ಕೊಪ್ಪಳ : ಅಗಷ್ಟ್ ೭ರಂದು ನಡೆಯಲಿರುವ ಕೊಪ್ಪಳ ತಾಲೂಕ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮಣ್ಣ ಹವಳೆಯವರಿಗೆ ಪರಿಷತ್ ಪರವಾಗಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸರಳ ಕಾರ್‍ಯಕ್ರಮದಲ್ಲಿ ಕೊಪ್ಪಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಸ್.ಗೋನಾಳ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ರಾಜಶೇಖರ ಅಂಗಡಿ, ತಾಲೂಕ ಪಂಚಾಯತ್ ಅಧ್ಯಕ್ಷರೂ ಹಾಗೂ ಸ್ವಾಗತ ಸಮಿತಿ ಕಾರ್‍ಯಾಧ್ಯಕ್ಷ ಅಮರೇಶ ಉಪಲಾಪೂರ, ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ, ಡಾ.ವಿ.ಬಿ.ರಡ್ಡೇರ್, ಡಾ.ಮಹಾಂತೇಶ ಮಲ್ಲನಗೌಡರ ರಾಮಣ್ಣ ಹವಳೆಯವರನ್ನು ಸನ್ಮಾನಿಸಿ , ಕನ್ನಡ ಧ್ವಜವನ್ನು ನೀಡುವುದರ ಮೂಲಕ ಅಧಿಕೃತವಾಗಿ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಶರಣಬಸಪ್ಪ ಬಿಳೆಎಲಿ, ಬಸವರಾಜ ಶೀಲವಂತರ,ಸಿರಾಜ್ ಬಿಸರಳ್ಳಿ,ಜೆ.ಭರದ್ವಾಜ, ಬಾಷಾ ಹಿರೇಮನಿ ಕಿನ್ನಾಳ, ಬಸಪ್ಪ ದೇಸಾಯಿ, ಮಂಜುನಾಥ ಗೊಂಡಬಾಳ, ಮಹ್ಮದ ಪೀರ್‌ಸಾಬ ಬೆಳಗಟ್ಟಿ ,ರಾಕೇಶ ಕಾಂಬ್ಳೆಕೇರ್ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್‍ಯಕ್ರಮವನ್ನು ಬಸಪ್ಪ ದೇಸಾಯಿ ನಡೆಸಿಕೊಟ್ಟರೆ, ಪರಮೇಶಗೌಡರ ಪಾಟೀಲ ಹಲಗೇರಿ ವಂದನಾರ್ಪಣೆ ಮಾಡಿದರು.

0 comments:
Post a Comment
Click to see the code!
To insert emoticon you must added at least one space before the code.