PLEASE LOGIN TO KANNADANET.COM FOR REGULAR NEWS-UPDATES





ಕನ್ನಡನೆಟ್.ಕಾಂ ಕೊಪ್ಪಳ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ಜಿಲ್ಲೆಯ ವಿವಿದೆಡೆಯಿಂದ ುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ 40 ಹೆಚ್ಚು ಕಾಲೆಜ್ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕನ್ನಡನೆಟ್.ಕಾಂ ರಸಪ್ರಶ್ನೆ ಕಾರ್‍ಯಕ್ರಮ ೨೦೧೦
ಕೊಪ್ಪಳ : ಕನ್ನಡನೆಟ್.ಕಾಂ ಇಂಟರ್‌ನೆಟ್ ಪತ್ರಿಕೆಯ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹೈಸ್ಕೂಲ್ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್‍ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಜಿಲ್ಲೆಯ ವಿವಿದೆಡೆಯಿಂದ ಬಂದಂತಹ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಸಪ್ರಶ್ನೆ ಕಾರ್‍ಯಕ್ರಮವನ್ನು ಹಿರಿಯ ಪತ್ರಕರ್ತ,ಸಾಹಿತಿ ವಿಠ್ಠಪ್ಪ ಗೋರಂಟ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವುದರ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಯು ಯಾವತ್ತೂ ವಿದೇಯತೆಯನ್ನು ರೂಡಿಸಿಕೊಂಡು ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಗೊತ್ತಿಲ್ಲದ ವಿಚಾರ ಕೇಳಿ ತಿಳಿದುಕೊಳ್ಳಬೇಕು ಇದರಿಂದ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆ ಸಾಧ್ಯ ಎಂದರು. ಗೆಲ್ಲುವದಷ್ಟೇ ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ . ಜಿಲ್ಲೆಯ ವಿವಿದ ತಾಲೂಕುಗಳಿಂದ ಬಂದಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡನೆಟ್.ಕಾಂ ನ ಸಂಪಾದಕ ಸಿರಾಜ್ ಬಿಸರಳ್ಳಿ ಮಾತನಾಡಿ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಇಂಟರ್ ನೆಟ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರ ಪ್ರತಿಭೆಗೊಂದು ವೇದಿಕೆ ಕಲ್ಪಿಸುವ ಉದ್ದೇಶದಿಂದ ಕನ್ನಡನೆಟ್.ಕಾಂ ವಿವಿದ ಕಾರ್‍ಯಕ್ರಮ ಹಮ್ಮಿಕೊಳ್ಳುತ್ತಿದೆ. ಅದರ ಅಂಗವಾಗಿ ರಸಪ್ರಶ್ನೆ ಕಾರ್‍ಯಕ್ರಮ ನಡೆಸಲಾಗುತ್ತಿದ್ದು ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲು ಸಹಕಾರಿಯಾಗಲಿದೆ ಎಂದರು. ಕನ್ನಡನೆಟ್.ಕಾಂ ಪತ್ರಿಕೆಗೆ ೩೦ಕ್ಕೂ ಹೆಚ್ಚು ದೇಶಗಳಲ್ಲಿ ಓದುಗರಿದ್ದು ಕನ್ನಡ ಭಾಷೆಯಲ್ಲಿ ಜಿಲ್ಲೆಯ ಸಮಗ್ರ ಸುದ್ದಿ, ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು. ನಮ್ಮ ಜಿಲ್ಲೆಯಲ್ಲಿ ಇಂಟರ್ ನೆಟ್ ಬಗ್ಗೆ ಹೆಚ್ಚಿನ ಅರಿವು ಮೂಡಿಲ್ಲ. ಜ್ಞಾನದ ಭಂಡಾರವಾಗಿರುವ ಇಂಟರ್ ನೆಟ್ ವಿದ್ಯಾರ್ಥಿಗಳ ಜ್ಞಾನಾಭಿವೃದ್ದಿಯನ್ನು ಹೆಚ್ಚಿಸುತ್ತದೆ. ಅದರ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಕನ್ನಡನೆಟ್.ಕಾಂ ಸಹ ಸಂಪಾದಕ ಹುಸೇನ್ ಪಾಷಾ, ಗಂಗಾವತಿ ಎನ್ ಆರ್ ಹೈಸ್ಕೂಲ್ ಶಿಕ್ಷಕರು, ಶಿಕ್ಷಕಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಉಪನ್ಯಾಸಕ ಶಿ.ಕಾ.ಬಡಿಗೇರ ಕಾರ್‍ಯಕ್ರಮ ನಿರ್ವಹಿಸಿದರು.

