PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಸೆ. : ಕೊಪ್ಪಳದ ಕಾನೂನು ಮಾಪನಾಶಾಸ್ತ್ರ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ನಿಂದ ಆಗಸ್ಟ್ ಅಂತ್ಯದವರೆಗೆ ತೂಕ ಮತ್ತು ಅಳತೆಯಲ್ಲಿನ ವಂಚನೆಯ ಬಗ್ಗೆ ತಪಾಸಣೆ ನಡೆಸಿ ಒಟ್ಟು ೨೩೩ ಮೊಕದ್ದಮೆಗಳನ್ನು ದಾಖಲಿಸಿ ೨೩೮೭೫೦ ರೂ.ಗಳ ದಂಡ ವಸೂಲಿ ಮಾಡಿದೆ.
  ಕಾನೂನು ಮಾಪನಾಶಾಸ್ತ್ರ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ೨೦೧೧ ರ ಏಪ್ರಿಲ್ ನಿಂದ ಆಗಸ್ಟ್ ತಿಂಗಳ ಅಂತ್ಯದವರೆಗೆ ಜಿಲ್ಲೆಯಾದ್ಯಂತ ಕಿರಾಣಿ ಅಂಗಡಿಗಳು, ಸ್ಟೇಶನರಿ ಅಂಡಿಗಳು, ಪೆಟ್ರೋಲ್ ಪಂಪ್, ವೇಬ್ರಿಡ್ಜ್‌ಗಳು, ಇಲೆಕ್ಟ್ರಿಕ್ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳು, ಕೈಗಾರಿಕಾ ವಸಾಹತುಗಳು ಹಾಗೂ ಇತರೆ ಅಂಗಡಿಗಳ ತಪಾಸಣೆ ನಡೆಸಿ, ತೂಕ, ಅಳತೆ ಹಾಗೂ ಪೊಟ್ಟಣ ಸಾಮಗ್ರಿ ನಿಯಮಗಳ ಉಲ್ಲಂಘನೆ ಮಾಡಿದ ಬಗ್ಗೆ ಒಟ್ಟು ೨೩೩ ಪ್ರಕರಣಗಳನ್ನು ದಾಖಲಿಸಿದೆ.  ತೂಕ, ಅಳತೆ ಹಾಗೂ ಪೊಟ್ಟಣ ಸಾಮಗ್ರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊಪ್ಪಳ ತಾಲೂಕಿನಲ್ಲಿ ೫೧ ಮೊಕದ್ದಮೆಗಳು, ಗಂಗಾವತಿ- ೧೧೨, ಯಲಬುರ್ಗಾ- ೦೫ ಹಾಗೂ ಕುಷ್ಟಗಿ ತಾಲೂಕಿನಲ್ಲಿ ೬೫ ಮೊಕದ್ದಮೆಗಳನ್ನು ದಾಖಲಿಸಿದೆ.  ಇವುಗಳ ಪೈಕಿ ಒಟ್ಟು ೨೨೩ ಮೊಕದ್ದಮೆಗಳನ್ನು ರಾಜಿ ಅಭಿಸಂಧಾನದ ಮೂಲಕ ಇತ್ಯರ್ಥಪಡಿಸಿ, ೨೩೮೭೫೦ ರೂ.ಗಳ ದಂಡ ವಸೂಲಿ ಮಾಡಿದೆ.  ಅಲ್ಲದೆ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಸತ್ಯಾಪನೆ ಹಾಗೂ ಒಟ್ಟು ೨೩೯೫ ವ್ಯಾಪಾರಿ ಸಂಸ್ಥೆಗಳ ಮುದ್ರೆ ಕಾರ್ಯದಿಂದ ಒಟ್ಟು ೯೭೭೩೦೫ ರೂ. ಗಳ ಸತ್ಯಾಪನಾ ಶುಲ್ಕ ವಸೂಲಿ ಮಾಡಿದೆ.  

30 Sep 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top