PLEASE LOGIN TO KANNADANET.COM FOR REGULAR NEWS-UPDATES






ಕೊಪ್ಪಳ ; ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದಲ್ಲಿ ದುಡಿಯುತ್ತಿರುವ ನೇಕಾರರ ಬಹುದಿನಗಳ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕೊಪ್ಪಳ ಜಿಲ್ಲಾ ಘಟಕದಿಂದ ಪ್ರತಿಭಟನಾ ಮೆರವಣಿಗೆ ಮತ್ತು ರಾಸ್ತಾರೋಖೋ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾಗ್ಯನಗರ,ಕುಕನೂರ ಮತ್ತು ಕಿನ್ನಾಳದ ನೇಕಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಗಳಿಗೆ ತಹಶೀಲದಾರರ ಮುಖಾಂತರ ಸಲ್ಲಿಸಲಾದ ಅರ್ಜಿಯಲ್ಲಿ ಕೆಎಚ್.ಡಿಸಿ ನೇಕಾರರ ಎಲ್ಲ ಮನೆ ಸಾಲ ಮನ್ನಾಮಾಡಬೇಕು,ನೇಕಾರರ ಮಜೂರಿ ಹೆಚ್ಚಿಸಬೇಕು, ತಿಪ್ಪ ಫಂಡಿನ ಹಣವನ್ನು ಸಂಪೂರ್‍ಣವಾಗಿ ನೇಕಾರರಿಗೆ ಮರಳಿಸಬೇಕು, ಕೆ ಎಚ್ಡಿಸಿಯಲ್ಲಿ ನಡೆದಿರುವ ಭ್ರಷ್ಟತೆಯ ಬಗ್ಗೆ ಲೋಕಾಯುಕ್ತರಿಂದ ತನಿಖೆಯಾಗಬೇಕು, ಭಾಗ್ಯ ಲಕ್ಷ್ಮೀ ಯೋಜನೆ ಹೆಸರಿನಲ್ಲಿ ಹೊರ ರಾಜ್ಯದಿಂದ ಪಾಲಿಸ್ಟರ್ ಸೀರೆ ಖರೀದಿಸುವ ಬದಲು ಇಲ್ಲಿಯೇ ನೇಕಾರರಿಂದ ಖರೀದಿಸಬೇಕು, ವಿದ್ಯಾವಿಕಾಸ ಸಮವಸ್ತ್ರ ಬಟ್ಟೆಯನ್ನು ಹೊರ ರಾಜ್ಯದಿಂದ ಖರೀದಿಸುವ ಬದಲು ಸಂಪೂರ್ಣ ಕೆಎಚ್ಡಿಸಿ ನೇಕಾರರಿಂದಲೇ ಉತ್ಪಾದಿಸಿ ಸರಬರಾಜು ಮಾಡಬೇಕು ಮತ್ತು ಇದಕ್ಕೆ ಸರಕಾರ ಮುಂಗಡವಾಗಿಯೇ ಹಣ ಮಂಜೂರಿಗೊಳಿಸಬೇಕು, ಕೆ ಎಚ್ ಡಿಸಿ ನೌಕರರು ಸಾವಿರ ಸಂಖ್ಯೆಯಲ್ಲಿದ್ದರೂ ಎಲ್ಲರೂ ಬೆಂಗಳೂರು ಹಿಡಿದು ಕೆಲಸ ಮಾಡದೇ ಸಂಬಳ ತಿನ್ನುತ್ತಿದ್ದಾರೆ, ಎಷ್ಟೋ ಶಾಖೆಗಳಿಗೆ ಸಿಬ್ಬಂದಿ ಇಲ್ಲದೆ ನೇಕಾರರಿಗೆ ತೊಂದರೆಯಾಗಿದೆ. ಹುಬ್ಬಳ್ಳಿ ಪ್ರದಾನ ಕಚೇರಿಗೆ ಸರಿಯಾದ ಸಿಬ್ಬಂದಿ ಬಂದಿಲ್ಲ ಕಾರಣ ಎಲ್ಲ ಜಾಗೆಗಳಿಗೂ ಅವರನ್ನು ವರ್‍ಗಾಯಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಹೇಳಲಾಗಿದೆ.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘ, ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ವಿಠ್ಠಪ್ಪ ಗೋರಂಟ್ಲಿ, ಟಯುಸಿಐನ ಡಿ.ಎಚ್.ಪೂಜಾರ್, ಕೆ.ಬಿ.ಗೋನಾಳ, ಬಸವರಾಜ ನರೇಗಲ್,ಎ ಐಟಿಯುಸಿಯ ಬಸವರಾಜ ಶೀಲವಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಬೇಡಿಕೆ ಈಡೇರಿಸುವವರೆಗೆ ವಿವಿದ ಹಂತಗಳಲ್ಲಿ ಹೋರಾಟ ನಡೆಸಲಾಗುವುದು.ಏನಾದರೂ ಅಹಿತಕರ ಘಟನೆ ನಡೆಯಲು ಅವಕಾಶ ನೀಡದೆ ತಕ್ಷಣ ಬೇಡಿಕೆ ಈಡೇರಿಸಲು ಆಗ್ರಹಿಸಿದರು. ನೇಕಾರರ ಮುಖಂಡರಾದ ಮಾಬುಸಾಬ ಹೀರಾಳ, ಬಸಣ್ಣ ನರಗುಂದ, ಬಸವಲಿಂಗಪ್ಪ, ರಮೇಶ ಹ್ಯಾಟಿ, ಚಂದ್ರು ಉಂಕಿ, ಗೋಪಾಲ ಕುದರಿಮೋತಿ , ಶಿವಪ್ಪ ಎಚ್. ಸೇರಿದಂತೆ ಭಾಗ್ಯನಗರ, ಕಿನ್ನಾಳ, ಕುಕನೂರಿನ ನೇಕಾರರು ಭಾಗವಹಿಸಿದ್ದರು.

29 Oct 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top