PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಸೆ : ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ ಮತ್ತು ಯಲಬುರ್ಗಾ ಸೇರಿದಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ, ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
  ಮತದಾರರ ಪಟ್ಟಿ ಪರಿಷ್ಕರಣೆಗೆ ಅರ್ಹತಾ ೨೦೧೧ ರ ಜನವರಿ ೦೧ ಅನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಸಲುವಾಗಿ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ ಮತ್ತು ಯಲಬುರ್ಗಾ ಸೇರಿದಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ, ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾರರ ಕರಡು ಪಟ್ಟಿಯನ್ನು ಅಕ್ಟೋಬರ್ ೦೧ ರಂದು ಪ್ರಕಟಿಸಲಾಗುವುದು.  ಈ ಮತದಾರರ ಕರಡು ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ ೦೧ ರಿಂದ ನವೆಂಬರ್ ೦೧ ರವರೆಗೆ ಅವಧಿ ನಿಗದಿಪಡಿಸಲಾಗಿದೆ.  ಸಂಬಂಧಪಟ್ಟ ಮತದಾರರ ಪಟ್ಟಿಗಳ ಭಾಗಗಳನ್ನು ಗ್ರಾಮ ಸಭೆ / ಸ್ಥಳೀಯ ಸಂಸ್ಥೆಗಳು ಮುಂತಾದ ಕಡೆಗಳಲ್ಲಿ ಓದುವುದು ಮತ್ತು ಹೆಸರುಗಳು ಇರುವ ಬಗ್ಗೆ ಅಕ್ಟೋಬರ್ ೦೮ ಮತ್ತು ೧೧ ರಂದು ಪರಿಶೀಲಿಸಲಾಗುವುದು.  ಬೂತ್ ಮಟ್ಟದ ಏಜೆಂಟರುಗಳಿಂದ ಅರ್ಜಿಗಳನ್ನು ಸ್ವೀಕರಿಸುವ ವಿಶೇಷ ಆಂದೋಲನದ ದಿನಗಳನ್ನಾಗಿ ಅಕ್ಟೋಬರ್ ೦೯, ೧೬ ಮತ್ತು ೨೩ ದಿನವನ್ನು ನಿಗದಿಪಡಿಸಲಾಗಿದೆ.  ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಡಿಸೆಂಬರ್ ೦೧ ರವರೆಗೂ ವಿಲೇವಾರಿ ಮಾಡಲಾಗುವುದು.  ಮತದಾರರ ಅಂತಿಮ ಪಟ್ಟಿಯನ್ನು ೨೦೧೨ ರ ಜನವರಿ ೦೫ ರಂದು ಪ್ರಕಟಿಸಲಾಗುವುದು.  ಮೇಲೆ ತಿಳಿಸಿದ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮತ್ತು ಬದಲಾವಣೆಗಳು ಇದ್ದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನಿಗದಿಪಡಿಸಿದ ಅವಧಿಯಲ್ಲಿ ಆಯಾ ಮತದಾನ ಕೇಂದ್ರಗಳು, ತಹಸಿಲ್ದಾರರ ಕಚೇರಿ, ಕೊಪ್ಪಳದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top