ಕೊಪ್ಪಳ ಡಿ. : ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೩೩ ಅಬಕಾರಿ ಪ್ರಕರಣಗಳನ್ನು ದಾಖಲಿಸಿ ೦೭ ಜನರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎಂ.ಎಸ್. ತಾಂಬೋಳಿ ಅವರು ತಿಳಿಸಿದ್ದಾರೆ.
ನೀತಿ ಸಂಹಿತೆ ಜಾರಿಯಾದಾಗಿನಿಂದ ಅಬಕಾರಿ ಇಲಾಖೆಯು ಹಲವೆಡೆ ದಾಳಿ ನಡೆಸಿದ್ದು, ನಿಯಮ ಉಲ್ಲಂಘಿಸಿದ ಅಂದರೆ ದಾಬಾ ಮತ್ತು ಮಾಂಸಹಾರಿ ಖಾನಾವಳಿಗಳಲ್ಲಿ ಅನಧಿಕೃತವಾಗಿ ಮದ್ಯ ಶೇಖರಿಸಿದ್ದು, ಮದ್ಯ ಸಾಗಾಣಿಕೆ ಮಾಡಿರುವಂತಹ ೩೩ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ ಬಗ್ಗೆ ೦೧ ಪ್ರಕರಣವನ್ನು ದಾಖಲು ಮಾಡಿ ಒಟ್ಟು ೨೮೦ ಲೀ. ಬೆಲ್ಲದ ಕೊಳೆ ನಾಶಪಡಿಸಲಾಗಿದೆ. ಅಬಕಾರಿ ಇಲಾಖೆಯ ವತಿಂದ ಒಟ್ಟು ೫೬ ಮದ್ಯದ ಪೆಟ್ಟಿಗೆ, ೨೨ ಬಿಯರ್ ಪೆಟ್ಟಿಗೆಗಳು ಹಾಗೂ ೧೦ ಲೀ. ಸೇಂದಿ ವಶಪಡಿಸಿಕೊಳ್ಳಲಾಗಿದ್ದು, ೦೪ ವಾಹನಗಳನ್ನು ಜಪ್ತಿಪಡಿಸಿ ೦೭ ಜನರನ್ನು ಬಂಧಿಸಲಾಗಿದೆ. ಈ ರೀತಿ ಜಪ್ತಿಪಡಿಸಿದ ಮದ್ಯ ಹಾಗೂ ವಾಹನದ ಮೌಲ್ಯ ಸುಮಾರು ೦೩ ಲಕ್ಷಗಳಾಗಿದ್ದು, ಪ್ರಕರಣಗಳ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎಂ.ಎಸ್. ತಾಂಬೋಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.