
ಕೊಪ್ಪಳ : ೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.೨೬ ಮತ್ತು ೨೭ರಂದು ಕುಷ್ಠಗಿಯಲ್ಲಿ ಜರುಗಲಿದ್ದು, ಸಮ್ಮೇಳನದ ಅಧ್ಯಕ್ಷರನ್ನಾಗಿ ಡಾ. ಬಸವರಾಜ ಸಬರದ ಅವರನ್ನು ಆಯ್ಕೆ ಮಾಡಲಾಗಿದೆ.
ಬುಧವಾರ ನಗರದ ಸಹಕಾರಿ ಯೂನಿಯನ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಮೋದ ತುರ್ವಿಹಾಳ, ಎಸ್ ಬಿ. ಗೊಂಡಬಾಳ, ಜಿಲ್ಲಾ ಕೋಶಾಧ್ಯಕ್ಷ ರಾಜಶೇಖರ ಅಂಗಡಿ, ಡಾ. ಮಹಾಂತೇಶ ಮಲ್ಲನ ಗೌಡ್ರು, ಡಾ. ವಿ.ಬಿ. ರಡ್ಡೇರ್, ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ತಾಲುಕಾ ಕಸಾಪ ಅಧ್ಯಕ್ಷರಾದ ಈಶಪ್ಪ ಮಳಗಿ, ರವೀಂದ್ರ ಬಾಕಳೆ, ಬಸವರಾಜ ಕೋಟೆ, ಜಿ.ಎಸ್. ಗೋನಾಳ ಇನ್ನಿತರರು ಉಪಸ್ಥಿತರಿದ್ದರೆಂದು ತಾಲೂಕ ಕಾರ್ಯದರ್ಶಿ ಬಸಪ್ಪ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.