PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಸೆ. : ಜಿಲ್ಲೆಯ ಎಲ್ಲ ೧೦೮ ಅಂಬ್ಯೂಲನ್ಸ ಸಿಬ್ಬಂದಿಗಳು ಸೆ. ೨೮ ರಿಂದ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಕೈಗೊಂಡಿದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
  ೧೦೮ ಆಂಬ್ಯುಲೆನ್ಸ್ ಸಿಬ್ಬಂದಿಗಳು ಸೆ. ೨೮ ರಿಂದ ಮುಷ್ಕರ ನಡೆಸಲಿರುವುದರಿಂದ, ಇದಕ್ಕೆ ಪರ್ಯಾಯವಾಗಿ ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಬ್ಯೂಲನ್ಸ ವಾಹನಗಳನ್ನು ಸಾರ್ವಜನಿಕರ ತುರ್ತು ಸೇವೆಗಾಗಿ ನಿಯೋಜಿಸಲಾಗಿದೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ೧೦೮ ಅಂಬ್ಯೂಲನ್ಸ ಬದಲಾಗಿ ಇಲಾಖೆಯ ಅಂಬ್ಯೂಲನ್ಸ ವಾಹನ ಚಾಲಕರಿಗೆ ಕರೆ ಮಾಡಬಹುದಾಗಿದೆ.  ೧೦೮ ಆಂಬ್ಯುಲೆನ್ಸ್‌ಗಳಿಗೆ ಬದಲಾಗಿ ಆರೋಗ್ಯ ಇಲಾಖೆ ತುರ್ತು ಸೇವೆಗಾಗಿ ನಿಯೋಜಿಸಲಾಗಿರುವ ಆಂಬ್ಯುಲೆನ್ಸ್ ವಾಹನಗಳು ಇರುವ ಸ್ಥಳ, ವಾಹನ ಸಂಖ್ಯೆ, ಚಾಲಕರ ಹೆಸರು ಹಾಗೂ ಅವರ ಮೊಬೈಲ್ ದೂರವಾಣಿ ಸಂಖ್ಯೆ ವಿವರ ಇಂತಿದೆ.  ಜಿಲ್ಲಾ ಆಸ್ಪತ್ರೆ, ಕೊಪ್ಪಳ, ವಾಹನ ಸಂಖ್ಯೆ ಕೆ.ಎ. ೩೭ ಜಿ ೧೮೯, ಮೊಹಮದ್ ಯೂನಸ್- ೯೮೮೦೦೮೨೬೧೩, ಸಮುದಾಯ ಆರೋಗ್ಯ ಕೇಂದ್ರ, ಮುನಿರಾಬಾದ್- ವಾಹನ ಸಂ. ಕೆ.ಎ ೩೭ ಜಿ ೧೫೭, ವೇಣುಗೋಪಾಲ- ೮೮೬೭೫೭೦೨೦೩, ಸಮುದಾಯ ಆರೋಗ್ಯ ಕೇಂದ್ರ, ಹಿರೇಸಿಂದೋಗಿ- ವಾಹನ ಸಂ. ಕೆ.ಎ ೩೭ ಜಿ ೭೯, ಗವಿಸಿದ್ದಪ್ಪ ಹೂಗಾರ-೮೨೭೭೪೯೯೧೯೨, ತಾಲೂಕಾ ಆಸ್ಪತ್ರೆ, ಯಲಬುರ್ಗಾ, ವಾಹನ ಸಂ: ಕೆ.ಎ. ೩೭ ಜಿ. ೧೬೬, ಮೆಹಬೂಬ-೮೨೭೭೪೯೯೧೯೬, ಸಮುದಾಯ ಆರೋಗ್ಯ ಕೇಂದ್ರ, ಹಿರೇವಂಕಲಕುಂಟಾ, ವಾಹನ ಸಂ. ಕೆ.ಎ. ೩೭ ಜಿ. ೭೮, ಕಲ್ಲಪ್ಪ- ೯೭೪೧೯೭೬೭೬೬, ಸಮುದಾಯ ಆರೋಗ್ಯ ಕೇಂದ್ರ, ಕುಕನೂರು, ವಾಹನ ಸಂ. ಕೆ.ಎ ೩೭ ಜಿ. ೧೪೧, ಮಹಾದೇವಪ್ಪ- ೮೧೦೫೧೫೬೨೦೫ ಹಾಗೂ ತಾಲೂಕು ಆಸ್ಪತ್ರೆ, ಗಂಗಾವತಿ, ವಾಹನ ಸಂ. ಕೆ.ಎ. ೩೭ ಜಿ. ೭೩, ಆನಂದ- ೯೦೩೬೨೫೫೧೯೨ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ೧೦೮ ಅಂಬ್ಯೂಲನ್ಸ ಬದಲಾಗಿ ಇಲಾಖೆಯ ಅಂಬ್ಯೂಲನ್ಸ ವಾಹನ ಚಾಲಕರಿಗೆ ಕರೆ ಮಾಡಿ ಸೇವೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.


27 Sep 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top