PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೨೬: ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರಿಗೆ ಅನುಕೂಲವಾಗುವಂತೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ಖರೀದಿಸಲು ಪ್ರತಿ ಕ್ವಿಂಟಲ್‌ಗೆ ಸಾಮಾನ್ಯ ಭತ್ತಕ್ಕೆ ರೂ.೧೦೦ ಮತ್ತು ಎ ಶ್ರೇಣಿ ಭತ್ತಕ್ಕೆ ರೂ.೧೦೦ ಪ್ರೋತ್ಸಾಹ ಧನವನ್ನು ಘೋಸಿದೆ.
ಪ್ರಸ್ತಕ ಋತುವಿನಲ್ಲಿ ಕೇಂದ್ರ ಸಕಾರವು ಕನಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಎ ಗ್ರೇಡ್ ಭತ್ತಕ್ಕೆ ನಿಗಧಿಪಡಿಸಿರುವ ಪ್ರತಿ ಕ್ವಿಂಟಲ್‌ಗೆ ರೂ.೧೦೩೦ ಹಾಗೂ ರಾಜ್ಯ ಸಕಾರದ ಪ್ರೋತ್ಸಾಹ ಧನ ಪ್ರತಿ ಕ್ವಿಂಟಲಿಗೆ ರೂ.೧೦೦ ಗಳನ್ನು ಸೇರಿಕೊಂಡು ಪ್ರತಿ ಕ್ವಿಂಟಲ್‌ಗೆ ಒಟ್ಟು ರೂ.೧೧೩೦ ರಂತೆ ಮತ್ತು ಸಾಮಾನ್ಯ ಭತ್ತವನ್ನು ಪ್ರತಿ ಕ್ವಿಂಟಲ್‌ಗೆ ರೂ.೧೦೦೦ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಪ್ರತಿ ಕ್ವಿಂಟಲ್‌ಗೆ ರೂ.೧೦೦ಗಳನ್ನು ಸೇರಿಸಿಕೊಂಡು ಪ್ರತಿ ಕ್ವಿಂಟಲ್‌ಗೆ ರೂ.೧೧೦೦ ರಂತೆ ನೀಡಿ ಖರೀದಿಸಲಾಗುವುದು ಷರತ್ತುಗಳಿಗೆ ಒಳಪಟ್ಟು ರೈತರು ತಮ್ಮ ಭತ್ತವನ್ನು ನೀಡಿಲು ಕೋರಲಾಗಿದೆ.
ಈ ಸೌಲಭ್ಯವನ್ನು ಕಂದಾಯ ಇಲಾಖೆಂದ ದೃಢೀಕರಿಸಿದ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ನೀಡತಕ್ಕದ್ದು. ಸೌಲಭ್ಯದಡಿ ಸದರಿ ಹಂಗಾ"ನಲ್ಲಿ ಒಬ್ಬ ರೈತರಿಂದ ಗರಿಷ್ಠ ೧೦೦ ಕ್ವಿಂಟಲ್‌ಗಳವರೆಗೆ ಒಮ್ಮೆ ಮಾತ್ರ ಖರೀದಿಸತಕ್ಕದ್ದು ಸೌಲಭ್ಯವನ್ನು ಪ್ರಸ್ತುತ ಜಾರಿಯಲ್ಲಿರುವ ಆರ್.ಟಿ.ಸಿ ಪಹಣಿ ದೃಢೀಕರಣದೊಂದಿಗೆ ನೀಡುವ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಸೌಲಭ್ಯವನ್ನು ಪಡೆಯಲು ಗ್ರಾಮ ಲೆಕ್ಕಿಗರಿಂದ ಬೆಳೆ ದೃಢೀಕರಣ ಪತ್ರವನ್ನು ನೀಡತಕ್ಕದ್ದು. ಭಾತರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಎಫ್.ಎ.ಕ್ಯೂ ಗುಣ ಮಟ್ಟದ ಭತ್ತಕ್ಕೆ ಕೃ ಇಲಾಖೆ. ಖರೀದಿ ಸಂಸ್ಧೆ ಮತ್ತು ಭಾರತ ಅಹಾರ ನಿಗಮದಿಂದ ನಿಯೊಜಿಸಿದ ಅಧಿಕಾರಿಗಳಿಂದ ದೃಢೀಕರಿಸಿದ ನಂತರ ಪ್ರೋತ್ಸಾಹ ಧನ ನೀಡಲಾಗುವುದು. ಈ ಸೌಲಭ್ಯವು ದಿನಾಂಕ: ೩೧-೦೧-೨೦೧೦ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ.

26 Nov 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top