ಬೆಂಗಳೂರು, ಮೇ : ರಾಜ್ಯ ಬಿಜೆಪಿ ಸರಕಾರ ಜಾರಿಗೆ ತರಲು ಬಯಸಿರುವ ಕರ್ನಾಟಕ ಗೋಹತ್ಯೆ ಕಾಯ್ದೆಗೆ ಚರ್ಚ್ ಆಫ್ ಸೌತ್ ಇಂಡಿಯಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಇಂದು ಸಿಎಸ್ಐ ಕಾಂಪೌಂಡ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅನೇಕ ಮುಖಂಡರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ರೀತಿಯಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಅದೇ ರೀತಿ ಚರ್ಚ್ಗಳ ಮೇಲೆ ದಾಳಿ, ರೈತರ ಮೇಲೆ ಗೋಲಿಬಾರ್, ಸರಕಾರ ಎಲ್ಲ ಹಂತಗಳಲ್ಲೂ ಜನ ವಿರೋಧಿ ನೀತಿ ಅನುಸರಿಸತ್ತ ಬಂದಿದೆ. ಈಗಾಗಲೇ ಜಾರಿಯಲ್ಲಿರುವ 1964ರ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆ-2010ನ್ನು ಸರಕಾರ ಜಾರಿಗೊಳಿಸಲು ಮುಂದಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟು ಕೊಂಡು ಈ ಕಾಯ್ದೆ ಜಾರಿಗೊಳಿಸ ಲಾಗುತ್ತಿದೆ ಎನ್ನುವುದಕ್ಕಿಂತ ಈ ನಾಡಿನ ರೈತ ಸಮುದಾಯವನ್ನು ಒಕ್ಕಲೆಬ್ಬಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂಬ ಅಕ್ರೋಶ ಸಭೆಯಲ್ಲಿ ಕೇಳಿ ಬಂತು. ಇದು ಈ ನಾಡಿನ ಬಹುಸಂಖ್ಯಾತರ ಆಹಾರ ಪದ್ದತಿಯ ಮೇಲೆ ನಡೆಸುತ್ತಿರುವ ದಾಳಿ. ಕಾನೂನು ಜಾರಿಗೆ ಬಂದಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ರೈತ ಸಮುದಾಯದ ಮೇಲೆ ತೀವ್ರ ತರವಾದ ಆರ್ಥಿಕ ಪೆಟ್ಟು ಬೀಳುತ್ತದೆ. ಸಂಘಪರಿವಾರದ ಸಂಘಟನೆಗಳಾದ ಬಜರಂಗದಳ, ಶ್ರೀರಾಮ ಸೇನೆ ಇತ್ಯಾದಿಗಳು ಈ ಕಾನೂನು ದುರ್ಬಳಕೆ ಮಾಡಿಕೊಳ್ಳುವ ಎಲ್ಲಸಾಧ್ಯತೆಗಳಿವೆ. ಅಂಥವರ ಕೈಗೆ ಕಾನೂನು ನೀಡುವ ಕುತಂತ್ರದಿಂದಲ್ಲೆ ಸರಕಾರ ಈ ಕಾಯ್ದೆ ಜಾರಿಗೆ ತರಲು ಹೊರಟಿದೆ ಎಂದು ಆಪಾದಿಸಲಾ ಯಿತು.ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣ ಸಂವಿಧಾನ ಬಾಹಿರ, ಪ್ರಜಾಸತ್ತಾತ್ಮಕ ವೌಲ್ಯಗಳಿಗೆ ಮಾರಕ ಹಾಗೂ ಜನ ವಿರೋಧಿಯಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಒಂದೊಮ್ಮೆ ಜಾರಿಗೆ ತಂದಲ್ಲಿ ಇದರ ವಿರುದ್ಧ ಉಗ್ರ ಹೋರಾಟ ಮಾಡಲಾ ಗುವುದು ಎಂಬ ಎಚ್ಚರಿಕೆ ನೀಡಲಾ ಯಿತು.ಸಭೆಯಲ್ಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಎಫ್. ಸಲ್ಡಾನಾ, ಅಹಿಂದ ಮುಖಂಡ ಪ್ರೊ ಎನ್.ವಿ. ನರಸಿಂಹಯ್ಯ, ವಿಧಾನ ಪರಿಷತ್ ಮಾಜಿ ಸಭಾಪತಿ ಡೆವಿಡ್ ಸಿಮಿಯೋನ್, ಟಿಪ್ಪು ಸಂಯುಕ್ತ ರಂಗದ ಸರ್ದಾರ್ ಅಹ್ಮದ್ ಖುರೇಷಿ, ಜನ ಜಾಗೃತಿ ಸಂಯುಕ್ತ ವೇದಿಕೆಯ ಬೇಗ್ ಮುಂತಾದವರು ಮಾತನಾಡಿದರು. ಚರ್ಚ್ ಆಫ್ ಸೌತ್ ಇಂಡಿಯಾದ ದಲಿತ ಮತ್ತು ಅಲ್ಪಸಂಖ್ಯಾತ ಸಮಿತಿಯ ನಿರ್ದೇಶಕ ರೆ.ಡಾ. ಮನೋಹರ್ ಚಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು
ಕೃಪೆ: ಸಾಹಿಲ್/ಗಲ್ಫ್ ನ್ಯೂಸ್
0 comments:
Post a Comment
Click to see the code!
To insert emoticon you must added at least one space before the code.