ಕೊಪ್ಪಳ : ಕೊಪ್ಪಳ ಜಿಲ್ಲೆಯ 130 ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸುವ ಮೂಲಕ ಚಾಲನೆ ನೀಡಿದ್ದಾರೆ. ಜಿಲ್ಲೆಯ ಒಟ್ಟು 130 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ಏ.26 ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. 27 ನಾಮಪತ್ರ ಪರಿಶೀಲನೆ , ನಾಮಪತ್ರ ಹಿಂದಕ್ಕೆ ಪಡೆಯಲು ಏ29 ಕೊನೆಯ ದಿನ ಮತ್ತು ಮತದಾನವು ಮೇ 8 ರಂ ದುಬೆಳಿಗ್ಗೆ 7 ರಿಂ ದಸಂಜೆ 6 ಗಂಟೆಯವರೆಗ ನಡೆಯಲಿದೆ. ಮೇ. 17 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 675353 ಮತದಾರರಿದ್ದು ಪುರುಷರು 33804 ಮತ್ತು ಮಹಿಳೆಯರು 337310 ಇದ್ದಾರೆ. ಒಟ್ಟು ಮತದಾನ ಕೇಂದ್ರಗಳ ಸಂಖ್ಯೆ 790 ಹಾಗೂ 874 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತದಾನ ಕಾರ್ಯಕ್ಕಾಗಿ ಒಟ್ಟು 4370 ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೊದಲ ದಿನ ಒಟ್ಟು 45 ನಾಮಪತ್ರಗಳು ಸಲ್ಲಿಕೆಯಾಗಿವೆ. ಕೊಪ್ಪಳ ತಾಲೂಕಿನ 35 ಗ್ರಾ.ಪಂಗಳ ಪೈಕಿ 24ರಲ್ಲಿ , ಗಂಗಾವತಿಯಲ್ಲಿ 2, ಯಲಬುರ್ಗಾದಲ್ಲಿ 5 ಹಾಗೂ ಕುಷ್ಟಗಿಯಲ್ಲಿ 4 ನಾಮಪತ್ರಗಳು ಸಲ್ಲಿಕೆಯಾಗಿವೆ,
ಪ್ರತಿಯೊಂದು ಗ್ರಾಮದಲ್ಲಿಯೂ ಚುನಾವಣೆಯ ಬಿಸಿ ಏರುತ್ತಿದ್ದು ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ.
0 comments:
Post a Comment
Click to see the code!
To insert emoticon you must added at least one space before the code.