PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಕೊಪ್ಪಳ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ಇಂದು ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಪತ್ರಕರ್ತರಲ್ಲಿರುವ ಆಂತರಿಕ ಭಿನ್ನಮತದ ಫಲವಾಗಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಪತ್ರಕರ್ತರ ಸಂಘದ ಸಭೆ ಕಡೆಯಲು ಅನೇಕ ಬಾರಿ ಒತ್ತಾಯಿಸಿದರೂ ಅಧ್ಯಕ್ಷ , ಪ್ರದಾನ ಕಾರ್ಯದರ್ಶಿಗಳು ಕ್ಯಾರೆ ಎನ್ನದ ಕಾರಣಕ್ಕೆ ಪರ್ಯಾಯವಾಗಿ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಿ ರಾಜ್ಯ ಸಮಿತಿ ಅನುಮೋದನೆಗೆ ಕಳುಹಿಸಿಕೊಡಲಿದ್ದಾರೆಂದು ತಿಳಿದು ಬಂದಿದೆ.

ಇದರೊಂದಿಗೆ ಈಗಾಗಲೇ ಪತ್ರಕರ್ತರ ಗುಂಪೊಂದು ಸಮ್ಮೇಳನದ ಹೆಸರಿನಲ್ಲಿ ಚಂದಾ ಹಣ ಎತ್ತುವ ಬಗ್ಗೆ ಮಾಹಿತಿ ಇದ್ದು ಯಾವುದೇ ಕಾರಣಕ್ಕೂ ಹಣ ನೀಡದಂತೆ ಪತ್ರಕರ್ತರ ಒಂದು ಬಣ ಸರಕಾರಿ ಕಚೇರಿಗಳಿಗೆ ತಿಳಿಸಿದೆ ಎಂದು ರಹಸ್ಯ ಮೂಲಗಳು ತಿಳಿಸಿವೆ.

ಸದರಿ ಪ್ರಭಾರಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ವಿರುದ್ಧದ ಅಸಹನೆಯೇ ಈ ಎಲ್ಲ ಬೆಳವಣಿಗೆಗೆ ಕಾರಣವೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಪತ್ರಕರ್ತರ ಸಂಘ ಇಷ್ಟರಲ್ಲೇ ಅಧಿಕೃತವಾಗಿ ಎರಡು ತುಂಡಾಗುವ ಸಂಭವವೇ ಹೆಚ್ಚಿದೆ.

ಈ ಬಗ್ಗೆ ಪ್ರಬಾರಿ ಅಧ್ಯಕ್ಷ ಹರೀಶ್ ರನ್ನು ಸಂಪರ್ಕಿಸಲು ಯತ್ನಿಸಿದರೆ ಅವರು ನಗರದಲ್ಲಿದ್ದರೂ ನಾಟ್ ರಿಚೇಬಲ್ ಆಗಿದ್ದದ್ದು ವಿಶೇಷವಾಗಿತ್ತು.

22 Jun 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top