PLEASE LOGIN TO KANNADANET.COM FOR REGULAR NEWS-UPDATES

 ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತದಾರರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿಯಿಂದ ಜಿಲ್ಲೆಯಲ್ಲಿ ಮತದಾರರ ಸಹಿ ಸಂಗ್ರಹ ಅಭಿಯಾನವನ್ನು ಏ. ೧೪ ರಂದು ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಮ್ಮಿಕೊಂಡಿದೆ.
  ಚುನಾವಣೆಯಲ್ಲಿ ಮತ ಚಲಾವಣೆ ಪ್ರತಿಯೊಬ್ಬ ಮತದಾರರ ಕರ್ತವ್ಯವಾಗಿದ್ದು, ಭಾರತದ ಸಂವಿಧಾನ ಮತದಾನದ ಹಕ್ಕನ್ನು ಎಲ್ಲ ಪ್ರಜೆಗಳಿಗೆ ಕಲ್ಪಿಸಿದ್ದು, ಕಡ್ಡಾಯ ಮತದಾನದ ಪ್ರತಿಜ್ಞೆ ಸ್ವೀಕರಿಸುವ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನವಾದ ಏ. ೧೪  ರಂದು ಜಿಲ್ಲೆಯಲ್ಲಿ ಮತದಾರರ ಸಹಿ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಈ ಮೂಲಕ ಡಾ. ಅಂಬೇಡ್ಕರ್ ಜಯಂತಿ ಆಚರಣೆ ಅರ್ಥಪೂರ್ಣವಾಗಲಿದೆ.  ಏ. ೧೪ ರಂದು ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದ ಹತ್ತಿರ ಒಂದು ಬೃಹತ್ ಫಲಕದಲ್ಲಿ ಮತದಾರರ ಸಹಿ ಸಂಗ್ರಹಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.  ಅದೇ ರೀತಿ ಗಂಗಾವತಿಯ ಬಸ್‌ಸ್ಟ್ಯಾಂಡ್ ಎದುರುಗಡೆಯ ಉದ್ಯಾನವನದ ಬಳಿ.  ಕುಷ್ಟಗಿಯ ಬಸವೇಶ್ವರ ಸರ್ಕಲ್ ಬಳಿ ಹಾಗೂ ಯಲಬುರ್ಗಾದ ರಾಣಿ ಚನ್ನಮ್ಮ ಸರ್ಕಲ್ ಹತ್ತಿರ ಫಲಕವನ್ನು ಇರಿಸಿ, ಸಹಿ ಸಂಗ್ರಹಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 
  ಈ ಮಹತ್ವದ ಸಹಿ ಸಂಗ್ರಹ ಅಭಿಯಾನದಲ್ಲಿ ಎಲ್ಲ ಮತದಾರರು, ಸಾರ್ವಜನಿಕರು, ಮಾಧ್ಯಮದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top