ಕೊಪ್ಪಳ ಆ. ೨೯ (ಕ.ವಾ): ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಉತ್ತಮ ಕೃಷಿ ಮತ್ತು ವಿಜ್ಞಾನ ಲೇಖಕರನ್ನು ಆಯ್ಕೆ ಮಾಡಿ ಶ್ರೇಷ್ಠ ಲೇಖಕ ಪ್ರಶಸ್ತಿ ನೀಡಿ ಗೌರವಿಸಲು ಉದ್ದೇಶಿಸಿದ್ದು, ಪ್ರಶಸ್ತಿಗಾಗಿ ಅರ್ಹ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡದಲ್ಲಿ ವಿಜ್ಞಾನ ವಿಷಯದ ಪುಸ್ತಕಗಳ ಬರವಣಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ೨೦೦೯ ರಿಂದಲೂ ಉತ್ತಮ ಕೃಷಿ ಮತ್ತು ವಿಜ್ಞಾನ ಲೇಖಕರನ್ನು ಆಯ್ಕೆ ಮಾಡಿ ಶ್ರೇಷ್ಠ ಲೇಖಕ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ೨೦೧೧-೧೨ ನೇ ಸಾಲಿನಲ್ಲಿ ಕೃಷಿ ಮತ್ತು ವಿಜ್ಞಾನ ಲೇಖಕರು ಅಲ್ಲದೆ ತಂತ್ರಜ್ಞಾನ ವಿಷಯಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಬರೆದ ಲೇಖಕರಿಗೂ ಸಹ ಶ್ರೇಷ್ಠ ಲೇಖಕ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದು, ಪ್ರತಿ ವಿಷಯಕ್ಕೆ ೨ ಪ್ರಶಸ್ತಿಗಳಂತೆ ಒಟ್ಟು ೬ ಪ್ರಶಸ್ತಿಗಳನ್ನು ನೀಡಲಾಗುವುದು. ಕೃಷಿ ಮತ್ತು ವಿಜ್ಞಾನ ವಿಷಯಗಳಲ್ಲಿ ಜನವರಿ ೨೦೧೦ ರಿಂದ ಸೆಪ್ಟಂಬರ್ ೨೦೧೧ ರವರೆಗೆ ಹಾಗೂ ತಂತ್ರಜ್ಞಾನ ವಿಷಯಗಳಲ್ಲಿ ೨೦೦೭ ರಿಂದ ೨೦೧೧ ರವರೆಗೆ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರು ಪ್ರಶಸ್ತಿಗೆ ಪುಸ್ತಕ ಸಲ್ಲಿಸಲು ಅರ್ಹರು. ಆಸಕ್ತ ಲೇಖಕರು ತಾವು ಬರೆದ ಪುಸ್ತಕದ ಮೂರು ಪ್ರತಿಗಳನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಭವನ, ೨೪/೨, ೨೧ನೇ ಮುಖ್ಯ ರಸ್ತೆ, ಬಿ.ಡಿ.ಎ ಕಾಂಪ್ಲೆಕ್ಸ್ ಹತ್ತಿರ, ಬನಶಂಕಿ ೨ನೇ ಹಂತ, ಬೆಂಗಳೂರು- ೭೦ ವಿಳಾಸಕ್ಕೆ ನವೆಂಬರ್ ತಿಂಗಳೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: ೦೮೦- ೨೬೭೧೧೧೬೦ ಅಥವಾ ತಿತಿತಿ.ಞsಣಚಿಛಿಚಿಜemಥಿ.oಡಿg ವೆಬ್‌ಸೈಟ್ ಮೂಲಕ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment
Click to see the code!
To insert emoticon you must added at least one space before the code.