PLEASE LOGIN TO KANNADANET.COM FOR REGULAR NEWS-UPDATES



ಅಂಬೇಡ್ಕರ್ ಭಾರತ ಕಂಡ ದೇವರು

ಕೊಪ್ಪಳ : ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ ಜನ್ಮದಿನಾಚರಣೆಯನ್ನು ಇಂದು ದೇಶದಾದ್ಯಂತ ಆಚರಿಸಲಾಯಿತು. ಇದರ ಪ್ರಯುತ್ತ ನಗರದಲ್ಲಿ ವಿವಿದೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಕೊಪ್ಪಳ ನಗರದ ಜವಾಹರ ರಸ್ತೆಯಲ್ಲಿ ಬೆಳಿಗ್ಗೆ 10-30 ಗೆ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆಯ ಮೂಲಕ ತರಲಾಯಿತು. ಡಾ.ಬಿ.ಆರ್ ಅಂಬೇಡ್ಕರ್ ರವರು ಭಾರತ ದೇಶ ಕಂಡ ದೇವರು ಅವರು ನೀಡಿದ ಮೀಸಲಾತಿ ಆಧಾರಿತ ಸಾಮಾಜಿಕ ನ್ಯಾಯ ದಲಿತರಿಗೆ ಇನ್ನೂ ಸಿಕ್ಕಿಲ್ಲ. ತಾವು ದಲಿತರಿಗೆ ಸಿಗಬೇಕಾದ ಸೌಲಭ್ಯಗಳ ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುತ್ತೇನೆ ಮತ್ತು ತಾವು ಶಾಸಕರಾಗಿರುವುದು ಕೂಡ ಅಂಬೇಡ್ಕರ ರವರ ಮೀಸಲಾತಿ ನೀಡಿಕೆಯಿಂದಲೇ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವನಗೌಡ ನಾಯಕ ಹೇಳಿದರು. ಅವರು ಇಂದು ಕೊಪ್ಪಳ ಸಾಹಿತ್ಯ ಭವನದಲ್ಲಿ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ ಅಧ್ಯಕ್ಷ, ಉಪಾಧ್ಯಕ್ಷರು,ಶಾಸಕ ಕರಡಿ ಸಂಗಣ್ಣ ಸೇರಿದಂತೆ ಜನ ಪ್ರತಿನಿಧಿಗಳು, ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಿದ್ದರು.

ಕನಸಲೂ ನೀನೇ

ವರ್ಷದಿಂದ ವರ್ಷಕ್ಕೆ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮಗಳು ಗಂಭೀರತೆ ಕಳೆದುಕೊಳ್ಳುತ್ತಿರುವುದಕ್ಕೆ ಇಂದು ಕೊಪ್ಪಳದಲ್ಲಿ ನಡೆದ ಅಂಬೇಡ್ಕರ್ ರ ಭಾವಚಿತ್ರದ ಮೆರವಣಿಗೆ ಸಾಕ್ಷಿಯಾಯಿತು.

ಕೊಪ್ಪಳದ ತಹಶೀಲ ಕಚೇರಿಯಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗುವಾಗ ಮೆರವಣಿಗೆಯಲ್ಲಿದ್ದ ಸೌಂಡ್ ಸಿಸ್ಟಂನಲ್ಲಿ ಕನಸಲೂ ನೀನೆ... ಮನಸಲೂ ನೀನೆ... ಮತ್ತು ಆಕಾಶದಿಂದ ಧರೆಗಿಳಿದ ರಂಭೆ.ಯಂತಹ ರೋಮ್ಯಾಂಟಿಕ್ ಸಿನೆಮಾ, ಹಾಡುಗಳು ಕಿವಿಗಡಚಿಕ್ಕುವಂತೆ ಕೇಳಿಸುತ್ತಿದ್ದವು.

ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ,ಶಾಸಕರು, ಜಿ.ಪಂ. ಅಧ್ಯಕ್ಷರು ಸೇರಿದಂ ತೆ ಜನಪ್ರತಿನಿಧಿಗಳು ಇಂತಹ ಅಭಾಸವನ್ನು ನೋಡಿಯೂ ಸುಮ್ಮನಿದ್ದುದ್ದು ಅಂಬೇಡ್ಕರ್ ಜಯಂತಿ ಆಚರಣೆ ಅರ್ಥ ಕಳೆದುಕೊಳ್ಳುತ್ತಿರುವುದುನ್ನು ಸಾಂಕೇತಿಸುತ್ತಿತ್ತು.

ಕೊಪ್ಪಳದಲ್ಲಿ ಬೆಳಿಗ್ಗೆ 8ಕ್ಕೆ ಬೆವರಿಳಿಸುವ ಬೇಸಿಗೆ ಬಿಸಿಲಿನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿರಕಾರಿ ಸೂಟ್ ತೊಟ್ಟು ನಾಗರಿಕ ಅಚ್ಚರಿಗೆ ಕಾರಣರಾದರು.

14 Apr 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top