PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೧೬ (ಕ ವಾ) ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದ ಬಸಪ್ಪ ತಂದೆ ಬಾಲದಂಡಪ್ಪ ಪೂಜಾರ (೪೫) ಎಂಬ ವ್ಯಕ್ತಿ ಕೂಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದು, ಈ ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ ಕುಕನೂರು ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ವ್ಯಕ್ತಿಯು ಕಳೆದ ೨೦೧೫ರ ಜು.೧೨ ರಂದು ಬೆಳಿಗ್ಗೆ ೦೮ ಗಂಟೆಗೆ ಚಿಕ್ಕೇನಕೊಪ್ಪ ಗ್ರಾಮದ ತನ್ನ ಮನೆಯಿಂದ ಕುಕನೂರಿಗೆ ಕೂಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ವಾಪಸ್ ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿದ್ದಾನೆ. ಕಾಣೆಯಾದ ವ್ಯಕ್ತಿಯ ವಿವರ ಇಂತಿದೆ: ಹೆಸರು: ಬಸಪ್ಪ ತಂದೆ ಬಾಲದಂಡಪ್ಪ ಪೂಜಾರ, ವಯಸ್ಸು: ೪೫, ಜಾತಿ: ತಳವಾರ(ಎಸ್.ಟಿ), ಉದ್ಯೋಗ: ಕೂಲಿ, ಸಾ||ಚಿಕ್ಕೇನ ಕೊಪ್ಪ, ತಾ||ಯಲಬುರ್ಗಾ, ಜಿ||ಕೊಪ್ಪಳ, ಎತ್ತರ: ೫ ಫೀಟು ೦೫ ಇಂಚು, ವಿದ್ಯಾರ್ಹತೆ: ಇಲ್ಲ, ಕನ್ನಡ ಭಾಷೆ ಮಾತನಾಡುತ್ತಾರೆ. ಆದರೆ ಓದಲು ಬರೆಯಲು ಬರುವುದಿಲ್ಲ. ಸಾಧಾರಣ ಮೈಕಟ್ಟು, ಉದ್ದ ಮುಖ, ದಪ್ಪ ಮೀಸೆ, ಕಪ್ಪು-ಬಿಳಿ ಮಿಶ್ರಿತ ಗಡ್ಡ ಮೀಸೆ, ಏರಾದ ಹಣೆ, ತಲೆಯಲ್ಲಿ ೩ ಇಂಚು ಬಿಳಿ ಕೂದಲು, ಮನೆಯಿಂದ ಹೊರಡುವಾಗ ಬಿಳಿ ಧೋತಿ ಮತ್ತು ಶರ್ಟ್, ಕೊರಳಿಗೆ ಟಾವಲ್ ಹಾಕಿರುತ್ತಾನೆ.ಈ ಚಹರೆಯುಳ್ಳ ವ್ಯಕ್ತಿಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಅಥವಾ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ದೂರವಾಣಿ ಸಂಖ್ಯೆ: ೦೮೫೩೯-೨೩೦೧೧೧, ಕೊಪ್ಪಳ ಡಿ.ಎಸ್.ಪಿ ಅವರ ದೂರವಾಣಿ ಸಂಖ್ಯೆ: ೦೮೫೩೯-೨೩೦೪೩೨, ಯಲಬುರ್ಗಾ ಸಿ.ಪಿ.ಐ ಅವರ ದೂರವಾಣಿ ಸಂಖ್ಯೆ: ೦೮೫೩೪-೨೨೦೧೩೩, ಕುಕನೂರು ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: ೦೮೫೩೪-೨೩೦೪೩೮, ಮೊ:೯೪೮೦೮೦೩೭೫೦ ಇವರಿಗೆ ಮಾಹಿತಿ ನೀಡುವಂತೆ ಕುಕನೂರು ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

Advertisement

0 comments:

Post a Comment

 
Top