ಕೊಪ್ಪಳ ಜೂ. : ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ನಿ"ಸಲಾಗುತ್ತಿರುವ ಆಸರೆ ಯೋಜನೆಯ ಪುನರ್ವಸತಿ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಹಣ ಬಳಸಿ ಕುಡಿಯುವ ನೀರು ಸೇರಿದಂತೆ ಇತರೆ ಕಾರ್ಯಗಳಿಗೆ ಹಣ ಬಳಸದಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಇಂದು ಅವರು ಮಾತನಾಡುತ್ತಿದ್ದರು. ನೆರೆಪೀಡಿತ ಪ್ರದೇಶಗಳ ಜನರ ಪುನರ್ವಸತಿಗಾಗಿ ಸರ್ಕಾರ ಆಸರೆ ಯೋಜನೆಯಡಿ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಆದಾಗ್ಯೂ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ "ಭಾಗದ ಅಧಿಕಾರಿಗಳು ಆಸರೆ ಯೋಜನೆಯ ಪುನರ್ವಸತಿ ಮನೆಗಳಿಗಾಗಿ ಕುಡಿಯುವ ನೀರು ಪೂರೈಸಲು ೨೬೦ ಲಕ್ಷ ರೂ. ಗಳನ್ನು ವರ್ಗಾಸಿರುವುದು ಸರಿಯಲ್ಲ. ಈಗಾಗಲೆ ಪುನರ್ವಸತಿ ಗ್ರಾಮಗಳ ಕುಡಿಯುವ ನೀರಿಗಾಗಿ ವೆಚ್ಚ ಮಾಡಲಾಗಿರುವ ಹಣವನ್ನು ಜಿಲ್ಲಾಧಿಕಾರಿಗಳ ನೆರೆಪರಿಹಾರ ನಿಧಿಂದ "ಂದಕ್ಕೆ ಪಡೆದುಕೊಳ್ಳುವಂತೆ ಜಿ.ಪಂ. ಸದಸ್ಯರು ಒಕ್ಕೊರಲಿನಿಂದ ಆಗ್ರಹಪಡಿಸಿದರು. ಅಲ್ಲದೆ ಆ ಹಣವನ್ನು ಜಿಲ್ಲಾಧಿಕಾರಿಗಳಿಂದ "ಂದಕ್ಕೆ ಪಡೆದುಕೊಂಡು ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮಗಳಿಗೆ ನೀರು ಪೂರೈಕೆಗಾಗಿ ಬಳಸಿಕೊಳ್ಳುವಂತಾಗಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾತು. ಇದರನ್ವಯ ಜಿ.ಪಂ. ಅಧ್ಯಕ್ಷ ರಾಘವೇಂದ್ರ "ಟ್ನಾಳ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ. ಪುನರ್ವಸತಿ ಗ್ರಾಮಗಳಿಗಾಗಿ ಖರ್ಚು ಮಾಡಲಾದ ಹಣವನ್ನು ಜಿಲ್ಲಾಧಿಕಾರಿಗಳಿಂದ ವಾಪಸ್ ಪಡೆಯುವಂತೆ ಆದೇಶಿಸಿದರು.
ರೈತರಿಗೆ ಅಗತ್ಯವೆಂದಾದಲ್ಲಿ, ಕಿನ್ನಾಳ ಮತ್ತು ಸಂಗಾಪುರದಲ್ಲಿ ಉಪಕೇಂದ್ರವನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃ ಜಂಟಿ ನಿರ್ದೇಶಕ ಎಲ್.ಎನ್. ಬೆಳವಣಕಿ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಜಿ.ಪಂ. ಸ್ಥಾಸ"ತಿ ಅಧ್ಯಕ್ಷರುಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಮೂರ್ತಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವ"ಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.