ಕೊಪ್ಪಳ : ಕೊಪ್ಪಳಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಮೇ 2 ರಂದು ಉದ್ಘಾಟನೆಗೊಂಡಿದೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿದ್ದು ಕರ್ನಾಟಕ ಪತ್ರಕರ್ತರ ಸಂಘಕ್ಕೆ ಹೋಗಿರುವ ಅಲ್ಲಾವುದ್ದೀನ್ ಎಮ್ಮಿ,ರಾಮಮೂರ್ತಿ ನವಲಿ, ಶೇಖ್ ಮಹಬೂಬ್ ಪಟೇಲ್, ಹೆಚ್.ಮಲ್ಲಿಕಾರ್ಜುನ ,ಗಿರೀಶ ದಿವಾನಜಿ, ಶರಣಪ್ಪ ಕೊತಬಾಳ ಇನ್ನಿತರರನ್ನು
ಸಂಘದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸದರಿ ಉಚ್ಛಾಟನೆಯ ನಿರ್ಣಯವು ಸಭೆ ನಡೆಸದೆ ತೀರ್ಮಾಣ ಕೈಗೊಳ್ಳುವ ಬದಲು ಏಕಪಕ್ಷೀಯವಾಗಿ ಉಚ್ಛಾಟನೆ ಮಾಡಲಾಗಿದೆ ಎಂಬ ಅಸಮಾಧಾನ ಕಾರ್ಯನಿರ್ತ ಪತ್ರಕರ್ತರ ಸಂಘದ ಕೆಲ ಸದಸ್ಯರು ಅಸಮಾಧಾನ ತೋಡಿಕೊಂಡಿದ್ದಾರೆ.
ಆದರೆ ಈಗ ಮತ್ತೊಂದು ವಿವಾದ ಎದ್ದಿದ್ದು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಒಂದೊಂದು ಗುಂಪಿಗೆ
ಒಂದೊಂದು ನ್ಯಾಯವೇ? ಎಂಬ ಪ್ರಶ್ನೆ ಎದ್ದಿದೆ. ಸದ್ಯ ಸಂಘಕ್ಕೆ ಪ್ರಭಾರಿ ಅಧ್ಯಕ್ಷರೆಂದು ಹೇಳಿಕೊಳ್ಳುವ ಹೆಚ್.ಎಸ್.ಹರೀಶ್ ಕಳೆದ ಏಳು ತಿಂಗಳಿಂದ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಪರಿಷತ್ತಿನ ಪದಾಧಿಕಾರಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ಆಧಾರವಾಗಿ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಪರಿಷತ್ ನ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಲಭ್ಯವಾಗಿದ್ದು ಅದರಲ್ಲಿ ಪ್ರಭಾರಿ ಅಧ್ಯಕ್ಷ ಹರೀಶ್ ಪದಾಧಿಕಾರಿಯಾಗಿದ್ದೂ ಇತ್ತ ಕಾರ್ಯನಿರತ ಪತ್ರಕರ್ತರಸಂಘಕ್ಕೆ ಉಪಾಧ್ಯಕ್ಷರಾಗಿ ಈಗ ಪ್ರಭಾರಿ ಅಧ್ಯಕ್ಷರಾಗಿದ್ದುಕೊಮಡು ದ್ವಿಪಾತ್ರ ನಿರ್ವಹಿಸಿರುವ ಆಘಾತಕಾರಿ ಅಂಶ ಬಯಲಾಗಿದೆ. ಸತ್ಯ ಗೊತ್ತಿದ್ದೂ ಎಚ್.ಎಸ್.ಹರೀಶ್ ರನ್ನು ಪ್ರಭಾರಿಯನ್ನಾಗಿ ಮುಂದುವರೆಸಿರುವುದು ನೋಡಿದರೆ ಪತ್ರಕರ್ತರ ಸಂಘ ಕೆಲವರ ವಶದಲ್ಲಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
0 comments:
Post a Comment
Click to see the code!
To insert emoticon you must added at least one space before the code.