ಕೊಪ್ಪಳ ಆ.): ಕೊಪ್ಪಳ ನಗರದ ಸಾಹಿತ್ಯ ಭವನದ ಕಟ್ಟಡದಲ್ಲಿ ನಡೆಸಲಾಗುತ್ತಿದ್ದ ಆಧಾರ್ ನೋಂದಣಿ ಕಾರ್ಯವನ್ನು ಕೊಪ್ಪಳ ತಹಸಿಲ್ದಾರರ ಕಚೇರಿ ಹಿಂಭಾಗದಲ್ಲಿರುವ ವಾರ್ತಾ ಭವನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೊಪ್ಪಳ ತಹಸಿಲ್ದಾರ್ ಘೋಟೆ ಅವರು ತಿಳಿಸಿದ್ದಾರೆ.
ಕಳೆದ ಜುಲೈ ೨೭ ರಿಂದ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಧಾರ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮಳೆ ಹಾಗೂ ಇನ್ನಿತರ ಕಾರಣಗಳಿಗಾಗಿ ಆಧಾರ್ ನೋಂದಣಿ ಕಾರ್ಯವನ್ನು ಕೊಪ್ಪಳ ತಹಸಿಲ್ದಾರರ ಕಚೇರಿ ಹಿಂಭಾಗದಲ್ಲಿರುವ ವಾರ್ತಾ ಭವನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಉಳಿದಂತೆ ಕೊಪ್ಪಳ ನಗರದಲ್ಲಿ ಇನ್ನೂ ಎರಡು ನೋಂದಣಿ ಕೇಂದ್ರಗಳನ್ನು ಕೋಟೆ ಏರಿಯಾದಲ್ಲಿರುವ ಬ್ರಹ್ಮನವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರು ತಪ್ಪದೆ ಆಧಾರ್ ನೋಂದಣಿ ಕಾರ್ಯ ಮಾಡಿಸುವಂತೆ ಕೊಪ್ಪಳ ತಹಸಿಲ್ದಾರ್ ಘೋಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.