ಕೊಪ್ಪಳ-
ದೂರದ ಬೆಂಗಳೂರು ಬಿಟ್ಟು ಬಿಸಿಲನಾಡು ಕೊಪ್ಪಳ ಜಿಲ್ಲೆಗೆ ಆಗಮಿಸಿದ ದನಕಾಯೋನು ಚಿತ್ರತಂಡ ಶನಿವಾರ ತಾಲೂಕಿನ ಇಂದರಗಿ ಗ್ರಾಮದಲ್ಲಿ ಚಿತ್ರೀಕರಣ ಆರಂಭಿಸಿತ್ತು. ನಾಯಕ ದುನಿಯಾ ವಿಜಯ್, ನಾಯಕಿ ಪ್ರಿಯಾಮಣಿಯನ್ನು ಕಣ್ತುಂಬಿಕೊಳ್ಳಲು ಸಿಕ್ಕ ಸಿಕ್ಕ ಮನೆಯ ಮಹಡಿ ಮೇಲೆ ಏರಿ ಕುಳಿತ ಗ್ರಾಮಸ್ಥರು ಮೆಚ್ಚಿನ ನಟರನ್ನ ನೋಡಿ ಸಂಭ್ರಮಿಸಿದರು. ಆದರೆ ಆ ಸಂಭ್ರಮ ಬಹಳ ಹೊತ್ತಿನವರೆಗೆ ಉಳಿಯಲಿಲ್ಲ. ಕ್ಷುಲ್ಲಕ ಕಾರಣಕ್ಕೆ ಚಿತ್ರತಂಡ ಊರನ್ನ, ಊರ ಜನರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಚಿತ್ರೀಕರಣಕ್ಕೆ ಅಡ್ಡಿಪಡಿಸಿದರು. ಜುಲೈ ೨೯ ರಿಂದ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರದಲ್ಲಿ ಚಿತ್ರೀಕರಣ ಆರಂಭಿಸಿದ ದನ ಕಾಯೋನು ಸಿನಿಮಾ ತಂಡ ಶನಿವಾರ ಬೆಳಿಗ್ಗೆ ತಾಲೂಕಿನ ಇಂದರಗಿಯಲ್ಲಿ ಬೀಡುಬಿಟ್ಟಿತು. ಶೂಟಿಂಗ್‌ಗಾಗಿ ಗ್ರಾಮದ ಮನೆಯೊಂದರ ಮಾಲಕರ ಪರವಾನಿಗೆ ಪಡೆದು ಮಹಡಿ ಮೇಲೆ ಚಿತ್ರೀಕರಣ ಮಾಡಲಾಗುತ್ತಿತ್ತು. ಈಗಾಗಲೇ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ದುನಿಯಾ ವಿಜಯ್, ಪ್ರಿಯಾಮಣಿ, ಸುಚೇಂದ್ರಪ್ರಸಾದ್, ರಂಗಾಯಣ ರಘು, ಬಿರಾದಾರ್ ಹಾಗೂ ವೀಣಾಸುಂದರ್ ಮನೆಯವರೆಗೆ ಬಂದಿದ್ದರಿಂದ ಸಂತೋಷಗೊಂಡ ಮನೆಯವರು ಚಿತ್ರೀಕರಣಕ್ಕೆ ಸಮ್ಮತಿಸಿದ್ದರು. ಯಾವುದೇ ಅಡೆತಡೆ ಇಲ್ಲದೇ ಚಿತ್ರೀಕರಣವೇನೋ ಆರಂಭಗೊಂಡಿತು. ಮಧ್ಯಾಹ್ನ ೨ ಗಂಟೆಯವರೆಗೆ ಎಲ್ಲವೂ ಸುಸೂತ್ರವಾಗಿಯೇ ಇತ್ತು. ಆದರೆ ಮಧ್ಯಾಹ್ನದ ನಂತರ ಚಿತ್ರೀಕರಣಕ್ಕೆ ಮನೆಯ ಸಹಕಾರ ಕೊಟ್ಟಿದ್ದವರ ಕುಟುಂಬದವನೊಬ್ಬ ಮಹಡಿ ಹತ್ತುವಾಗ ಚಿತ್ರತಂಡದ ಕೆಲ ಹುಡುಗರು ತೀರಾ ಅಸಭ್ಯವಾಗಿ ನಡೆದುಕೊಂಡರು. ಪಕ್ಕದಲ್ಲೇ ಇದ್ದ ಯೋಗರಾಜ್‌ಭಟ್ ಸೌಜನ್ಯಕ್ಕೂ ಆ ಬಗ್ಗೆ ಗಮನ ಹರಿಸಲಿಲ್ಲ. ಇದನ್ನು ಕಂಡ ಗ್ರಾಮಸ್ಥರು ರೀ ಅವರು ಶೂಟಿಂಗ್ ನಡೆಸುತ್ತಿರುವ ಮನೆಯವರು ಅವರನ್ನ ಬಿಡ್ರಿ ಎಂದು ಕೂಗಿದರು. ಚಿತ್ರತಂಡದ ಒಬ್ಬ ಯಾರಾದ್ರೇನ್ರಿ? ನಾವೇನೂ ಪುಕ್ಸಟ್ಟೆ ಶೂಟಿಂಗ್ ಮಾಡಲ್ಲ, ಹೋಗ್ಬೇಕಾದ್ರೆ ದುಡ್ಡು ಕೊಡ್ತಿವಿ. ಮುಚ್ಕೊಂಡ್ ಇರ್ರಿ. ಏನ್ ದರಿದ್ರ ಜನಾನೋ, ಬರಗೆಟ್ಟ ಊರೋ ಎಂದು ಗೊಣಗಿದ. ಅಲ್ಲಿಯವರೆಗೆ ಸುಮ್ಮನಿದ್ದ ಗ್ರಾಮಸ್ಥರು, ಊರನ್ನ, ಊರ ಜನರನ್ನ ಕನಿಷ್ಠವಾಗಿ ಕಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಏನೋ ದೂರದ ಬೆಂಗಳೂರಿನಿಂದ ಬಂದಿದ್ದಿರಿ. ಸಿನಿಮಾ ಶೂಟಿಂಗ್ ಮಾಡುತ್ತಿದ್ದಿರಿ ಎಂದು ಸಹಕರಿಸಿದರೆ, ದುಡ್ಡಿನಿಂದ ಅಳೆಯುತ್ತಿರಾ? ನಾವು ಅಭಿಮಾನಕ್ಕೆ, ಪ್ರೀತಿಗೆ ಬೆಲೆ ಕೊಡ್ತಿವಿ, ದುಡ್ಡಿಗಲ್ಲ. ನೀವು ನಮ್ಮೂರಲ್ಲಿ ಶೂಟಿಂಗ್ ಮಾಡುವ ಅಗತ್ಯವಿಲ್ಲ ಎಂದು ಕ್ಯಾತೆ ತೆಗೆದರು. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ನಿರ್ದೇಶಕ, ಗ್ರಾಮಸ್ಥರೊಂದಿಗೆ ವಿನಯದಿಂದ ಮಾತನಾಡಿದ್ದರೆ ಬಹುಶಃ ಸಮಸ್ಯೆ ದೊಡ್ಡದಾಗುತ್ತಿದ್ದಿಲ್ಲ. ರೀ ಪೊಲೀಸ್ರೇ ಒದ್ದೋಡಸ್ರಿ ಎಂದು ಹೇಳಿ, ಕಲಾವಿದರಿಗೆ ದೃಶ್ಯ ವಿವರಣೆ ನೀಡುವಲ್ಲಿ ಮಗ್ನರಾದರು. ಸುಮಾರು ಎರಡೂವರೆ ಸಾವಿರದಷ್ಟಿದ್ದ ಜನರನ್ನ ಕೇವಲ ೨೦ ಜನ ಪೊಲೀಸರು ಮೊದಮೊದಲು ನಿಯಂತ್ರಿಸಲು ಪ್ರಯತ್ನಿಸಿದರು. ಜನ ತಿರುಗಿಬೀಳುತ್ತಿದ್ದಂತೆ ಪೊಲೀಸರು ವಿನಯಪೂರ್ವಕವಾಗಿ ಹೇಳಿದರು. ಕೊನೆಗೆ ನಾಯಕ ನಟ ದುನಿಯಾ ವಿಜಯ್ ಗ್ರಾಮಸ್ಥರನ್ನು ಉದ್ದೇಶಿಸಿ, ಚಿತ್ರತಂಡದ ಯಾರಾದರೂ ನಿಮ್ಮ ಮನಸ್ಸಿಗೆ ನೋವಾಗುವ ಹಾಗೆ ಮಾತಾನಾಡಿದ್ದರೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ನಾವೆಲ್ಲ ಇರೋದು ನಿಮ್ಮಿಂದಲೇ. ದಯವಿಟ್ಟು ಶೂಟಿಂಗ್ ಸಹಕಾರ ಮಾಡಿ. ಇಲ್ಲದಿದ್ದರೆ ಕೋಟಿಗಟ್ಟಲೇ ಬಂಡವಾಳ ಹಾಕಿರುವ ನಿರ್ಮಾಪಕರಿಗೆ ಕಷ್ಟವಾಗುತ್ತೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಕೈ ಮುಗಿದರು. ನಟ ರಂಗಾಯಣ ರಘು ಸಹ ದುನಿಯಾ ವಿಜಯ್ ಮಾತಿಗೆ ದನಿಗೂಡಿದರು. ನಾಯಕಿ ಪ್ರಿಯಾಮಣಿ ಮಾತ್ರ ಇದು ನನಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಕೈ ಕಟ್ಟಿ ನಿಂತುಕೊಂಡಿದ್ದರು. ಕೊನೆಗೆ ದುನಿಯಾ ವಿಜಯ್ ಮನವಿ ಮಾಡುತ್ತಿದ್ದಂತೆ ಕೇಕೆ ಹಾಕಿದ ಜನ, ಚಿತ್ರೀಕರಣಕ್ಕೆ ಸಹಕರಿಸಿದರು. ದನಕಾಯೋನು ಚಿತ್ರತಂಡ ಗ್ರಾಮಸ್ಥರೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದಲೋ ಏನೋ ಮಧ್ಯಾಹ್ನ ಶೂಟಿಂಗ್‌ಗೆ ಮಳೆ ಅಡ್ಡಿಯಾಗಿ ಪ್ಯಾಕಪ್ ಹೇಳಲಾಯಿತು.

0 comments:
Post a Comment