PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ : ಯಾವಾಗಲೂ ಸಾಹಿತ್ಯವನ್ನೇ ಧ್ಯಾನಿಸುತ್ತ ತಮ್ಮ ದುಡಿಮೆಯ ಕೆಲಭಾಗವನ್ನು ಸಾಹಿತ್ಯದ ಕೆಲಸಗಳಿಗೆ ಮೀಸಲಿಟ್ಟಿರುವ ಡಾ.ಮಹಾಂತೇಶ ಮಲ್ಲನಗೌಡರು ಕಿರಿಯರ ಜೊತೆಗೆ ಕಿರಿಯರಾಗಿ ಹಿರಿಯರ ಜೊತೆ ಹಿರಿಯರಾಗಿ ಸದಾ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ ಅವರು ಇಂತಹ ನೂರಾರು ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುವಂತಾಗಲಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಹೇಳಿದರು . ಅವರು ಮಂಗಳವಾರ ೧-೬-೨೦೧೦ ರಂದು ಡಾ.ಮಹಾಂತೇಶ ಮಲ್ಲನಗೌಡರ ಹುಟ್ಟುಹಬ್ಬದ ಪ್ರಯುಕ್ತ ಕನ್ನಡನೆಟ್.ಕಾಂ ಇ-ಪತ್ರಿಕೆ ಮತ್ತು ಕವಿಸಮೂಹ ಕೊಪ್ಪಳ ಇವರು ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರಳವಾಗಿ ಎಲ್ಲರಿಗೂ ಆದರ್ಶರಾಗಿ ಬದುಕುತ್ತಿರುವ ಡಾ.ಮಹಾಂತೇಶ ಮಲ್ಲನಗೌಡರು ತಮ್ಮ ಕವನಗಳಿಂದ ಪ್ರೇಮಕವಿ ಎಂದೇ ಹೆಸರುವಾಸಿಯಾಗಿದ್ದಾರೆ. ಇವರ ಸಾಹಿತ್ಯ ಸೇವೆ ಇನ್ನೂ ಹೆಚ್ಚಾಗಲಿ ಎಂದು ಆಶಿಸಿದರು.

ಪ್ರಾರ್ಥನೆಯನ್ನು ಶೇಖರಪ್ಪ ಶೇಡ್ಮಿ ಮಾಡಿದರು. ಸ್ವಾಗತ ಭಾಷಣವನ್ನು ಮಾಡಿದ ಕನ್ನಡನೆಟ್.ಕಾಂ ನ ಸಿರಾಜ್ ಬಿಸರಳ್ಳಿ ಈ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುವದರಲ್ಲಿ ಕನ್ನಡನೆಟ್.ಕಾಂ ಮತ್ತು ಕವಿಸಮೂಹ ಕೇವಲ ನಿಮಿತ್ತ ಮಾತ್ರ . ತಮ್ಮ ಹುಟ್ಟುಹಬ್ಬವನ್ನು ಸಾಹಿತ್ಯ ಕಾರ್‍ಯಕ್ರಮದೊಂದಿಗೆ ಆಚರಿಸಬೇಕು ಎನ್ನುವ ಜಿಲ್ಲೆಯ ಹಿರಿಯ ಕವಿ, ಪ್ರೇಮ ಕವಿ ಡಾ.ಮಹಾಂತೇಶ ಮಲ್ಲನಗೌಡರ ಅವರ ಸದಾಶಯದಿಂದ ಈ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ, ಅವರ ಸಾಹಿತ್ಯ ಸೇವೆ ಇದೇ ರೀತಿ ಮುಂದುವರೆಯಲಿ ಕಿರಿಯರಿಗೆ ಮಾರ್ಗದರ್ಶನ ನೀಡುವಂತಾಗಲಿ ಎಂದರು.

ನಂತರ ಡಾ.ಮಹಾಂತೇಶ ಮಲ್ಲನಗೌಡರಿಗೆ ಕನ್ನಡನೆಟ್.ಕಾಂ, ಕವಿಸಮೂಹ ಹಾಗು ಮಿತ್ರಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕುಮಾರವ್ಯಾಸ ಭಾರತ ಕಾವ್ಯವಾಚನಕ್ಕೂ ಮೊದಲು ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ ಮಹಾಂತೇಶ ಮಲ್ಲನಗೌಡರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರು ಹಿರಿಕಿರಿಯರು ಎನ್ನುವ ಯಾವುದೇ ಬೇದ ಬಾವವಿಲ್ಲದ ಎಲ್ಲರೊಡನೆ ಸೇರಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡವರು.ಅವರ ಹುಟ್ಟು ಹಬ್ಬದಂದು ಈ ಕಾರ್‍ಯಕ್ರಮ ಹಮ್ಮಿಕೊಂಡಿದ್ದು ಅರ್ಥಪೂರ್ಣ ಎಂದರು. ನಂತರ ಕುಮಾರವ್ಯಾಸ ಭಾರತ ಕಾವ್ಯ ವಾಚನ ನಡೆಯಿತು. ಹಳೆಗನ್ನಡದ ಕಾವ್ಯವನ್ನು ಓದುವದರ ಜೊತೆಗೆ ವಿಠ್ಠಪ್ಪ ಗೋರಂಟ್ಲಿಯವರು ಅದಕ್ಕೆ ಅರ್ಥಪೂರ್ಣವಾಗಿ ವಿವರಣೆಯನ್ನು ನೀಡಿದರು. ಯುದ್ದ ಭೂಮಿಯಲ್ಲಿ ಕೃಷ್ಣ ಮತ್ತು ಅರ್ಜುನರ ನಡುವೆ ನಡೆಯುವ ಮಾತುಕತೆ, ಕೃಷ್ಣ ಅರ್ಜುನನನ್ನು ಯುದ್ದಕ್ಕಾಗಿ ಸಿದ್ದಪಡಿಸುವ ರೀತಿ, ಶಸ್ತ್ರತ್ಯಾಗಕ್ಕೆ ಸಿದ್ದನಾದ ಅರ್ಜುನನ್ನು ಹೀಗಳೆಯುವ ಕೃಷ್ಣನ ವಾಕ್ ಚಾತುರ್‍ಯ ಹೀಗೆ ಪ್ರತಿಯೊಂದು ನುಡಿಗೂ ಇರುವ ಅರ್ಥವನ್ನು ಕಾವ್ಯಾತ್ಮಕವಾಗಿ, ಅಧ್ಯಾತ್ಮಿಕವಾಗಿ ವಿವರಿಸಿದ್ದು ಸಭಿಕರ ಮೆಚ್ಚುಗೆ ಪಡೆಯಿತು.

