ಜ.16: ಕೊಪ್ಪಳ ಜಿಲ್ಲಾ ಪಂಚಾಯತಿಯ ಕನಕಗಿರಿ-19 ಕ್ಷೇತ್ರ ಹಾಗೂ ಕುಷ್ಟಗಿ ತಾಲೂಕು ಪಂಚಾಯತಿಯ ಯರಗೇರಾ-6 ಕ್ಷೇತ್ರದಲ್ಲಿ ತಲಾ ಒಂದು ಸದಸ್ಯ ಸ್ಥಾನ ತೆರವಾಗಿರುವುದರಿಂದ, ಇದೀಗ ಉಪ ಚುನಾವಣಾ ನಡೆಸುವ ಸಲುವಾಗಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಅಧಿಸೂಚನೆ ಹೊರಡಿಸಿದ್ದಾರೆ. ವೇಳಾಪಟ್ಟಿಯನ್ವಯ ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ಜ. 13. ನಾಮಪತ್ರ ಸಲ್ಲಿಸಲು ಜ. 20 ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳನ್ನು ಜ. 21 ರಂದು ಪರಿಶೀಲನೆ ನಡೆಸಲಾಗುವುದು. ಉಮೇದುವಾರಿಕೆ ಹಿಂಪಡೆಯಲು ಜ. 23 ಕೊನೆಯ ದಿನಾಂಕವಾಗಿರುತ್ತದೆ. ಮತದಾನದ ಅವಶ್ಯವಿದ್ದರೆ ಫೆ. 01 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆ ಫೆ. 04 ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯನ್ನು ಫೆ. 05 ರೊಳಗಾಗಿ ಪೂರ್ಣಗೊಳಿಸಲಾಗುವುದು. ಚುನಾವನೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಜ. 13 ರಿಂದ ಫೆ. 05 ರವರೆಗೆ ಜಾರಿಯಲ್ಲಿರುತ್ತದೆ. ಜಿಲ್ಲಾ ಪಂಚಾಯತಿಯ ಕನಕಗಿರಿ-19 ಕ್ಷೇತ್ರ ಹಾಗೂ ಕುಷ್ಟಗಿ ತಾಲೂಕು ಪಂಚಾಯತಿಯ ಯರಗೇರಾ-6 ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Home
»
»Unlabelled
» ಜಿ.ಪಂ./ತಾ.ಪಂ. ಉಪಚುನಾವಣೆ : ವೇಳಾಪಟ್ಟಿ ಮತ್ತು ಮೀಸಲಾತಿ ಪ್ರಕಟ
Subscribe to:
Post Comments (Atom)
0 comments:
Post a Comment