PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಡಿ. : ತ್ಯಾಗ ಬಲಿದಾನಕ್ಕೆ ಸದಾ ಮುಂದೆ ಬಂದು ದೇಶಕ್ಕೆ ಹೆಸರು ತಂದಿದ್ದು ಗಾಂಧಿ ಕುಟುಂಬ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ ಹೇಳಿದರು.
ಅವರು ನಗರದ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸೋನಿಯಾ ಗಾಂಧಿಯವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪಂಚಾಯತ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. ೫೦ ರಷ್ಟು ಮೀಸಲಾತಿ ನೀಡಿದ ಕೀರ್ತಿ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿಯವರಿಗೆ ಸಲ್ಲುತ್ತೆ, ದೇಶಕ್ಕಾಗಿ ತಮ್ಮ ಪ್ರಾಣ ತೆತ್ತ ಇಂದಿರಾ ಗಾಂಧಿ, ರಾಜೀವ ಗಾಂಧಿ ನಂತರ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ ಸೋನಿಯಾ ಗಾಂಧಿ ಆದರ್ಶವೆಂದ ಅವರು ೨೦ ವರ್ಷ ಒಬ್ಬ ಮಹಿಳೆಯ ಹೆಸರಲ್ಲಿ ಕಾಂಗ್ರೆಸ್ ದೇಶ ಆಳಿರುವದನ್ನು ಗಮನಿಸಿದರೆ, ಇಂದಿರಾ ಗಾಂಧಿಯವರ ಸಾಮರ್ಥ್ಯ ಅರ್ಥವಾಗುತ್ತದೆ. ಇಡೀ ವಿಶ್ವದಲ್ಲಿ ಇಂಥಹ ಉದಾಹರಣೆ ಸಿಗುವದಿಲ್ಲ ಎಂದರು. ಮ"ಳಾ ಕಾಂಗ್ರೆಸ್ ವತಿಂದ ನೂತನವಾಗಿ ಜಿಲ್ಲಾಧ್ಯಕ್ಷರಾದ ಬಸವರಾಜ ಹಿಟ್ನಾಳರನ್ನು ಸನ್ಮಾನಿಸಲಾತು. ಕಾರ್ಯಕ್ರಮದಲ್ಲಿ ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಾಂತಣ್ಣ ಮುದುಗಲ್, ತಾಲೂಕ ಅಧ್ಯಕ್ಷ ಎಸ್. ಬಿ. ನಾಗರಳ್ಳಿ, ಹಿರಿಯ ಕಾಂಗ್ರೆಸ್ ಮುಖಂಡ ದಾದಾಪೀರ ಬಣಗಾರ, ನಗರ ಅಧ್ಯಕ್ಷ ಮರ್ದಾನಸಾಬ ಅಡ್ಡೇವಾಲೆ, ಕಾಂಗ್ರೆಸ್ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಅಕ್ಕಮಹಾದೇವಿ ಮಡಿವಾಳರ್, ಗಫಾರಸಾಬ್ ಇತರರಿದ್ದರು. ಮಹಿಳೆಯರು ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸಿದರು.
ಶಿವಾನಂದ ಹೊದ್ಲೂರ ಸ್ವಾಗತಿಸಿದರು, ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ಶಕುಂತಲಾ ಹುಡೇಜಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುನಾಥ ಗೊಂಡಬಾಳ ನಿರೂಪಣೆ ಮಾಡಿದರು, ಕೊನೆಯಲ್ಲಿ ಸಾವಿತ್ರಿ ಮುಜುಮದಾರ ವಂದಿಸಿದರು.

10 Dec 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top