PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ನ. ೨೧. ಯಾರನ್ನೂ ಬೇಡದ ಬೇಡ ಸಮುದಾಯದವರು ಇಂದು ಶಿಕ್ಷಣ ಪಡೆಯಬೇಕು ಮುಂದೆ ಬರಬೇಕು ಎಂದು ನಗರಸಭೆ ಸದಸ್ಯೆ ಇಂದಿರಾ ಭಾವಿಕಟ್ಟಿ ಕರೆ ನೀಡಿದರು.
ಅವರು ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಮರ್ಹ ವಾಲ್ಮೀಕಿ ನಾಯಕ ಸಂಘ ದಿಂದ ಏರ್ಪಡಿಸಲಾಗಿದ್ದ ೩ನೇ ವರ್ಷದ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು, ಸಮಾಜಕ್ಕೆ ಎಲ್ಲವನ್ನೂ ನೀಡಿದ ಬೇಡ ಕುಲದ ಯುವಕರು ಶಕ್ತಿಬೆಳೆಸಿಕೊಳ್ಳಬೇಕು ಹಾಗೂ ರಾಜಕೀಯವಾಗಿ ಮೇಲೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಕೆನರಾ ಬ್ಯಾಂಕ್ ಅಧಿಕಾರಿ ನೀಲಪ್ಪ ಭಾವಿಕಟ್ಟಿ ಮಾತನಾಡಿ ಸಮಾಜದ ಒಳಜಗಳಗಳನ್ನು ಮರೆತು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಬರುವ ದಿನಗಳಲ್ಲಿ ವಾಲ್ಮೀಕಿ ಸಮುದಾಯ ಒಗ್ಗಟ್ಟಿನಿಂದ ಮುನ್ನಡೆಯದಿದ್ದರೆ ಸಾವು ಹಾಗೂ ಸೋಲು ಖಚಿತ, ಈಗ ಸುಧಾರಿಸದಿದ್ದರೆ ಮತ್ತೆ ಒಂದು ದಶಕ ಹಿಂದೆ ಬೀಳಬಹುದು, ಅಖಂಡ ಕನಾರ್ಟಕದ ಬೇಡ, ವಾಲ್ಮೀಕಿ, ತಳವಾರ ನಾಯಕ ಸಮಾಜ ಒಂದಾಗಿ ನಿಂತರೆ ಎಲ್ಲಾರೀತಿಯ ಅಧಿಕಾರ ತಾನಾಗಿ ಬರುತ್ತೆ ಇಲ್ಲವಾದರೆ ತಾನಾಗಿ ಹಾಳಾಗಿ ಹೋಗುತ್ತೆ. ಒಡೆದು ಆಳುವ ರಜಕಾರಣಿಗಳಿಂದ ಎಚ್ಚರದಿಂದ ಎರಬೇಕು ಒಂದಾಗಿ ಒಳ್ಳೆಯ ವ್ಯಕ್ತಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಸಮಾಜಕ್ಕೆ ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಶರಣಪ್ಪ ತಂಬ್ರಳ್ಳಿ ಮಾತನಾಡಿ ವಾಲ್ಮೀಕಿ ಸಮಾಜ ನಾಡಿಗೆ ನೀಡಿದ ಕೊಡುಗೆ ಅಪಾರವೆಂದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಯಮಕಪ್ಪ ಕಾರಟಗಿ, ತುಗಲೆಪ್ಪ ಅಬ್ಬಿಗೇರಿ, ಶರಣಪ್ಪ ಕಟಗಿಹಳ್ಳಿ, ಕರಿಯಪ್ಪ ಕಾರಟಗಿ, ಮಂಜುಳಾ ಕಾರಟಗಿ, ಚನ್ನಪ್ಪ ಕಾರಟಗಿ, ಯಮನಪ್ಪ ಕ್ಯಾಡೇದ, ದುರುಗಪ್ಪ ಕಟಗಿಹಳ್ಳಿ, ವೆಮಕಟೇಶ ಈಳಗೇರ, ನಿಂಗಪ್ಪ ಕಾರಟಗಿ, ಹಂಶನ"ಯ ಬಳಿಗಾರ, ಶಂಕರಗೌಡ ಮಾಲಿಪಾಟೀಲ, ಯಂಕಪ್ಪ ಮೆತ್ತಗಲ್, ಮರಿಯಪ್ಪ ಭೋವಿ, ಅಮಾತೆಪ್ಪ ಹಳೆಕುಮಟ, ರಾಮಪ್ಪ ಕುರಿ, ಯಮನೂರಪ್ಪ ಕಲ್ಮನಿ, ರಾಮಪ್ಪ ಕಾರಟಗಿ, ಹನುಮಪ್ಪ ಹುಲೆಗುಡ್ಡ, ಹನುಮಂತ ಕಾರಟಗಿ ಇತರರು ಇದ್ದರು.
ಕುಮಾರಿ ಲಲಿತಾ ಅಬ್ಬಿಗೇರಿ ಪ್ರಾರ್ಥಿಸಿದರು, ಗೋ"ಂದ ಕಾರಟಗಿ ಸ್ವಾಗತಿಸದರು, ಶಿಕ್ಷಕ "ಶ್ವನಾಥ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಹನುಮಂತ ಪೋಲಿಸ್ ಪಾಟೀಲ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಂಗೆ ಸ್ಥಳಕ್ಕೆ ಹೋಗಿ ಬಂದ ಮೆರವಣಿಗೆ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾತು.

23 Nov 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top