
ಗಂಗಾವತಿ : ನಗರಸಭೆಯನ್ನು ಸೂಪರ್ ಸೀಡ್ ಮಾಡಿರುವ ಸರಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಹಿಟ್ನಾಳ, ಇಕ್ಬಾಲ್ ಅನ್ಸಾರಿ, ಎಚ್.ಆರ್.ಶ್ರೀನಾಥ ನೇತೃತ್ವದಲ್ಲಿ ಗಂಗಾವತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರಸಭೆಯನ್ನು ರದ್ದು ಮಾಡಿರುವ ಶಾಸಕರ ದುರಾಡಳಿತ,ಸರಕಾರದ ನೀತಿ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಶಾಸಕರ ಅಣಕು ಶವದ ಮೆರವಣಿಗೆ ಮಾಡಿ ಪ್ರತಿಕೃತಿಯನ್ನು ದಹನ ಮಾಡಿದರು. ಈ ಸಂದರ್ಭದಲ್ಲಿ ಎಚ್.ಆರ್.ಶ್ರೀನಾಥ, ಎಸ್.ಬಿ.ಖಾದ್ರಿ, ಇನ್ನಿತರರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಕಂದಾಯ ಇಲಾಖೆ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
0 comments:
Post a Comment
Click to see the code!
To insert emoticon you must added at least one space before the code.