ಅಧ್ಯಕ್ಷಿಯ ಭಾಷಣ ಮಾಡಿದ ಬಿ.ಎಸ್.ಪಾಟೀಲರು -ಸ್ನೇಹ ಜೀವಿಗಳಾಗಿರುವ ಸಾಹಿತ್ಯ ಪ್ರೇಮಿ ಡಾ.ಮಹಾಂತೇಶ ಮಲ್ಲನಗೌಡರು ಇನ್ನೂ ನೂರಾರು ವರ್ಷ ಬದುಕಿ ಬಾಳಲಿ ಕಿರಿಯರಿಗೆ ಅವರ ಮಾರ್ಗದರ್ಶನ ಸಿಗಲಿ ಎಂದು ಹಾರೈಸಿದರು. ಸರಳತೆ ಎಂದರೆ ಮಲ್ಲನಗೌಡರು ಎನ್ನುವಷ್ಟು ಸರಳವಾಗಿ ಬದುಕುತ್ತಿರುವ ಅವರನ್ನು ನೋಡಿ ನಾವು ಕಿರಿಯರು ಕಲಿಯುವುದು ಬಹಾಳ ಇದೆ. ಅವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ ಎಂದು ಹಾರೈಸಿ ಕುಮಾರವ್ಯಾಸ ಭಾರತ ವಾಚನ ಮಾಡಿದ ವಿಠ್ಠಪ್ಪ ಗೋರಂಟ್ಲಿಯವರು ತಮ್ಮ ವಾಚನದ ಮೂಲಕ, ವಿವರಣೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ ಎಂದರು. ವೇದಿಕೆಯ ಮೇಲೆ ಐ.ವಿ.ಪತ್ತಾರ, ಮಹಾಂತೇಶ ಮಲ್ಲನಗೌಡರ್, ಬಿ.ಸಿಪಾಟೀಲ್, ಎಚ್.ಎಸ್.ವಾಲ್ಮೀಕಿ,ಎ.ಎಂ.ಮದರಿ ಜಿ.ಎಸ್.ಗೋನಾಳ, ಶಿ.ಕಾ.ಬಡಿಗೇರ ಉಪಸ್ಥಿತರಿದ್ದರು.

ಸದಾನಂದ ಜ್ಞಾನಾಶ್ರಮವು ಸಭಿಕರಿಂದ ತುಂಬಿತ್ತು. ಕಾರ್‍ಯಕ್ರಮದ ನಿರೂಪಣೆಯನ್ನು ಕವಿ ಶ್ರೀನಿವಾಸ ಚಿತ್ರಗಾರ ಮಾಡಿದರು. ವಂದನಾರ್ಪಣೆಯನ್ನು ಶಿ.ಕಾ.ಬಡಿಗೇರ ನೆರವೇರಿಸಿದರು.ಕಾರ್‍ಯಕ್ರಮದಲ್ಲಿ ಬಸವರಾಜ ಶೀಲವಂತರ, ಮಹೇಶ ಬಳ್ಳಾರಿ, ಹನುಮಂತಪ್ಪ ಅಂಡಗಿ, ವಾಯ್.ಬಿ.ಜೂಡಿ, ಜಯಕರ್ನಾಟಕ ಸಂಘಟನೆಯ ವಿಜಯಕುಮಾರ ಕವಲೂರ, ಬಸವೇಶ್ವರ ಯುವಕ ಮಂಡಳದ ಶಿವಕುಮಾರ,ವೀರಣ್ಣ ಹುರಕಡ್ಲಿ, ಪ್ರಲ್ಹಾದ ಗಂಗಾವತಿ, ಪಂಪಣ್ಣ ಬೆಟಗೇರಿ,ಶ್ರೀಮತಿ ರಡ್ಡೇರ್ ಮತ್ತು ಶ್ರೀಮತಿ ಮಲ್ಲನಗೌಡರ್ ಹಾಗೂ ಸದಾನಂದ ಜ್ಞಾನಾಶ್ರಮದ ಸದ್ಭಕ್ತರು ಉಪಸ್ತಿತರಿದ್ದರು.

03 Jun 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top