಪಂ. ವಿರೇಶ ಹಿಟ್ನಾಳ ಮತ್ತು ಸಂಗಡಿಗರಿಂದ ಸ್ವರ ನಮನ ಜರುಗಲಿದೆ.
ನಂತರ ಶ್ರೀಮತಿ ಶಂಕರಗೌಡ ತಿಪ್ಪನಗೌಡ ಮಾಲಿಪಾಟೀಲ್ ಅವರಿಂದ ಪ್ರಸಾದ ಸೇವೆ ನಡಡೆಯಲಿದೆ. ಸಂಜೆ ೬ ಗಂಟೆಗೆ ಹೂವಿನಹಡಗಲಿಯ ಸಿದ್ದರೆಡ್ಡಿ ತಿಮ್ಮರೆಡ್ಡಿ ಹಂಗನಕಟ್ಟಿ ಇವರಿಂದ ೧೦೦೮ ಜ್ಯೋತಿ ಕಾರ್ತಿಕೋತ್ಸವ ಜರುಗಲಿದೆ.
ಬಿಕನಹಳ್ಳಿಯ ಗುಡದನಗೌಡ ಹಾಲನಗೌಡ ಪೋ.ಪಾಟೀಲ್ ಇವರು ಪತ್ರಿಕೆ ಸೇವೆ ನೀಡಿದ್ದು ಎಲ್ಲರೂ ಈ ಶಿವಾನುಭವ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಠದ ಕಮಿಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.