PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜ. : ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಎಂಇಎಸ್ ಯೋಜನೆಯ ಮುಖಾಂತರ ರಾಜ್ಯದಲ್ಲಿ ಈವರೆಗೆ ಒಟ್ಟು ೨೮೧೮೬೮ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಇದೇ ಫೆ. ೦೫ ಮತ್ತು ೦೬ ರಂದು ಎರಡು ದಿನಗಳ ಕಾಲ ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಬೃಹತ್ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.
ಫೆ. ೦೬ ರಂದು ಮಧ್ಯಾಹ್ನ ೦೩ ಗಂಟೆಗೆ ಕಾರ್ಮಿ ಕ ಸಚಿವ ಬಿ.ಎನ್. ಬಚ್ಚೇಗೌಡ ಅವರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪತ್ರ ವಿತರಣೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ವಿಧಾನಸಭಾ ಸದಸ್ಯರು ವಹಿಸಿಕೊಳ್ಳಲಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರು, ಸಂಸದರು, ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಮಿಕ ಇಲಾಖೆ ಕಾರ್ಯದರ್ಶಿ ರಮೇಶ್ ಬಿ. ಝಳಕಿ, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಫೆ. ೦೫ ರಂದು ಎಸ್‌ಎಸ್‌ಎಲ್‌ಸಿ ಗಿಂತ ಕಡಿಮೆ ವಿದ್ಯಾರ್ಹತೆ, ಎಸ್‌ಎಸ್‌ಎಲ್‌ಸಿ/ ಪಿ.ಯು.ಸಿ/ ಐಟಿಐ, ಡಿಪ್ಲೋಮಾ, ಜೆಓಸಿ ವಿದ್ಯಾರ್ಹತೆ ಹೊಂದಿದವರು ಭಾಗವಹಿಸಬಹುದು. ಫೆ. ೦೬ ರಂದು ಪದವಿಧರರು, ಸ್ನಾತಕೋತ್ತರ ಪದವಿಧರರು, ಇಂಜಿನಿಯರಿಂಗ್ ಪದವಿಧರರು ಭಾಗವಹಿಸಬಹುದು.
ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಉದ್ಯಮದಾರರೊಂದಿಗೆ ಸಂದರ್ಶನಕ್ಕೆ ಕಳುಹಿಸಲಾಗುವುದು. ಉದ್ಯೋಗಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳಿಗೆ ತರಬೇತಿ ಅಗತ್ಯವಿದ್ದಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಿ ಪ್ರಮಾಣ ಪತ್ರ ನೀಡುವುದರೊಂದಿಗೆ ಸೂಕ್ತ ಉದ್ಯೋಗ ಕಲ್ಪಿಸಿಕೊಡುವಂತಹುದು ಈ ಯೋಜನೆಯ ಉದ್ದೇಶವಾಗಿದೆ. ಮೇಳದಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಉದ್ಯಮದಾರರು ಭಾಗವಹಿಸಲಿದ್ದು, ಪ್ರಮುಖವಾಗಿ ಜಿಂದಾಲ್, ಕಿರ್ಲೋಸ್ಕರ್, ತುಂಗಭದ್ರ ಫರ್ಟಿಲೈಜರ್ಸ್, ಬಳ್ಳಾರಿಯ ಜಾನಕಿ ಕಾರ್ಪೊರೇಶನ್, ಶಾತವಾಹನ ಇಸ್ಪಾಟ್, ಬನಶಂಕರಿ ಸ್ಟೀಲ್ಸ್, ಕೊಪ್ಪಳದ ಸ್ಕ್ಯಾನ್ ಇಸ್ಪಾಟ್, ಅಭಯ ಸಾಲ್ವೆಂಟ್, ಎಂಎಸ್‌ಪಿಎಲ್, ಅಲ್ಟ್ರಾಟೆಕ್ ಸಿಮೆಂಟ್, ಹೊಸಪೇಟೆ ಇಸ್ಪಾಟ್, ಹಿಂದುಸ್ಥಾನ ಕೋಕೋ ಕೋಲಾ ಬ್ರೇವರೆಜಿಸ್, ಬೆಂಗಳೂರಿನ ರ್‍ಯಾಮ್ಕೋ ಬಯೋಟೆಕ್, ರವಿ ಇಲೆಕ್ಟ್ರಿಕಲ್ ಕಂಪನಿ, ಟಾಪ್ಸ್ ಸೆಕ್ಯೂರಿಟಿ, ಅರವಿಂದ ಲಿ, ನವಭಾರತ ಫರ್ಟಿಲೈಜರ್‍ಸ್, ಶಾಂತಲಾ ಪವರ್ ಲಿ. ಹುಬ್ಬಳ್ಳಿ ಮುಂತಾದ ಉದ್ಯಮದಾರರು ಭಾಗವ"ಸಲಿದ್ದಾರೆ. ಉದ್ಯೋಗ ಮೇಳದಲ್ಲಿ ಭಾಗವ"ಸಲು ಸಾಧ್ಯವಾಗದ ಅಭ್ಯರ್ಥಿಗಳು ಹೆಲ್ಪ್‌ಲೈನ್ : ೦೮೦- ೨೩೪೪೧೨೧೨/ ೨೩೪೪೧೭೧೭ ಅಥವಾ ವೆಬ್‌ಸೈಟ್ ತಿತಿತಿ.ರಿobಡಿಚಿiseಡಿ.ಛಿom ಮುಖಾಂತರ ನೋಂದಾಸಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಡಾ. "ಷ್ಣುಕಾಂತ್ ಎಸ್ ಚಟಪಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

31 Jan 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top