ಕೊಪ್ಪಳ : ರಾಜ್ಯದಲ್ಲಿಯೇ ಕಡಿಮೆ ಮತದಾನ ಕೊಪ್ಪಳ ಜಿಲ್ಲೆಯಲ್ಲಿ ದಾಖಲಾಗಿದೆ. ಶೇ. 55ರಷ್ಟು ಮತದಾನವಾಗಿದ್ದು ಕೆಲವೆಡೆ ಸಣ್ಣ ಪುಟ್ಟ ಘಟನೆಗಳು ಹೊರತುಪಡಿಸಿದಂತೆ ಚುನಾವಣೆ ಶಾಂತಿಯುತವಾಗಿ ನಡೆಯಿತು. ಭಾಗ್ಯನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ಪೊಲೀಸರ ಮದ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು.
ಕಾರಟಗಿಯಲ್ಲಿ ಹನುಮೇಶ ನಾಯಕ್ ಮೇಲೆ ಬಿಜೆಪಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿಲಾಯಿತು. ಶಿವರಾಜ್ ತಂಗಡಗಿ, ನಾಗಪ್ಪ ಸಾಲೋಣಿ ದೂರು ದಾಖಲಿಸಲು ಬಂದಾಗ ಪೊಲೀಸರು ಮದ್ಯಸ್ತಿಕೆ ವಹಿಸಿ ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.ಗಂಗಾವತಿ ಯಲ್ಲಿ ಶೇ.63ರಷ್ಟು , ಕುಷ್ಟಗಿಯಲ್ಲಿ 63 ಮತದಾನ ನಡೆದ ಬಗ್ಗೆ ವರದಿಯಾಗಿದೆ.
ಹಲವಾರು ಕಡೆ ಹಣ ಹಂಚಲಾಗಿದೆ ಎಂದು ಎಲ್ಲ ಪಕ್ಷಗಳವರು ಪರಸ್ಪರ ದೋಷಾರೋಪಣೆ ಮಾಡಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.