PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಹಸಿವು, ಕಾಮ,ಸಾವು ಇವು ಯಾವತ್ತೂ ಕಥೆಯ ವಸ್ತುಗಳಾಗಿರುತ್ತವೆ. ಬದುಕು ಇವುಗಳ ಸುತ್ತಲೇ ಸುತ್ತುತ್ತದೆ. ಕಥೆಗೆ ಅನುಭವದ್ರವ್ಯ ಮುಖ್ಯ, ಕಥೆಯಲ್ಲಿ ತಂತ್ರಗಾರಿಕೆಯೂ ಮುಖ್ಯ. ಜೊತೆಯಲ್ಲಿಯೇ ಪಾತ್ರಗಳ ಪೋಷಣೆ,ಚಿತ್ರಣ ಮುಖ್ಯವಾಗುತ್ತವೆ. ಓದುಗನಿಗೆ ಪಾತ್ರಗಳ ಸ್ಪಷ್ಟ ಕಲ್ಪನೆ ಮೂಡುವಂತೆ ಬರೆಯಬೇಕು ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೬೪ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು.೬೪ನೇ ಕವಿಸಮಯದಲ್ಲಿ ಕಥಾವಾಚನವನ್ನು ಹಮ್ಮಿಕೊಳ್ಳಲಾಗಿತ್ತು. ಪುಷ್ಪಲತಾ ರಾಜಶೇಖರ ಏಳುಬಾವಿ - ಕೊಂಕು ಮಾತಿನ ದಳ್ಳುರಿ, ಎ.ಪಿ.ಅಂಗಡಿ- ಬರಲಿದೆ ಮೆಡಿಕಲ್ ಮದುವೆ, ವಾಸುದೇವ ಕುಲಕರ್ಣಿ- ಗುರಪ್ಪ ಮಾಸ್ತರ ಪೇಚಿನ ಪ್ರಸಂಗ, ಬಸವರಾಜ ಸಂಕನಗೌಡ್‌ರ- ಕುರೂಪ ಕಥೆಗಳನ್ನು ವಾಚನ ಮಾಡಿದರು. ಕಥಾವಾಚನ ಜೊತೆಗೆ ಕವಿಗೋಷ್ಠಿಯೂ ನಡೆಯಿತು. ನಟರಾಜ ಸವಡಿ- ಚುಟುಕು, ಎನ್.ಜಡೆಯಪ್ಪ- ಕಾವ್ಯ ತರುಣಿ, ರಮೇಶ ಬನ್ನಿಕೊಪ್ಪ- ಆ ದಿನ ಚೆನ್ನಾಗಿವೆ,ಕನಕಪ್ಪ ತಳವಾರ- ಶಾಹಿರಿಗಳು, ಲಲಿತಾ ಭಾವಿಕಟ್ಟಿ- ಕಲಬೇಡಿ ತಿಳಿನೀರ, ಕಳೆ ಎತ್ತಬೇಕು, ಪುಷ್ಪಾವತಿ - ನೋಟ ಚೆನ್ನಾಗಿರಬೇಕು, ಪುಷ್ಪಾವತಿ ಏಳುಬಾವಿ- ಪ್ರಶ್ನೆ
ಎ.ಪಿ.ಅಂಗಡಿ- ಕಾಡು ನೋಡೋಣ, ಶಿವಪ್ರಸಾದ ಹಾದಿಮನಿ - ಗಣಿಗಾರಿಕೆ, ಗುರುರಾಜ ದೇಶಾಯಿ- ಗಾಂಭಿರ್‍ಯ, ವೀರಣ್ಣ ಹುರಕಡ್ಲಿ- ಸಪ್ತ ಸಾಗರದಾಟಿ, ವಾಸದೇವ ಕುಲಕರ್ಣಿ- ಪೋಸ್ಕೋ, ಸಿರಾಜ್ ಬಿಸರಳ್ಳಿ-ಕವಿತೆ, ಮಹೇಶ ಬಳ್ಳಾರಿಯ ಭೂಮಿ ಕೊಡೆವು , ವಿಠ್ಠಪ್ಪ ಗೋರಂಟ್ಲಿ - ಬೆಂಗಳೂರಿನ ಕೋಗಿಲೆ, ಕಾಗೆ ಕವನಗಳನ್ನು ವಾಚನ ಮಾಡಿದರು.
ಸ್ವಾಗತವನ್ನು ಎನ್.ಜಡೆಯಪ್ಪ, ವಂದನಾರ್ಪಣೆಯನ್ನು ರಮೇಶ ಬನ್ನಿಕೊಪ್ಪ ಹಾಗೂ ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಿರೂಪಿಸಿದರು. ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ಹನುಮಂತಪ್ಪ ಅಂಡಗಿ, ಭಾವಿಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
25 Jul 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top