ಕೊಪ್ಪಳ ಮೇ : ಕೆಲವು ಖಾಸಗಿ ವ್ಯಕ್ತಿಗಳು, ತಾವು ಲೋಕಾಯುಕ್ತ ಬಾತ್ಮೀದಾರರೆಂದು ಇಲ್ಲವೇ ಮಾಹಿತಿದಾರರೆಂದು ಹೇಳಿಕೊಂಡು, ಸರ್ಕಾರಿ ನೌಕರರನ್ನು ವಂಚಿಸುತ್ತಿರುವುದಾಗಿ ತಿಳಿದುಬಂದಿದ್ದು, ಇಂತಹವರ ಬಗ್ಗೆ ಸರ್ಕಾರಿ ನೌಕರರು, ಸಾರ್ವಜನಿಕರು ಎಚ್ಚರವಹಿಸುವಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ. ಮಹಾಂತೇಶ್ ಅವರು ಸೂಚನೆ ನೀಡಿದ್ದಾರೆ.
ರಾಯಚೂರು ಲೋಕಾಯುಕ್ತ ವಿಭಾಗದ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ಕೆಲವು ಖಾಸಗಿ ವ್ಯಕ್ತಿಗಳು, ತಾವು ಲೋಕಾಯುಕ್ತ ಬಾತ್ಮೀದಾರ ಇಲ್ಲವೇ ಮಾಹಿತಿದಾರರೆಂದು ಹೇಳಿಕೊಂಡು ಸರ್ಕಾರಿ ಕಚೇರಿ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಪ್ರಶ್ನಿಸುವುದು, ಸರ್ಕಾರಿ ನೌಕರರ ಆಸ್ತಿ ಮತ್ತು ದಾತ್ವದ ವಿವರಗಳನ್ನು ಕೇಳುವುದು, ಇಲ್ಲವೇ ಸರ್ಕಾರಿ ನೌಕರರನ್ನು ಬೆದರಿಸುತ್ತಿರುವುದಾಗಿ ತಿಳಿದುಬಂದಿರುತ್ತದೆ. ಅಲ್ಲದೆ ಸರ್ಕಾರಿ ನೌಕರರ ಅಕ್ರಮ ಆಸ್ತಿ ಬಗೆಗಿನ ವಿವರಗಳನ್ನು ಕೊಟ್ಟಲ್ಲಿ ಲೋಕಾಯುಕ್ತ ಹಿರಿಯ ಅಧಿಕಾರಿಗಳಿಂದ ಬಹುಮಾನ ಅಥವಾ ನಗದು ರೂಪದ ಪುರಸ್ಕಾರ ಪಡೆದಿರುವುದಾಗಿಯೂ ಹೇಳಿಕೊಳ್ಳುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಕಚೇರಿಂದ ಸ್ಪಷ್ಟಪಡಿಸುವ ಅಂಶಗಳೆಂದರೆ, ಲೋಕಾಯುಕ್ತಕ್ಕೆ ಮಾಹಿತಿ ನೀಡಲು ಖಾಸಗಿ ವ್ಯಕ್ತಿಗಳನ್ನು ಜಿಲ್ಲಾ ಮಟ್ಟದ ಕಚೇರಿಂದಾಗಲಿ ಅಥವಾ ಲೋಕಾಯುಕ್ತ ಕೇಂದ್ರ ಕಚೇರಿ, ಬೆಂಗಳೂರಿನಿಂದಾಗಲಿ ನೇಮಕ ಮಾಡಿರುವುದಿಲ್ಲ. ಅಲ್ಲದೆ ಸರ್ಕಾರಿ ನೌಕರರ ಯಾವುದೇ ರೀತಿಯ ದುರ್ವರ್ತನೆಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಬಹುಮಾನ ಇಲ್ಲವೆ ನಗದು ಪುರಸ್ಕಾರ ನೀಡುವಂತಹ ಯಾವುದೇ ವ್ಯವಸ್ಥೆ ಇರುವುದಿಲ್ಲ. ಸರ್ಕಾರಿ ನೌಕರರ ಅಕ್ರಮಗಳ ಬಗ್ಗೆ ಹಾಗೂ ಅಕ್ರಮ ಆಸ್ತಿಗಳ ಬಗ್ಗೆ ಪತ್ತೆ ಹಚ್ಚಲು ಲೋಕಾಯುಕ್ತವು ತನ್ನದೇ ಆದ ರಹಸ್ಯ ಮಾ"ತಿ ಜಾಲವನ್ನು ಹೊಂದಿರುತ್ತದೆ.
ಆದುದರಿಂದ ಲೋಕಾಯುಕ್ತ ಬಾತ್ಮೀದಾರನೆಂದು ಅಥವಾ ಮಾ"ತಿದಾರರೆಂದು ವಂಚಿಸಲು ಯತ್ನಿಸುವವರ ವಿರುದ್ಧ ಯಾವುದೆ ಮಾಹಿತಿ ದೊರೆತಲ್ಲಿ ಕೂಡಲೆ ಲೋಕಾಯುಕ್ತ ಡಿಎಸ್‌ಪಿ, ಕೊಪ್ಪಳ- ೦೮೫೩೯-೨೨೦೨೦೦, ೨೨೦೫೩೩, ಅಥವಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು, ರಾಯಚೂರು- ೦೮೫೩೨-೨೨೩೫೭೯, ೨೨೩೫೯೨, ಮೊಬೈಲ್ ಸಂ: ೯೪೪೮೦ ೦೬೯೭೦, ೯೪೪೮೭ ೪೪೦೯೯, ೯೪೪೮೧ ೩೮೩೮೯ ಅಥವಾ ಮುಖ್ಯ ಕಚೇರಿ, ಬೆಂಗಳೂರು ೦೮೦- ೨೨೨೫೭೦೧೩ ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ. ಮಹಾಂತೇಶ್ ಹಾಗೂ ಕೊಪ್ಪಳದ ಲೋಕಾಯುಕ್ತ ಡಿ.ಎಸ್.ಪಿ ಕೆ.ಎಂ. ಯೂಸುಫ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.