ಹೈಸ್ಕೂಲ್ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ರಸಪ್ರಶ್ನೆ ಕಾರ್‍ಯಕ್ರಮ ನಡೆಸಲಾಯಿತು. ಕಾರ್‍ಯಕ್ರಮವನ್ನು ಕನ್ನಡನೆಟ್.ಕಾಂ ಸಂಪಾದಕ ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು. ಒಟ್ಟು ನಲ್ವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ರಸಪ್ರಶ್ನೆ ಕಾರ್‍ಯಕ್ರಮದಲ್ಲಿ ವಿಜೇತರಾದವರು

ಹೈಸ್ಕೂಲ್ ವಿಭಾಗ
ಪ್ರಥಮ ಬಸವರಾಜ್ ಮತ್ತು ವಿಶಾಲ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ,ಕೊಪ್ಪಳ
ದ್ವಿತೀಯ ಸಂಗಮೇಶ್ ಎಂ ಮತ್ತು ಅರವಿಂದ ಡಿ ಎನ್ ಆರ್ ಹೈಸ್ಕೂಲ್ ವಿದ್ಯಾನಗರ, ಗಂಗಾವತಿ
ತೃತೀಯ ತುಳಸಪ್ಪ ಮತ್ತು ದೀಪಾ ಎಚ್ ಪಿಎಸ್ ಹೊಸಲಿಂಗಾಪೂರ
ಚತುರ್ಥ ಶಕುಂತಲಾ ಮತ್ತು ಮಂಜುನಾಥ ಬಳ್ಳಾರಿ ಸರಕಾರಿ ಪ್ರೌಢಶಾಲೆ ಹಿರೇಬಿಡನಾಳ

ಕಾಲೇಜು ವಿಭಾಗ
ಪ್ರಥಮ ಗಣೇಶ ಪೂಜಾರ್ ಮತ್ತು ಸೈಯದ್ ಗೌಸ್ ಜಗಜ್ಯೋತಿ ಬಸವೇಶ್ವರ ಬಿಬಿಎಂ ಕಾಲೇಜ್ ಕೊಪ್ಪಳ
ದ್ವಿತೀಯ ಗವಿಸಿದ್ದಯ್ಯ ಹಿರೇಮಠ ಮತ್ತು ಹನುಮಂತಗೌಡ ತಲ್ಲೂರ ಸ.ಪ.ಪೂ.ಕಾಲೇಜ್ ಯಲಬುರ್ಗಾ
ತೃತೀಯ ಎಚ್.ಆರ್.ಸುದರ್ಶನ್ ಮತ್ತು ಪ್ರಧ್ಯುಮ್ನ ದೇಸಾಯಿ ಸ್ವಾಮಿ ವಿವೇಕಾನಂದ ಪಿಯು ಕಾಲೇಜ್ ಕೊಪ್ಪಳ
ಸಮಾಧಾನಕರ ಬಹುಮಾನಗಳು : ರಾಜಪ್ಪ ಮತ್ತು ಶರೀಪ್ ಸಾಬ ಸ.ಪ.ಪೂ.ಕಾಲೇಜ್ ಗಂಗಾವತಿ, ಅರುಣ್ ಕುಮಾರ್ ಮತ್ತು ಪ್ರಭು ಶ್ರೀ ಗವಿಸಿದ್ದೇಶ್ವ ಕಾಲೇಜ್ ಕೊಪ್ಪಳ.
ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.
16 Aug 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top